ETV Bharat / state

ಹೆಚ್​ಡಿಕೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಹೊರಟ್ಟಿ!

ನಿನ್ನೆ ನಮ್ಮೆಲ್ಲಾ ಪಕ್ಷದ ಸದಸ್ಯರು ಸಭೆ ಮಾಡಿದ್ದೇವೆ. ಮುಂದೇನು ಮಾಡಬೇಕು ಎಂಬ ಕುರಿತು ಚರ್ಚಿಸಿದ್ದೇವೆ. ಮತ್ತೆ ಸೋಮವಾರ ಸಭೆ ಕರೆದಿದ್ದೇವೆ. ಅಂದು ಮುಂದಿನ‌ ನಡೆ ಬಗ್ಗೆ ಮಾತುಕತೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಹೆಚ್​ಡಿಕೆ ವಿರುದ್ಧ ಅಸಮಾಧಾನ ಹೊರಹಾಕಿದ ಹೊರಟ್ಟಿ
author img

By

Published : Oct 12, 2019, 6:49 PM IST

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಮೇಲ್ಮನೆ ಸದಸ್ಯ ಬಸವರಾಜ್ ಹೊರಟ್ಟಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಇದ್ದಾಗ ಇದ್ದ ಕಾಳಜಿ ಕುಮಾರಸ್ವಾಮಿಯವರಿಗೆ ಈಗಿಲ್ಲ. ನಮ್ಮ ಸಮಸ್ಯೆ ಕೇಳುವವರು ಕೂಡ ಯಾರಾ ಇಲ್ಲ. ವರಿಷ್ಠರು ಕೂಡ ನಮ್ಮ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದು ಬೇಸರ ತೋಡಿಕೊಂಡರು.

ಈ ಬಗ್ಗೆ ನಿನ್ನೆ ನಮ್ಮೆಲ್ಲಾ ಪಕ್ಷದ ಸದಸ್ಯರು ಸಭೆ ಮಾಡಿದ್ದೇವೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚೆ ‌ನಡೆಸಿದ್ದೇವೆ. ಮತ್ತೆ ಸೋಮವಾರ ಸಭೆ ಕರೆದಿದ್ದೇವೆ. ಅಂದು ಮುಂದಿನ‌ ನಡೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದ ಅವರು, ಸದ್ಯಕ್ಕೆ ಪಕ್ಷ ಬಿಡುವ ಬಗ್ಗೆ ಆಲೋಚನೆ ಮಾಡಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಇದೇ ರೀತಿ ವರ್ತಿಸಿದ್ರೆ ಕಷ್ಟ ಎಂದು ಜೆಡಿಎಸ್​​ನ ವರಿಷ್ಠರಿಗೆ ಬಸವರಾಜ ಹೊರಟ್ಟಿ ಎಚ್ಚರಿಕೆ ಕೊಟ್ಟಿದ್ದಾರೆ.

ಹೆಚ್​ಡಿಕೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಹೊರಟ್ಟಿ

'ಸರ್ಕಾರದ ಉತ್ತರ ತೃಪ್ತಿ ತಂದಿದೆ'
ಬರ ಸಂಬಂಧ ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿಯವರು ಉತ್ತರ ಕೊಟ್ಟಿದ್ದಾರೆ. ನೆರೆ ಕುರಿತು ಸರ್ಕಾರ ನೀಡಿದ ಉತ್ತರ ತೃಪ್ತಿ ತಂದಿದೆ. ಸರ್ಕಾರ ಕೂಡ ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ಮಾಡಿದೆ. ಆದರೆ, ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವ ಬಗ್ಗೆ ಅವರು ಹೇಳಿಲ್ಲ ಎಂದರು.

ರಾಜಕಾರಣಿಗಳ ಪಿಎಗಳು ಎಚ್ಚರದಿಂದ ಇರಬೇಕು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿಪಶು ಆಗುವಂತಾಯಿತು. ಇದಕ್ಕೆ ಉದಾಹರಣೆ ರಮೇಶ್‌ ಆತ್ಮಹತ್ಯೆ. ಹೀಗಾಗಿ ಮುಂದೆಯಾದರೂ ಪಿಎ, ಪಿಎಸ್​ಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದರು.

Intro:Body:KN_BNG_03_BASAVARJHORATTI_BYTE_SCRIPT_7201951

ಎಚ್ ಡಿಕೆ ವಿರುದ್ಧ ಅಸಮಾಧಾನ ಹೊರಹಾಕಿದ ಹೊರಟ್ಟಿ!

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಮೇಲೆ ಕುಮಾರಸ್ವಾಮಿಗೆ ಸರ್ಕಾರ ಇದ್ದಾಗ ಇದ್ದ ಕಾಳಜಿ ಇವಾಗ ಇಲ್ಲ. ನಮ್ಮ ಸಮಸ್ಯೆ ಕೇಳುವವರು ಕೂಡ ಯಾರು ಇಲ್ಲ. ವರಿಷ್ಠರು ಕೂಡ ನಮ್ಮ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕಿಡಿ ಕಾರಿದರು.

ಈ ಬಗ್ಗೆ ನಿನ್ನೆ ನಮ್ಮೆಲ್ಲಾ ಪಕ್ಷದ ಸದಸ್ಯರು ಒಂದು ಸಭೆ ಮಾಡಿದ್ದೇವೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ‌ನಡೆಸಿದ್ದೇವೆ. ಮತ್ತೆ ಸೋಮವಾರ ಸಭೆ ಕರೆದಿದ್ದೇವೆ. ಅಂದು ಮುಂದಿನ‌ ನಡೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ ಪಕ್ಷ ಬಿಡುವ ಬಗ್ಗೆ ಆಲೋಚನೆ ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದೆ ರೀತಿ ವರ್ತನೆ ಆದರೆ ಕಷ್ಟ. ಮುಂದೆ ತಮ್ಮ ದಾರಿ ತಾವು ನೋಡಿಕೊಳ್ಳುವ ಬಗ್ಗೆ ಚರ್ಚಿಸಿದ್ದೇವೆ ಎಂದು ಜೆಡಿಎಸ್ ನ ವರಿಷ್ಠರಿಗೆ ಬಸವರಾಜ್ ಹೊರಟ್ಟಿ ಎಚ್ಚರಿಕೆ ಕೊಟ್ಟರು.

ನೆರೆ ಸಂಬಂಧ ಸರ್ಕಾರದ ಉತ್ತರ ತೃಪ್ತಿ ತಂದಿದೆ:

ನೆರೆ ಕುರಿತು ಸರ್ಕಾರದ ಉತ್ತರ ತೃಪ್ತಿ ತಂದಿದೆ ಎಂದು ಇದೇ ವೇಳೆ ತಿಳಿಸಿದರು. ಶೇ. 70 ರಷ್ಟು ಅವರು ಪರಿಹಾರ ಕಾರ್ಯದ ಬಗ್ಗೆ ಉತ್ತರ ಕೊಟ್ಟಿದ್ದಾರೆ. ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗ ಅವರು ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಸರ್ಕಾರ ಕೂಡ ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ಮಾಡಿದೆ. ಆದರೆ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಬಗ್ಗೆ ಅವರು ಹೇಳಿಲ್ಲ. ಅದಕ್ಕಾಗಿ ಕಾಂಗ್ರೆಸ್ ನವರು ಧರಣಿ ಮಾಡಿದರು. ಆದರೆ ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಅವರು ಉತ್ತರ ಕೊಟ್ಟಿದ್ದರು. ಹೀಗಾಗಿ ನಾವು ಸದನದಲ್ಲಿ ಹೋರಾಟ ಮಾಡಿಲ್ಲ ಎಂದು ವಿವರಿಸಿದರು.

ಪಿಎಗಳು, ಪಿಎಸ್ ಗಳು ಎಚ್ಚರಿಕೆಯಿಂದಿರಿ:

ಮಾಜಿ ಡಿಸಿಎಂ ಪರಮೇಶ್ವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ರಾಜಕಾರಣಿಗಳ ಪಿಎಗಳು, ಪಿಎಸ್ ಗಳು ಎಚ್ಚರಿಕೆಯಿಂದ ಇರಬೇಕು‌ ಎಂದು ತಿಳಿಸಿದರು.

ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ ಪಶು ಆಗುವಂತಾಯಿತು. ಇದಕ್ಕೆ ಉದಾಹರಣೆ ಈ ರಮೇಶ್‌ ಆತ್ಮಹತ್ಯೆ. ಹೀಗಾಗಿ ಮುಂದೆ ಆದರೂ ಪಿಎ, ಪಿಎಸ್ ಗಳು ಎಚ್ಚರಿಕೆಯಿಂದ ಇರಬೇಕು ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.