ETV Bharat / state

ಶಾಲಾ ಪಠ್ಯದಲ್ಲಿ ಪುನೀತ್ ವಿಷಯ ಸೇರ್ಪಡೆಗೆ ಹಂತ ಹಂತವಾಗಿ ಕ್ರಮ: ಸಿಎಂ ಬೊಮ್ಮಾಯಿ‌ - ಈಟಿವಿ ಭಾರತ ಕನ್ನಡ

ಶಾಲಾ ಪಠ್ಯದಲ್ಲಿ ಪುನೀತ್ ರಾಜ್‌ಕುಮಾರ್ ಸಾಧನೆ, ಪ್ರೇರಣೆ ಕುರಿತ ಮಾಹಿತಿ ಸೇರಿಸಬೇಕು ಎನ್ನುವ ಮನವಿಗಳು ಬಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

Etv Bharat
ಬಸವರಾಜ ಬೊಮ್ಮಾಯಿ‌
author img

By

Published : Nov 1, 2022, 10:54 AM IST

Updated : Nov 1, 2022, 11:05 AM IST

ಬೆಂಗಳೂರು: ಕನ್ನಡ ರಾಜ್ಯೋತ್ಸವದಂದೇ ಪುನೀತ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕೆಂಬುದು‌‌ ನಮ್ಮ ಇಚ್ಛೆ ಆಗಿತ್ತು. ಅದರಂತೆ ಇಂದೇ ಪ್ರಶಸ್ತಿ ಪ್ರದಾನಿಸುತ್ತಿದ್ದೇವೆ. ಅವರ ಕುರಿತ ವಿಷಯವನ್ನು ಪಠ್ಯದಲ್ಲಿ ಸೇರಿಸುವ ಕುರಿತು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಆರ್‌ಟಿ ನಗರ ನಿವಾಸದಲ್ಲಿ ಮಾತನಾಡಿದ ಅವರು, ನಾಡಿನ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದರು. ಅತ್ಯಂತ ಸಂಭ್ರಮದಿಂದ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಇದು ಕೇವಲ‌ ಆಚರಣೆಯಾಗಿ ಉಳಿಯೋದಿಲ್ಲ, ಬದುಕಿನ ಪ್ರತೀ ಕ್ಷಣದಲ್ಲೂ ಕನ್ನಡದ ಡಿಂಡಿಮ ಬಾರಿಸುತ್ತಿದೆ. ಶಿಕ್ಷಣ, ಉದ್ಯೋಗ, ಎಲ್ಲ ರಂಗಗಳಲ್ಲೂ ರಾಜ್ಯ ಮುಂದೆ ಬರಲು ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಅದರ ಹೆಚ್ಚಿನ ಲಾಭವನ್ನು ಕನ್ನಡಿಗರು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

ಶಾಲಾ ಪಠ್ಯದಲ್ಲಿ ಪುನೀತ್ ವಿಷಯ ಸೇರ್ಪಡೆಗೆ ಹಂತ ಹಂತವಾಗಿ ಕ್ರಮ

ಇವತ್ತಿನ‌ ಕರ್ನಾಟಕ ರಾಜ್ಯೋತ್ಸವದ ವಿಶೇಷವೇ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಿರುವುದು. ನವೆಂಬರ್ 1 ರಂದು ಅವರಿಗೆ ಪ್ರಶಸ್ತಿ ಕೊಡಬೇಕೆಂಬುದು‌‌ ನಮ್ಮ ಇಚ್ಛೆ ಆಗಿತ್ತು. ಅವರು, ಕನ್ನಡದ ನೆಲದಲ್ಲಿ ಹತ್ತು ಹಲವು ಪರೋಪಕಾರ ಕೆಲಸವನ್ನು ಮಾಡಿದಾರೆ. ಎಷ್ಟರ ಮಟ್ಟಿಗೆ ಅಂದರೆ ತಮ್ಮ ಅಂಗಾಂಗಗಳ ದಾನ ಮಾಡಿ ಮಾದರಿಯಾಗಿದ್ದಾರೆ. ಅವರು ತೀರಿ ಹೋದ ಮೇಲೆ ಹಲವರು ಕಣ್ಣು ದಾನ ಮಾಡುತ್ತಿದಾರೆ. ಪುನೀತ್ ಸಣ್ಣ ವಯಸ್ಸಲ್ಲೇ ಪ್ರೇರಣಾದಾಯಕ ಸಾಧನೆ ಮಾಡಿದರು ಎಂದು ಗುಣಗಾನ ಮಾಡಿದರು.

ಶಾಲಾ ಪಠ್ಯದಲ್ಲಿ ಪುನೀತ್ ರಾಜ್‌ಕುಮಾರ್ ಸಾಧನೆ, ಪ್ರೇರಣೆ ಕುರಿತ ಮಾಹಿತಿ ಸೇರಿಸಬೇಕು ಎನ್ನುವ ಮನವಿಗಳು ಬಂದಿವೆ. ಪಠ್ಯ ಸೇರ್ಪಡೆ ವಿಚಾರ ಸಂಬಂಧ ಹಂತಹಂತವಾಗಿ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತದೆ. ಏನೆಲ್ಲ‌ ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ ಎಂದರು.

ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಮನೆ ನೀಡುವ ಭರವಸೆ: ಕಳೆದ ಏಪ್ರಿಲ್ 28 ರಂದು ನಾಗ ಎಂಬ ದುರುಳನಿಂದ ಆ್ಯಸಿಡ್ ದಾಳಿಗೊಳಗಾಗಿದ್ದ ಯುವತಿ ಮತ್ತು ಅವರ ಕುಟುಂಬದವರು ಸಿಎಂ ಅವರನ್ನು ಭೇಟಿ ಮಾಡಿದರು. ಇವತ್ತೇ ಮುಖ್ಯ ಕಾರ್ಯದರ್ಶಿ ಜೊತೆ ಯುವತಿ ಬಗ್ಗೆ ಮಾತಾಡುತ್ತೇನೆ. ಅನುಕಂಪದ ಆಧಾರದಲ್ಲಿ ಕೆಲಸ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.

ಈಗಾಗಲೇ ಸರ್ಕಾರ ಆ್ಯಸಿಡ್ ದಾಳಿಗೆ ಒಳಗಾಗಿರುವವರಿಗೆ ಮಾಸಾಶನ ಹೆಚ್ಚಿಸಿದೆ. ಇದನ್ನು 3 ರಿಂದ 10 ಸಾವಿರ ರೂ.ಗೆ ಏರಿಸಲಾಗಿದೆ. ಯುವತಿಗೂ ಮಾಸಾಶನ ಕೊಡುತ್ತೇವೆ. ನಿವಾಸ ಕೇಳಿದ್ದಾರೆ. ಬೆಂಗಳೂರು‌ ಸಮೀಪ 40 ಸಾವಿರ ಮನೆಗಳ ನಿರ್ಮಾಣ ಆಗುತ್ತಿದೆ. ಈ ಯುವತಿಗೂ ಒಂದು ಮನೆ ಕೊಡುತ್ತೇವೆ. ವಸತಿ ಸಚಿವರ ಜತೆ ಮನೆ ಕೊಡುವ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ : ಕನ್ನಡ ರಾಜ್ಯೋತ್ಸವದ ಶುಭಾಶಯಗಳು: ಇಲ್ಲಿದೆ ನೀವು ತಿಳಿದಿರಬೇಕಾದ ಆಚರಣೆಯ ಇತಿಹಾಸ

Last Updated : Nov 1, 2022, 11:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.