ETV Bharat / state

ಲಿಂಗಾಯತ ಪ್ರತ್ಯೇಕ ಧರ್ಮ ವಿಭಜನೆಯ ಸತ್ಯ ಇಡೀ ಜಗತ್ತಿಗೆ ಗೊತ್ತು: ಸಿಎಂ ಬೊಮ್ಮಾಯಿ‌

ಸಿದ್ದರಾಮಯ್ಯ ಮತ್ತು ಹುಬ್ಬಳ್ಳಿ ರಂಭಾಪುರಿ ಸ್ವಾಮೀಜಿಗಳ ನಡುವಿನ ಸಂಭಾಷಣೆ ಬಗ್ಗೆ ನಾನು ಮಾತನಾಡಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ವಿಭಜನೆಯ ಸತ್ಯ ಇಡೀ ಜಗತ್ತಿಗೆ ಗೊತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಅಭಿಪ್ರಾಯ ವ್ಯಕ್ತಪಡಿಸಿದರು.

bommai
ಸಿಎಂ ಬೊಮ್ಮಾಯಿ‌
author img

By

Published : Aug 20, 2022, 2:07 PM IST

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಭಜನೆಯ ಸತ್ಯ ಇಡೀ ಜಗತ್ತಿಗೆ ಗೊತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದರು. ವಿಧಾನಸೌಧದಲ್ಲಿ ಧರ್ಮ ವಿಭಜನೆಗೆ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಸಿದ್ದರಾಮಯ್ಯ ಮತ್ತು ಸ್ವಾಮೀಜಿಗಳ ನಡುವೆ ನಡೆದ ಸಂಭಾಷಣೆ ಅದು. ಅದರ ಬಗ್ಗೆ ನಾನು ಮಾತನಾಡಲ್ಲ. ಆ ಸತ್ಯ ಏನು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಗುರುಗಳು ನಿನ್ನೆ ಒಂದು ಹೇಳಿದ್ರು, ಇವತ್ತು ಒಂದು ಹೇಳಿದ್ರು. ಅವರಿಬ್ಬರ ಮಧ್ಯೆ ಏನು ಸಂಭಾಷಣೆ ನಡೆದಿದೆ ಅನ್ನೋದು ನನಗೆ ಗೊತ್ತಿಲ್ಲ ಎಂದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ‌

ದೇವರಾಜ ಅರಸು ಪ್ರತಿಮೆಗೆ ಪುಷ್ಪನಮನ: ದೇವರಾಜ ಅರಸು 107ನೇ ಜನ್ಮ ದಿನಾಚರಣೆ ಹಿನ್ನೆಲೆ ವಿಧಾನಸೌಧದ ಪಶ್ವಿಮ ದ್ವಾರ ಬಳಿ ಇರುವ ದೇವರಾಜ ಅರಸು ಪುತ್ಥಳಿಗೆ ಸಿಎಂ ಬೊಮ್ಮಾಯಿ ಮಾಲಾರ್ಪಣೆ ಮಾಡಿದರು. ಈ ವೇಳೆ, ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕುಮಾರ ಬಂಗಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು‌.

ಇದನ್ನೂ ಓದಿ: ಯಾವ ಪಶ್ಚಾತ್ತಾಪವೂ ಇಲ್ಲ, ಧರ್ಮ ಒಡೆಯುವ ಉದ್ದೇಶ ಇರಲಿಲ್ಲ ಎಂದು ಶ್ರೀಗೆ ವಿವರಣೆ ಕೊಟ್ಟಿದ್ದೇನಷ್ಟೆ: ಸಿದ್ದರಾಮಯ್ಯ ಸ್ಪಷ್ಟನೆ

ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಇವತ್ತು ಕರ್ನಾಟಕ ಕಂಡಂತಹ ಧೀಮಂತ ನಾಯಕ, ಹಿಂದುಳಿದವರ ನಾಯಕ ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆಯಾಗಿದೆ. ಅವರು ತಮ್ಮದೇ ಆದಂತಹ ಒಂದು ಸೇವೆ ಮಾಡಿ ಜನಮನ ಗೆದ್ದಿದ್ದಾರೆ. ಅವರಿಗೆ ಬಡವರ ಬಗ್ಗೆ ಕಳಕಳಿ ಇತ್ತು. ಹಿಂದುಳಿದವರ ನಾಯಕ ಅವರಾಗಿದ್ದರು. ಹಿಂದುಳಿದ ವರ್ಗದವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸೇವೆ ಮಾಡಿದವರು. ಭೂ ಸುಧಾರಣೆ ಬಗ್ಗೆ ಅತೀ ಮೊದಲು ಚಿಂತನೆ ಮಾಡಿ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಅವರಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಡಾ.ಅಣ್ಣಯ್ಯ ಕುಲಾಲ್​ಗೆ 2022ನೇ ಸಾಲಿನ ಡಿ ದೇವರಾಜ ಅರಸು ರಾಜ್ಯ ಮಟ್ಟದ ಪ್ರಶಸ್ತಿ

ಭೂಸುಧಾರಣೆ ಕಾಯ್ದೆಯಿಂದ ಊಳುವವನೇ ಭೂಮಿಯ ಒಡೆಯ ಅಂತಾ ಕಾನೂನು ಮಾಡಿ ಅನುಷ್ಠಾನಕ್ಕೆ ತಂದವರು. ಜನತಾ ಮನೆ, ವಿದ್ಯತ್ ರಿಯಾಯತಿ ಮಾಡಿ ಬಡವರಿಗೆ ನೆರವಾದರು. ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯನ್ನು ಸಬಲೀಕರಣ ಮಾಡಿದ್ದರು. ಯಾರಿಗಾಗಿ ಸಂಘಟನೆ ಮಾಡಿದರು, ಯಾರಿಗಾಗಿ ಹೋರಾಟ ಮಾಡಿದರೋ ಕೊನೆಗೆ ಅವರೇ ಅವರ ಜೊತೆ ನಿಲ್ಲಲಿಲ್ಲ, ಇದು ದುರಂತ. ‍ಆದರೆ ದೇವರಾಜ ಅರಸು ಮಹತ್ವ ಇನ್ನು ಕಡಿಮೆಯಾಗಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ದೇವರಾಜ ಅರಸು ಒಡನಾಡಿ, ಕಾಂಗ್ರೆಸ್​ನ ಮಾಜಿ ಶಾಸಕ ಎಂ.ಎಂ.ಸಜ್ಜನ ವಿಧಿವಶ

ಹತ್ತು ಹಲವು ಕಾರ್ಯಕ್ರಮಗಳನ್ನ ನಾವೂ ಕೂಡ ಮಾಡುತ್ತಾ ಅವರ ಹಾದಿಯಲ್ಲಿ ಸಾಗುತ್ತಾ ನಿಜವಾದ ನಮನಗಳನ್ನು ಮಾಡುತ್ತಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಎಲ್ಲರೂ ಒಳಗೊಂಡಂತೆ ಮಾಡಬೇಕು ಅನ್ನೋ ಅವರ ಧ್ಯೇಯೆಯೊಂದಿಗೆ ನಾವೂ ನಡೆಯುತ್ತೇವೆ ಎಂದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.