ETV Bharat / state

ಹಾಲಿನ‌ ದರ ಏರಿಕೆಯಿಂದ ರೈತರಿಗೆ, ಗ್ರಾಹಕರಿಗೆ ಸಮಸ್ಯೆ ಆಗಬಾರದೆಂದು ಕೆಎಂಎಫ್​ಗೆ ಸೂಚನೆ: ಸಿಎಂ ಬೊಮ್ಮಾಯಿ‌ - ಈಟಿವಿ ಭಾರತ ಕನ್ನಡ

ರೈತರ ಹಿತರಕ್ಷಣೆ ಸರ್ಕಾರದ ಕರ್ತವ್ಯ. ಕೆಎಂಎಫ್ ಆಡಳಿತ ಮಂಡಳಿಗೆ ಕೆಲವು ಸಲಹೆ ಸೂಚನೆಗಳನ್ನು ಕೊಟ್ಟಿದ್ದೇನೆ. ಯಾವ ಕಾರಣಕ್ಕೆ ಏರಿಕೆ ಮಾಡಬೇಕು ಎಂದು ಮಾಹಿತಿ ಪಡೆದಿದ್ದೇನೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದ್ದಾರೆ.

Basavaraj Bommai
ಸಿಎಂ ಬೊಮ್ಮಾಯಿ‌
author img

By

Published : Nov 21, 2022, 8:22 PM IST

Updated : Nov 21, 2022, 9:13 PM IST

ಬೆಂಗಳೂರು: ಹಾಲಿನ‌ ದರ ಏರಿಕೆಯಿಂದ ರೈತರಿಗೂ ಸಮಸ್ಯೆಯಾಗಬಾರದು, ಗ್ರಾಹಕರಿಗೂ ತೊಂದರೆಯಾಗಬಾರದು. ಕೆಎಂಎಫ್​ಗೆ ದರ‌ ಬಗ್ಗೆ ಒಂದು ಸೂತ್ರ ರೂಪಿಸಲು ಸೂಚಿಸಿದ್ದು, ಅದರ ಆಧಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದ್ದಾರೆ.

ಹಾಲಿನ ದರ ಏರಿಕೆ ಸಂಬಂಧ ಕೆಎಂಎಫ್ ಹಾಗೂ ಪಶು ಸಂಗೋಪನೆ ಅಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಹಾಲಿನ ದರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಯಾವ್ಯಾವ ರಾಜ್ಯದಲ್ಲಿ ಎಷ್ಟು ದರ ಇದೆ ಎಂಬ ಮಾಹಿತಿ ಕೇಳಿದ್ದೇವೆ. ಕೆಎಂಎಫ್ ಸರ್ಕಾರದ ಅಂಗ. ರೈತರ ಹಿತರಕ್ಷಣೆ ಸರ್ಕಾರದ ಕರ್ತವ್ಯ. ಕೆಎಂಎಫ್ ಆಡಳಿತ ಮಂಡಳಿಗೆ ಕೆಲವು ಸಲಹೆ ಸೂಚನೆಗಳನ್ನು ಕೊಟ್ಟಿದ್ದೇನೆ. ಯಾವ ಕಾರಣಕ್ಕೆ ಏರಿಕೆ ಮಾಡಬೇಕು ಎಂದು ಮಾಹಿತಿ ಪಡೆದಿದ್ದೇನೆ ಎಂದರು.

ಕೆಎಂಎಫ್​ನವರು ಕೆಲ ಮಾಹಿತಿಗಳನ್ನು ತಂದಿರಲಿಲ್ಲ, ಅದನ್ನು ಕೇಳಿದ್ದೇನೆ. ಸೋರಿಕೆ ತಡೆಗಟ್ಟಲು ಕೂಡಾ ಮಾರ್ಗದರ್ಶನ ಕೊಟ್ಟಿದ್ದೇನೆ. ಈಗಾಗಲೇ ಮಾಡಿರುವ 3 ರೂ.‌ ದರ ಹೆಚ್ಚಳ ಬೇಡ ಎಂದು ಸೂಚಿಸಿದ್ದೇನೆ. ಪ್ರೋತ್ಸಾಹ ಧನ ಕೊಡುತ್ತಿರುವ ಕಾರಣ ಮತ್ತು ರೈತರ ಹಿತಚಿಂತನೆ ಕಾರಣಕ್ಕೆ ಸರ್ಕಾರ ಕೆಎಂಎಫ್ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದೆ.

ಹಾಲಿನ‌ ದರ ಏರಿಕೆಯಿಂದ ರೈತರಿಗೆ, ಗ್ರಾಹಕರಿಗೆ ಸಮಸ್ಯೆ ಆಗಬಾರದೆಂದು ಕೆಎಂಎಫ್​ಗೆ ಸೂಚನೆ

ಹಾಲಿನ ದರ ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ. ಬೆಲೆ ಏರಿಕೆ ಸಂಬಂಧ ಕೆಎಂಎಫ್ ಮಂಡಳಿ ಸಭೆಯಲ್ಲಿ ಒಂದು ಸೂತ್ರ ರೂಪಿಸುವಂತೆ ಸೂಚನೆ ನೀಡಿದ್ದೇನೆ. ಅದನ್ನು ನೋಡಿಕೊಂಡು ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮಂಗಳೂರು ಸ್ಫೋಟದ ತನಿಖೆ ಚುರುಕು : ಮಂಗಳೂರು ಸ್ಫೋಟದ ತನಿಖೆ ಚುರುಕುಗೊಂಡಿದೆ. ಪ್ರಮುಖ ಆರೋಪಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಿಜವಾದ ಹೆಸರು, ಐಡೆಂಟಿಟಿ ಬಗ್ಗೆಯೂ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.

ಮಂಗಳೂರು ಸ್ಫೋಟದ ತನಿಖೆ ಚುರುಕು

ಅವನಿಗೆ ಸ್ಫೋಟದಿಂದ ಮಾತಾಡಲು ಆಗಿಲ್ಲ. ಈ ಕೃತ್ಯ ಒಂದೆನಾ ಅಥವಾ ಎಲ್ಲೆಲ್ಲಿ ಮಾಡುತ್ತಾ ಇದ್ದರು, ಹಿಂದೆ ಏನು ಮಾಡಿದ್ದರು ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೆಲ್ಲ ಸಿಕ್ಕ ನಂತರ ಮುಂದೆ ಕ್ರಮ ವಹಿಸುತ್ತಾರೆ. ಸಮನ್ವಯತೆಯಿಂದ ಕೆಲಸ ಮಾಡಿ ಅಂತ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ. ಕುಟುಂಬದ ಸದಸ್ಯರು ಆರೋಪಿಯನ್ನು ಗುರುತಿಸಿದ್ದಾರೆ. ಎಲ್ಲ ಮಾಹಿತಿಯನ್ನು ಎನ್​ಐಎಗೆ ಕೊಟ್ಟಿದ್ದೇವೆ. ಕೃತ್ಯದ ಹಿಂದೆ ಯಾವ ಸಂಘಟನೆಗಳಿವೆ ಎಂಬ ಮಾಹಿತಿ ಸಿಗಬೇಕಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಹಿಂದಿನ ಸಿಎಂ ಆಗಿದ್ದವರು. ಎಲ್ಲದಕ್ಕೂ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡೋದು ಸರಿಯಲ್ಲ. ಈ ರೀತಿ ಮಾತಾಡೋದು ರಾಜಕೀಯ ಪ್ರೇರಿತ ಅಷ್ಟೇ. ಸಿದ್ದರಾಮಯ್ಯ ಕಾಲದಲ್ಲೂ ಹತ್ತಾರು ಪ್ರಕರಣಗಳಾಗಿವೆ. ಸಿದ್ದರಾಮಯ್ಯ ಹೇಳಿಕೆಗೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲ. ವ್ಯಕ್ತಿ, ಆತನ ಹಿಂದಿನ ಸಂಘಟನೆ ಮತ್ತು ಸಂಚು ಪತ್ತೆ ಹಚ್ಚುವುದು ನಮ್ಮ ಲಕ್ಷ್ಯ ಎಂದು ತಿಳಿಸಿದರು.

ಇದನ್ನೂ ಓದಿ: ನಂದಿನಿ ಹಾಲು, ಮೊಸರಿನ ದರ ಏರಿಕೆ ವಿಚಾರ: ನ. 20ರ ನಂತರ ತೀರ್ಮಾನ ಎಂದ ಸಿಎಂ

Last Updated : Nov 21, 2022, 9:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.