ETV Bharat / state

ಸಿಎಂ ಕುಟುಂಬದ 10-15 ಮಂದಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ.. ಬಿಎಸ್‌ವೈ ವಿರುದ್ಧ ಮತ್ತೆ ಯತ್ನಾಳ್ ಕೆಂಡ - Basanagowda patil yatnal talks about cm Bs Yadiyurappa

ನಾನು ವ್ಯಾಪಕ‌ ಭ್ರಷ್ಟಾಚಾರವನ್ನ ಉಲ್ಲೇಖ ಮಾಡಿದ್ದೇನೆ. ನಿಮ್ಮ ಅಳಿಯ ಕ್ಯಾಬಿನೆಟ್ ದರ್ಜೆಯಲ್ಲಿದ್ದಾರೆ. ನಿಮ್ಮ‌ ಮೊಮ್ಮಗ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾನೆ. ನಿಮ್ಮ ಕುಟುಂಬಕ್ಕೆ ಸೇರಿದ 10-15 ಜನ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾರೆ. ಹಾಗಾದರೆ, ರಾಜ್ಯದಲ್ಲಿ‌ ನಡೆಯುತ್ತಿರುವುದು ಏನು..?

basanagowda-patil-yatnal-talks-about-cm-bsy
ಶಾಸಕ ಬಸನಗೌಡ ಪಾಟೀಲ ಯತ್ನಾಳ್
author img

By

Published : Mar 17, 2021, 8:21 PM IST

ಬೆಂಗಳೂರು : ನನ್ನನ್ನು ಬಿಜೆಪಿಯಿಂದ ಹೊರಹಾಕಲು ಯಾರಿಗೂ ತಾಕತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ನನ್ನ ನಿಲುವು ಅಚಲವಾಗಿದೆ. ಬಿಜೆಪಿ ಪುನರುತ್ಥಾನ ಮಾಡಲು ನಾನು ಹೋರಾಟ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಸಿಎಂ ವಿರುದ್ಧ ಗುಡುಗಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ನನ್ನ ಎಲ್ಲಾ ಪ್ರಶ್ನೆಗಳನ್ನ ಕೇಳಿದ್ದೇನೆ. ವಿಜಯೇಂದ್ರ ಸೇರಿ 21 ಜನರ ಕುಟುಂಬ ಮಾರಿಷಸ್​ಗೆ ಹೋಗಿತ್ತು.

ಅವರೆಲ್ಲಾ ಅಲ್ಲಿ ಹೋಗಿದ್ದು ಏತಕ್ಕೆ? ಇದು ರಾಜ್ಯದ ಜನರಿಗೆ ಗೊತ್ತಾಗಬೇಕು. ವಿಜಯೇಂದ್ರ ಶಿವಮೊಗ್ಗಕ್ಕೆ ಹೆಲಿಕಾಪ್ಟರ್​ನಲ್ಲೇ ಓಡಾಟ ಮಾಡುತ್ತಿದ್ದಾರೆ. ಸಿಎಂ ಕೂಡ ಸಂಚಾರ ಮಾಡಲ್ಲ, ಇಷ್ಟು ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್

ಸಿಎಂ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ, ಸಾಕ್ಷಿ ಏನಿದೆ ಅಂತಾ ಕೇಳಿದ್ದಾರೆ. ಸಾಕ್ಷಿ ಇಲ್ಲೇ ಇದೆ ನೋಡಿ ಎಂದು ದಾಖಲೆ ತೋರಿಸಿದ ಯತ್ನಾಳ್, ಕೋಟ್ಯಂತರ ರೂ. ಅವ್ಯವಹಾರದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ಸಾಕ್ಷಿ ಸಮೇತ ಮಾಹಿತಿ ಎತ್ತಿ ಹಿಡಿದಿದ್ದಾರೆ.

ಎರಡು ಪ್ರಕರಣದಲ್ಲಿ ಸಿಎಂಗೆ ₹25 ಸಾವಿರ ದಂಡ ವಿಧಿಸಿದೆ. ಆದರೆ, ಸುಪ್ರೀಂಕೋರ್ಟ್​ನಲ್ಲಿ ಬಂಧನ ಮಾಡದಂತೆ ಸ್ಟೇ ತಂದಿದ್ದಾರೆ. ಶಿವರಾಮ್​ ಕಾರಂತ್ ಬಡವಾಣೆ ಕೇಸ್ ಹಾಗೂ ಗಂಗೇನಹಳ್ಳಿ ಡಿನೋಟಿಪಿಕೇಶನ್ ಕೇಸ್​ನ ತೀರ್ಪನ್ನ ಹೈಕೋರ್ಟ್ ಎತ್ತಿ ಹಿಡಿದಿದೆ ಎಂದರು.

ನಾನು ವ್ಯಾಪಕ‌ ಭ್ರಷ್ಟಾಚಾರವನ್ನ ಉಲ್ಲೇಖ ಮಾಡಿದ್ದೇನೆ. ನಿಮ್ಮ ಅಳಿಯ ಕ್ಯಾಬಿನೆಟ್ ದರ್ಜೆಯಲ್ಲಿದ್ದಾರೆ. ನಿಮ್ಮ‌ ಮೊಮ್ಮಗ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾನೆ. ನಿಮ್ಮ ಕುಟುಂಬಕ್ಕೆ ಸೇರಿದ 10-15 ಜನ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾರೆ. ಹಾಗಾದರೆ, ರಾಜ್ಯದಲ್ಲಿ‌ ನಡೆಯುತ್ತಿರುವುದು ಏನು ಎಂದು ಪ್ರಶ್ನಿಸಿದರು.

ವಾಜಪೇಯಿ, ಮೋದಿ ಅವರು ವಂಶ ರಾಜಕಾರಣ ಮಾಡಲಿಲ್ಲ. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ಹಾಗಾಗಿ, ಅವರು ನಮ್ಮ ನಾಯಕರು, ನನಗೆ ಟಿಕೆಟ್ ಕೊಟ್ಡಿದ್ದು ಯಡಿಯೂರಪ್ಪ ಅಲ್ಲ, ಅಮಿತ್ ಶಾ. ಬಿಎಸ್​ವೈ ಅವರನ್ನು ನಮ್ಮ ನಾಯಕ ಎನ್ನಲ್ಲ ಎಂದು ಸಿಎಂ ವಿರುದ್ಧ ಯತ್ನಾಳ್ ಹರಿಹಾಯ್ದರು.

ಕೆಲವರು ನನ್ನನ್ನು ಉಚ್ಛಾಟನೆ ಮಾಡಬೇಕು ಎಂಬ ಚರ್ಚೆ ನಡೆದಿದೆ ಎನ್ನುತ್ತಾರೆ. ಅದೇ ಶಾಸಕರು ಯಡಿಯೂರಪ್ಪ ಯಾವಾಗ ಹೊರ ಹೋಗಲಿದ್ದಾರೆ ಎಂದು ಕೇಳುತ್ತಿದ್ದಾರೆ. ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಲಿ, ನಾನು 10 ವರ್ಷ ಸಂಸದನಾಗಿದ್ದೆ.‌

ಆಗ ಸಮಯಕ್ಕೆ ಸರಿಯಾಗಿ ಸಭೆ ನಡೆಸುತ್ತಿದ್ದರು, ಈಗ ಇವರ ಅಧಿಕಾರವಧಿಯಲ್ಲಿ ಎಷ್ಟು ದಿನಗಳಿಂದ ಶಾಸಕಾಂಗ ಪಕ್ಷದ ಸಭೆ ನಡೆದಿದೆ ಎಂದು ಸಿಎಂ ವಿರುದ್ಧ ಮತ್ತೆ ಹರಿಹಾಯ್ದರು. ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ ವಿಚಾರ ಸಂಬಂಧ ಇಂದು ಯುವತಿಯ ತಂದೆ ತಾಯಿ ದೂರು ಕೊಟ್ಟಿದ್ದಾರೆ. ಇದು ಜಾರಕಿಹೊಳಿಯೊಬ್ಬರದ್ದೇ ಅಲ್ಲ.

ಸಿಡಿ ತಯಾರು ಮಾಡಲು ಪ್ರತ್ಯೇಕ ಗುಂಪಿದೆ. ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ಬ್ಲ್ಯಾಕ್‌ಮೇಲ್ ಮಾಡುವ ತಂಡವಿದೆ. ಒಂದು ಕೋಟಿ ಕೊಟ್ಟು, ಎರಡು ಕೋಟಿ ಕೊಟ್ಟು ಸಿಡಿ ಖರೀದಿ ಮಾಡುತ್ತಾರೆ. ಎರಡೂ ಪಕ್ಷ ಒಂದು ರೀತಿಯಲ್ಲಿ ಜಾಯಿಂಟ್ ವೆಂಚರ್ ಆಗಿದೆ. ಇದರಿಂದ ಜಾರಕಿಹೊಳಿ ಪರಿಸ್ಥಿತಿ ಅಯೋಮಯವಾಗಿದೆ ಎಂದರು.

ಓದಿ: ಕಾನೂನು ಸಚಿವರೊಂದಿಗೆ ಚರ್ಚಿಸಿ ಜಾತಿ ಗಣತಿ ಜಾರಿ ಕುರಿತು ನಿರ್ಧಾರ: ಕೋಟಾ ಶ್ರೀನಿವಾಸ ಪೂಜಾರಿ

ಸಿಸಿಬಿ ಎಲ್ಲಿ ಹೋಯಿತು?. ಯುವರಾಜ್ ವಿಜಯೇಂದ್ರ ಜೊತೆ ಇದ್ದ ಫೋಟೋ ಎಲ್ಲಿದೆ? ರಾಧಿಕಾ ಕುಮಾರಸ್ವಾಮಿ ಜೊತೆ ಇದ್ದವರು ಮಂತ್ರಿಯಾಗಿಲ್ವೇ? ನನ್ನನ್ನ‌ ಪಕ್ಷದಿಂದ ಹೊರಗೆ‌ ಹಾಕೋಕೆ ಯಾರಿಗೂ ತಾಕತ್ತಿಲ್ಲ. ಬಿಜೆಪಿ ಪುನರುತ್ಥಾನಕ್ಕಾಗಿ‌ ಹೋರಾಡುತ್ತಿದ್ದೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.