ಬೆಂಗಳೂರು: ಅನೈತಿಕ ಸಂಬಂಧದ ವಿಚಾರದಲ್ಲಿ ಅಧಿಕಾರಿಗಳು ಇಲ್ವಾ? ಎಂಪಿಗಳು ಇಲ್ವಾ? ಪತ್ರಕರ್ತರು ಇಲ್ವಾ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಎಲ್ಲಾ ತನಿಖೆ ಮಾಡಲಿ. 225 ಜನ ಮಾತ್ರ ಯಾಕೆ?. ನಾವು ಡಿಮ್ಯಾಂಡ್ ಮಾಡೋದು ಸಿಡಿ ಬ್ಲಾಕ್‌ಮೇಲ್ ಮಾಡೋ ತಂಡದ ತನಿಖೆ ಆಗಲಿ ಅಂತಾ. ಸಿಡಿ ತಂಡದ್ದು ತನಿಖೆಯಾದ್ರೆ ಎಲ್ಲವೂ ಗೊತ್ತಾಗುತ್ತದೆ. ಶ್ರೀರಾಮಗೆ ಸೀತಾ ಮಾತೆ ಬಗ್ಗೆ ಹೇಳಿದಾಗ ಅಗ್ನಿ ಪರೀಕ್ಷೆ ಆಯ್ತು. ಅದಕ್ಕೆ ಅಗ್ನಿ ಪರೀಕ್ಷೆ ಆಗಲಿ. ನಾನು ಸುಧಾಕರ್ ಹೇಳಿಕೆ ಬಗ್ಗೆ ಸಮರ್ಥನೆ ಮಾಡಿಕೊಳ್ಳೋದಿಲ್ಲ. ಸಿಬಿಐ ತನಿಖೆಯಾದ್ರೆ ಎಲ್ಲಾ ಸತ್ಯ ಹೊರ ಬರುತ್ತದೆ ಎಂದರು.
ಸಿಡಿ ಮಾಡೋರು, ಸಿಡಿ ಹಂಚೋರು ಎಲ್ಲವೂ ಗೊತ್ತಿದೆ. ತನಿಖೆ ಎಲ್ಲಿ ಹೋಗ್ತಿದೆ, ಎತ್ತ ಸಾಗ್ತಿದೆ ಅಂತಾ ಗೊತ್ತಾಗುತ್ತಿಲ್ಲ. ಅವರೇ ಸಿಕ್ತಿಲ್ವಾ, ಇವರೇ ಹಿಡಿತಿಲ್ವಾ ಗೊತ್ತಾಗ್ತಿಲ್ಲ. ಯಾರ್ಯಾರನ್ನು ಬ್ಲಾಕ್‌ಮೇಲ್ ಮಾಡಿದ್ದಾರೆ ಗೊತ್ತಾಗುತ್ತದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಅತ್ಯಾಚಾರ ಮಾಡಿದ್ದಾರೆ ಅನ್ಸುತ್ತಾ?. ಆ ಹುಡುಗಿ ಪ್ರತಿಕ್ರಿಯೆ ನೀಡಿದ್ರೆ ಅತ್ಯಾಚಾರ ಮಾಡಿದ್ದಾರೆ ಅನ್ಸುತ್ತಾ?. ಎಲ್ಲವನ್ನೂ ತನಿಖೆ ಮಾಡಿದರೆ ಸತ್ಯ ಗೊತ್ತಾಗುತ್ತದೆ ಎಂದರು.
ಯಾರ್ಯಾರೋ ಗಲ್ಲದ ಮೇಲೆ ಕೈ ಹಾಕ್ತಾರೆ: ಯಾರ್ಯಾರೋ ಗಲ್ಲದ ಮೇಲೆ ಕೈ ಹಾಕ್ತಾರೆ. ಎಲ್ಲಿ ಎಲ್ಲಿ ಕೈ ಹಾಕ್ತಾರೆ ಅನ್ನೋದು ಗೊತ್ತು. ಅದರ ಬಗ್ಗೆಯೂ ತನಿಖೆಯಾಗಲಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಓದಿ: ಪ್ರತಿಪಕ್ಷಗಳ ಸಿಡಿ ಕೋಲಾಹಲ ವಿಚಾರ: ಬಿಜೆಪಿ ನಾಯಕರ ಪ್ರತಿಕ್ರಿಯೆಯೇನು?
ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಡಿಯೋ ಓಡಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕೈ ಹಿಡಿದಿರುವುದನ್ನು ಯಾಕೆ ಮಾಧ್ಯಮಗಳಲ್ಲಿ ತೋರಿಸಿಲ್ಲ ನೀವು?. ಅದು ಒಂದು ಅತ್ಯಾಚಾರವಲ್ವಾ? ಎಂದು ಸೂಚ್ಯವಾಗಿ ಹೇಳಿದರು.