ETV Bharat / state

ಆರೋಪ ಕೇಳಿ ಬಂದ ಮೇಲೆ ರಾಜಾಹುಲಿ ಇರಲಿ, ಯಾರೇ ಇರಲಿ.. ರಾಜೀನಾಮೆ ಕೊಡಲಿ: ಯತ್ನಾಳ್ - ಎಲ್ ಕೆ ಆಡ್ವಾಣಿ

ಆರೋಪ ಕೇಳಿ ಬಂದಿರುವ ಹಿನ್ನೆಲೆ ಕೇಂದ್ರೀಯ ಸಂಸದೀಯ ಸದಸ್ಯ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆಗ್ರಹಿಸಿದ್ದಾರೆ.

Basanagowda Patil Yatnal
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್
author img

By

Published : Sep 15, 2022, 1:13 PM IST

Updated : Sep 15, 2022, 2:44 PM IST

ಬೆಂಗಳೂರು: ಆರೋಪವೊಂದು ಬಂದಿದ್ದು, ರಾಜಾಹುಲಿ ಇರಲಿ, ಯಾರೇ ಇರಲಿ ರಾಜೀನಾಮೆ ಕೊಡಲಿ ಎಂದು ಬಸನಗೌಡ ಪಾಟೀಲ್​ ಯತ್ನಾಳ್ ಕೇಂದ್ರ ಸಂಸದೀಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್​ವೈ ವಿರುದ್ಧ ಎಫ್ಐಆರ್​ಗೆ ಕೋರ್ಟ್ ಆದೇಶ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದರು. ಎಲ್ ಕೆ ಆಡ್ವಾಣಿ, ವಾಜಪೇಯಿಗಿಂತ ಡೊಡ್ಡವ್ರಾ ಅವರು?. ಎಲ್ ಕೆ ಆಡ್ವಾಣಿ ಆದರ್ಶ ಪಾಲಿಸಲಿ. ಕೇಂದ್ರ ಸಂಸದೀಯ ಸ್ಥಾನಕ್ಕೆ ಬಿಎಸ್​ವೈ ರಾಜೀನಾಮೆ ನೀಡಲಿ ಎಂದರು.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಎಷ್ಟೇ ದುಡ್ಡಿನ ಹುಲಿ ಇದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ಈ ಹಿಂದೆ ಎಲ್ ಕೆ ಆಡ್ವಾಣಿ ಮೇಲೆ ಆರೋಪವೊಂದು ಕೇಳಿ ಬಂದಿತ್ತು. ಆ ಸಂದರ್ಭದಲ್ಲಿ ಎಲ್ಲ ಸ್ಥಾನಕ್ಕೆ ಅವರು ರಾಜೀನಾಮೆ ಕೊಟ್ಟಿದ್ದರು ಎಂದು ಹೇಳಿದರು.

ಇದನ್ನೂ ಓದಿ: ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಯತ್ನಾಳ್​

ಕಾಂಗ್ರೆಸ್​ಗೆ ನನ್ನ ಭಯ ಇದೆ: ಕಾಂಗ್ರೆಸ್​ನವರಿಗೆ ಸಿಎಂ ಬೊಮ್ಮಾಯಿ‌ ಭಯ ಇಲ್ಲ, ಯಡಿಯೂರಪ್ಪ ಭಯ ಇಲ್ಲ. ಅವರಿಗೆ ನನ್ನ ಭಯ ಇದೆ ಎಂದು ಯತ್ನಾಳ್ ಅಭಿಪ್ರಾಐಪಟ್ಟರು. ಯತ್ನಾಳ್ ಎಲ್ಲಿ ಬಂದು ಬಿಡ್ತಾನೋ?. ಅನ್ನೋ ಭಯ ಅವರಿಗೆ ಇದೆ. ಯತ್ನಾಳ್ ಸಿಎಂ ಆದರೆ ಜೈಲಿಗೊಬ್ಬರು, ಕಾಡಿಗೆ ಒಬ್ಬರು ಹೋಗಬೇಕಾಗುತ್ತದೆ. ತಿಹಾರ್ ಜೈಲಿನಲ್ಲಿ ಯಾವ ಬಂಡೆನೂ ಇಲ್ಲ, ಪಂಡೆನೂ ಇಲ್ಲ, ಸಂಡೇ ಅಷ್ಟೇ ಎಂದು ಕುಟುಕಿದರು.

Last Updated : Sep 15, 2022, 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.