ETV Bharat / state

ಬೆಂಗಳೂರು: 117 ಕೆಜಿ ತೂಕ ಹೊಂದಿದ್ದ ಮಹಿಳೆಗೆ 2ನೇ ಬಾರಿ ಯಶಸ್ವಿ 'ಬೇರಿಯಾಟ್ರಿಕ್' ಶಸ್ತ್ರಚಿಕಿತ್ಸೆ.. - ‘Bariatric’ surgery success by doctors in Bengaluru

ಮಹಿಳೆಗೆ ಮೊದಲು ಮಾಡಿಸಿಕೊಂಡಿದ್ದ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತೆರೆದ ಅಪೆಂಡೆಕ್ಟಮಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜೊತೆಗೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಸಹ ಹೊಂದಿದ್ದರು. ಈ ಎಲ್ಲದರ ಪರಿಣಾಮ ಗ್ಯಾಸ್ಟ್ರಿಕ್ ಸ್ಲೀವ್ ಹಿಗ್ಗುತ್ತಾ ಹೋಯಿತು.

bariatric-surgery-success-by-doctors-in-bengaluru
'ಬೇರಿಯಾಟ್ರಿಕ್' ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದ ಬೆಂಗಳೂರಿನ ವೈದ್ಯರು
author img

By

Published : Jan 12, 2022, 6:26 PM IST

ಬೆಂಗಳೂರು: 117 ಕೆ. ಜಿ ತೂಕ ಹೊಂದಿದ್ದ 50 ವರ್ಷದ ಮಹಿಳೆಗೆ ನಗರದ ಪ್ರತಿಷ್ಠಿತ ಫೊರ್ಟಿಸ್ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿ ಹಿರಿಯ ಸಲಹೆಗಾರ, ಬ್ಯಾರಿಯಾಟ್ರಿಕ್ ಸರ್ಜನ್ ಡಾ. ಗಣೇಶ್ ಶೆಣೈ ತಂಡವು ಯಶಸ್ವಿಯಾಗಿ ಬೊಜ್ಜು ಕರಗಿಸುವ 'ಮರು ಬೇರಿಯಾಟ್ರಿಕ್' ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಮಹಿಳೆ 8 ವರ್ಷಗಳ ಹಿಂದೆಯೇ ಖಾಸಗಿ ಆಸ್ಪತ್ರೆಯೊಂದರಲ್ಲಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಆಕೆ 114 ಕೆ.ಜಿ ತೂಕ ಹೊಂದಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಬರೋಬ್ಬರಿ 25 ಕೆ. ಜಿ ಇಳಿಕೆಯಾಯಿತು. ಆದರೆ, ಒಂದು ವರ್ಷದೊಳಗಾಗಿ ಗ್ಯಾಸ್ಟ್ರಿಕ್ ಸ್ಲೀವ್ ಹಿಗ್ಗುವಿಕೆಯಿಂದಾಗಿ 117 ಕೆ.ಜಿ. ತೂಕಕ್ಕೆ ಬಂದು ನಿಂತರು. ಈ ಬೆಳವಣಿಗೆ ಅತ್ಯಂತ ಅಪಾಯಕಾರಿಯಾಗಿತ್ತು ಎಂದು ಡಾ. ಗಣೇಶ್ ಶೆಣೈ ಹೇಳಿದ್ದಾರೆ.

ಮಹಿಳೆಗೆ ಮೊದಲು ಮಾಡಿಸಿಕೊಂಡಿದ್ದ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತೆರೆದ ಅಪೆಂಡೆಕ್ಟಮಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜೊತೆಗೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಸಹ ಹೊಂದಿದ್ದರು. ಈ ಎಲ್ಲದರ ಪರಿಣಾಮ ಗ್ಯಾಸ್ಟ್ರಿಕ್ ಸ್ಲೀವ್ ಹಿಗ್ಗುತ್ತಾ ಹೋಯಿತು. ಅವರು ಎಷ್ಟೇ ಡಯೆಟ್ ಹಾಗೂ ವ್ಯಾಯಾಮ ಮಾಡಿದರೂ ಅವರ ಬೊಜ್ಜು ಬೆಳೆಯುತ್ತಾ ಒಂದು ವರ್ಷದೊಳಗೆ 117 ಕೆ.ಜಿ ಗೆ ಬಂದು ನಿಂತರು.

ನಮ್ಮ ತಂಡ ಅಷ್ಟೂ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಅವರಿಗೆ ಲ್ಯಾಪರೋಸ್ಕೋಪಿಕ್ ಮರು ಸ್ಲೀವ್ ಶಸ್ತ್ರಚಿಕಿತ್ಸೆಯನ್ನು ನಡೆಸಿದೆವು. ಈ ಎಲ್ಲದರ ಪ್ರಯತ್ನದಿಂದಾಗಿ ಮತ್ತೊಮ್ಮೆ ಮಹಿಳೆಗೆ ಬೇರಿಯಾಟ್ರೀಕ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಬಾರಿ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆಯಾಗಿರುವುದರಿಂದ ತೂಕ ಕ್ರಮೇಣ ಕಡಿಮೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಓದಿ: ಮುಂಬರುವ ಬಜೆಟ್‌ನಲ್ಲಿ ಯುವಜನ ಕೇಂದ್ರಿತ ಯೋಜನೆಗಳಿಗೆ ಒತ್ತು: ಸಿಎಂ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.