ಬೆಂಗಳೂರು: ನಗರದಲ್ಲಿ ಬಾಂಗ್ಲಾದೇಶ ಮೂಲದ ಯುವತಿಗೆ ಆಕೆಯ ಸ್ನೇಹಿತರೇ ಅತ್ಯಂತ ಅಮಾನವೀಯವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ ಕಣ್ಮರೆಸಿಕೊಂಡಿದ್ದ ಸಂತ್ರಸ್ತೆಯನ್ನು ರಾಮಮೂರ್ತಿ ನಗರದ ಪೊಲೀಸರ ವಿಶೇಷ ತಂಡ ಕೇರಳದ ಕಲ್ಲಿಕೋಟೆಯಲ್ಲಿರುವ ಸ್ನೇಹಿತರ ಮನೆಯಿಂದ ನಗರಕ್ಕೆ ಕರೆ ತರುತ್ತಿದ್ದಾರೆ.
ಘಟನೆ ಬಳಿಕ ಸ್ನೇಹಿತ ಲಕ್ಷ್ಮಿಲಾಲ್ ಮನೆಯಲ್ಲಿ ಸಂತ್ರಸ್ತೆ ಆಶ್ರಯ ಪಡೆದಿದ್ದಳು. ಬೆಂಗಳೂರಿನಿಂದ ತೆರಳಿರುವ ಇನ್ಸ್ಪೆಕ್ಟರ್, ಮಹಿಳಾ ಪಿಎಸ್ಐ, ಮಹಿಳಾ ಕಾನ್ಸ್ಟೇಬಲ್ ಹಾಗೂ ಸಿಬ್ಬಂದಿ ತಂಡ ಇಂದು ಸಂಜೆಯೊಳಗೆ ನಗರಕ್ಕೆ ಕರೆ ತರಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 'ನಿರ್ಭಯಾ' ರೀತಿಯ ಲೈಂಗಿಕ ದೌರ್ಜನ್ಯ ಕೇಸ್: ಪರಾರಿಗೆ ಯತ್ನಿಸಿದ ಆರೋಪಿಗಳಿಗೆ ಗುಂಡು
ನಗರಕ್ಕೆ ಕರೆತಂದ ಬಳಿಕ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ನಂತರ ಪ್ರಕರಣ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಲಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದು, ನಂತರ ಆರೋಪಿಗಳ ಐಡೆಂಟಿಫಿಕೇಷನ್ ಮಾಡಲಾಗುತ್ತದೆ.