ಬೆಂಗಳೂರು : ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಬಾರ್ ಡ್ಯಾನ್ಸರ್ ಆಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಭಾರತಕ್ಕೆ ಬಂದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಬಾಂಗ್ಲಾ ಮೂಲದ ಯುವತಿ ಕೇರಳದಿಂದ ನಗರಕ್ಕೆ ಪೊಲೀಸರ ತಂಡ ಕರೆತರುತ್ತಿದೆ. ಮತ್ತೊಂದು ತಂಡ ಈಕೆಯ ಹಿನ್ನೆಲೆ ಬಗ್ಗೆ ಪತ್ತೆ ಹಚ್ಚಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಸಂತ್ರಸ್ತೆ ಹೈದರಾಬಾದ್‌ಗೆ ಬಂದು ಮಸಾಜ್ ಪಾರ್ಲರ್ ನಡೆಸುತ್ತಿದ್ದಳು. ಇದಕ್ಕೂ ಮುನ್ನ ದುಬೈನಲ್ಲಿ ಬಾರ್ ಒಂದರಲ್ಲಿ ಡ್ಯಾನ್ಸರ್ ಆಗಿದ್ದಳು.
ಹಣಕಾಸಿನ ಗಲಾಟೆಯಲ್ಲಿ ವೇಶ್ಯಾವಾಟಿಕೆ ಕೇಸ್‌ನಲ್ಲಿ ಓರ್ವನನ್ನು ಅರೆಸ್ಟ್ ಮಾಡಿಸಿದ್ದಳು ಎನ್ನಲಾಗಿದೆ. ನಂತರ ಬೆಂಗಳೂರಿಗೆ ಬಂದು ದಂಧೆ ನಡೆಸುತ್ತಿದ್ದಳು. ಇತ್ತೀಚೆಗೆ ಕೇರಳದ ಕಲ್ಲಿಕೋಟೆಯಲ್ಲಿ ಸ್ಪಾ ತೆರೆದು ದಂಧೆ ಮುಂದುವರೆಸಿದ್ದಳು ಎನ್ನಲಾಗಿದೆ.
ಆರೋಪಿಗಳನ್ನು ಭಾರತಕ್ಕೆ ಕರೆಯಿಸಿದ್ದ ಸಂತ್ರಸ್ತೆ : ಬಂಧಿತ ಆರೋಪಿಗಳನ್ನು ಸಂತ್ರಸ್ತ ಯುವತಿಯೇ ಭಾರತಕ್ಕೆ ಕರೆಯಿಸಿಕೊಂಡಿದ್ದಳು ಎನ್ನಲಾಗುತ್ತಿದೆ. ಮಾಂಸ ದಂಧೆಗೆ ಸಹಕಾರ ಮತ್ತು ಸಹಾಯ ಮಾಡಲು ಕರೆಸಿಕೊಂಡ ಬಳಿಕ ಆರೋಪಿಗಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ನಗರದಲ್ಲಿಯೇ ನೆಲೆಸಲು ಆಶ್ರಯ ಕಲ್ಪಿಸಿದ್ದಳು. ನಂತರ ಹೊಸ ಹೊಸ ಯುವತಿಯರನ್ನು ಕರೆಸುವಂತೆ ಹೇಳುತ್ತಿದ್ದಳು.
ಕೇರಳದಲ್ಲಿ ದಂಧೆ ಶುರು ಮಾಡಿದ್ದ ಬಳಿಕ ಬೆಂಗಳೂರಿನಲ್ಲಿ ಇದ್ದ ಮೂವರು ಯುವತಿಯರನ್ನು ಕರೆದುಕೊಂಡು ಹೋಗಿದ್ದಳು. ಯುವತಿಯರನ್ನು ಕರೆದುಕೊಂಡು ಹೋಗಿದ್ದರಿಂದ ಆರೋಪಿಗಳು ಮುನಿಸಿಕೊಂಡಿದ್ದರು. ಅಲ್ಲದೆ ಹಣಕಾಸು ವ್ಯವಹಾರದಿಂದ ಬೇಸತ್ತಿದ್ದರು. ಮಾತುಕತೆ ನಡೆಸಬೇಕೆಂದು ಸಂತ್ರಸ್ತೆಯನ್ನು ನಗರಕ್ಕೆ ಕರೆಯಿಸಿಕೊಂಡಿದ್ದರು.
ಕಳೆದ ಮೇ 19ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದಳು. ರಾಮಮೂರ್ತಿ ನಗರದ ಮನೆಯಲ್ಲಿ ಇದೇ ವಿಚಾರಕ್ಕೆ ಮಾತುಕತೆ ಇಟ್ಟುಕೊಂಡಿದ್ದರು. ಮೊದಲು ಮದ್ಯಪಾರ್ಟಿ ಮಾಡಿದ್ದ ಗ್ಯಾಂಗ್ ನಂತರ ಹಣಕಾಸಿನ ವಿಚಾರ ತೆಗೆದು ಯುವತಿ ವಿರುದ್ಧ ಗಲಾಟೆ ಶುರು ಮಾಡಿದೆ.
ಬಳಿಕ ನಮಗೆ ಮೋಸ ಮಾಡ್ತೀಯಾ ಎಂದು ಹಿಂಸೆ ಕೊಟ್ಟು ಲೈಂಗಿಕ ದೌರ್ಜನ್ಯದ ವಿಕೃತಿ ಮೆರೆದು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಘಟನೆ ಬಳಿಕ ವಿಡಿಯೋವನ್ನು ಹೈದ್ರಾಬಾದ್‌ನ ಓರ್ವನಿಗೆ ಕಳುಹಿಸಿದ್ದರು. ವಿಡಿಯೋ ನೋಡಿದ ಬಳಿಕ ಕೇಸ್ ಹಾಕಿಸುವುದಾಗಿ ಸಂತ್ರಸ್ತೆ ಕಡೆಯವರು ಆರೋಪಿಗಳಿಗೆ ಬೆದರಿಕೆ ಹಾಕಿದ್ದರು.
₹7 ಲಕ್ಷ ಹಣ ಕೊಟ್ಟರೆ ಪೊಲೀಸರಿಗೆ ದೂರು ಕೊಡುವುದಿಲ್ಲ ಎಂದಿದ್ದರಂತೆ. ಹಣ ನೀಡಿ ಆರೋಪಿಗಳು ಸೆಟಲ್ ಮಾಡಿಕೊಂಡಿದ್ದರಂತೆ. ಘಟನೆ ಬಳಿಕ ಮಾರತ್ ಹಳ್ಳಿ ಬಳಿಯಿರುವ ಬಾಂಗ್ಲಾದೇಶದ ಕೆಲ ಯುವಕರಿಗೆ ಮಾಹಿತಿ ಗೊತ್ತಾಗಿ ಆರೋಪಿಗಳ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ಹಿನ್ನೆಲೆ ಆರೋಪಿಗಳ ಕೈ-ಕಾಲು ಹಾಗೂ ತಲೆಗೆ ಗಾಯಗಳಾಗಿದ್ದವು. ಬಳಿಕ ಸ್ಥಳೀಯರು ಡಯಲ್ 100ಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹೊಡೆದಾಡಿಕೊಂಡಿದ್ದವರನ್ನು ವಶಕ್ಕೆ ಪಡೆದು ನಂತರ ವಾರ್ನ್ ಮಾಡಿ ಬಿಟ್ಟು ಕಳುಹಿಸಿದ್ದರು.
ಗಲಾಟೆ ಬಳಿಕ ರೈಲಿನ ಮೂಲಕ ಕೇರಳದ ಕ್ಯಾಲಿಕಟ್‌ಗೆ ಸಂತ್ರಸ್ತೆ ಹೋಗಿದ್ದಳು. ಲಾಕ್ಡೌನ್ ನಿಯಮ ಉಲ್ಲಂಘನೆ ಸಂಬಂಧ ಕೆ.ಆರ್. ಪುರದಲ್ಲಿ ಪೊಲೀಸರು ಚೆಕ್ ಪೋಸ್ಟ್ನಲ್ಲಿ ಇವರನ್ನು ಹಿಡಿದಿದ್ದಾರೆ. ಇಬ್ಬರು ಪಿಎಸ್ಐ ಹಾಗೂ ಪೊಲೀಸರು ಸಂತ್ರಸ್ತೆ ಹಾಗೂ ಜೊತೆಗಿದ್ದ ಯುವತಿಯನ್ನು ಠಾಣೆಗೆ ಕರೆತಂದು ಕೂರಿಸಿದ್ದಾರೆ.
ಪ್ರಾಥಮಿಕ ವಿಚಾರಣೆ ಗಲಾಟೆ ಮಾಡಿಕೊಂಡಿರುವ ವಿಚಾರ ಹಾಗೂ ಸ್ನೇಹಿತ ಕ್ಯಾಲಿಕಟ್ನಲ್ಲಿ ಇದ್ದಾನೆ ಎಂದು ರೈಲ್ವೆ ಟಿಕೆಟ್ ತೋರಿಸಿದ್ದಾರೆ. ವಾರ್ನ್ ಮಾಡಿ ಹಣ ಪಡೆದು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. ಸದ್ಯ ಕೆ ಆರ್ ಪುರ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಓದಿ: Rape case: ಸಂತ್ರಸ್ತೆಗೆ ಕಿರುಕುಳ ನೀಡುತ್ತಿರುವ ಮತ್ತೊಂದು ವಿಡಿಯೋ ರಿವೀಲ್!