ETV Bharat / state

ಉಪಕುಲಪತಿಗಳ ಕಾನೂನು ಬಾಹಿರ ನಿರ್ಧಾರಗಳನ್ನು ರದ್ದು ಮಾಡಿ ಕ್ರಮ ಕೈಗೊಳ್ಳಿ : ಬೆಂ. ವಿವಿ ಸಿಂಡಿಕೇಟ್ ಸದಸ್ಯರ ಆಗ್ರಹ - ಬೆಂಗಳೂರು ವಿವಿ ಉಪಕುಲಪತಿಗಳ ವಿರುದ್ಧ ವಿವಿ ಸಿಂಡಿಕೇಟ್ ಸದಸ್ಯರ ಆಕ್ರೋಶ

ಬೇಕಾಬಿಟ್ಟಿಯಾಗಿ ತೆಗೆದುಕೊಂಡಿರುವ ಎಲ್ಲಾ ನಿರ್ಣಯಗಳನ್ನು ರದ್ದು ಮಾಡಬೇಕು. ಇತ್ತೀಚೆಗೆ ಬೋರ್ಡ್ ರೂಮ್‌ನಲ್ಲಿ ಸಿಂಡಿಕೇಟ್ ಸದಸ್ಯರನ್ನು ಕೂಡಿ ಹಾಕಲಾಗಿತ್ತು. ಈ ರೀತಿಯಾಗಿ ವರ್ತಿಸಿದ ನೌಕರರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು..

Bangalore VV Syndicate Members insist to take action against Vice Chancellor
ಉಪಕುಲಪತಿಗಳ ವಿರುದ್ಧ ಕ್ರಮಕ್ಕೆ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರ ಆಗ್ರಹ
author img

By

Published : Feb 28, 2022, 4:38 PM IST

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯ ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರಗಳನ್ನು ರದ್ದು ಮಾಡಬೇಕು. ಬೇಕಾಬಿಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿರುವ ವಿವಿ ಕುಲಪತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿಂಡಿಕೇಟ್ ಸದಸ್ಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಉಪಕುಲಪತಿಗಳ ವಿರುದ್ಧ ಕ್ರಮಕ್ಕೆ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರ ಆಗ್ರಹ

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಂಡಿಕೇಟ್ ಸದಸ್ಯರ ನಿಯೋಗ, ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಭೇಟಿ ಮಾಡಿ ಅಹವಾಲು ಸಲ್ಲಿಸಿತು. ಬೆಂಗಳೂರು ವಿವಿ ಇತ್ತೀಚೆಗೆ ನಡೆಸಿದ್ದ 163ನೇ ಸಿಂಡಿಕೇಟ್ ಸಭೆಯಲ್ಲಿ ಕೋರಂ ಇರಲಿಲ್ಲ. ಆದರೂ ಕುಲಪತಿಗಳು ಸಭೆ ನಡೆಸಿ ಹಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ದೂರಿದರು.

ಬೇಕಾಬಿಟ್ಟಿಯಾಗಿ ತೆಗೆದುಕೊಂಡಿರುವ ಎಲ್ಲಾ ನಿರ್ಣಯಗಳನ್ನು ರದ್ದು ಮಾಡಬೇಕು. ಇತ್ತೀಚೆಗೆ ಬೋರ್ಡ್ ರೂಮ್‌ನಲ್ಲಿ ಸಿಂಡಿಕೇಟ್ ಸದಸ್ಯರನ್ನು ಕೂಡಿ ಹಾಕಲಾಗಿತ್ತು. ಈ ರೀತಿಯಾಗಿ ವರ್ತಿಸಿದ ನೌಕರರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜನವರಿ ಮೊದಲ ವಾರ ನಡೆದಿದ್ದ ಸಿಂಡಿಕೇಟ್ ಸಭೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕವಾದ ನೌಕರರಿಗೆ ಬಡ್ತಿ ನೀಡಲು ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದನ್ನು ಸಿಂಡಿಕೇಟ್ ಸದಸ್ಯರು ಒಪ್ಪಿಕೊಂಡಿಲ್ಲ. ಈ ನಿರ್ಣಯವನ್ನು ರದ್ದು ಮಾಡಬೇಕೆಂದು ಸದಸ್ಯರು ಪ್ರಮುಖವಾಗಿ ಸರ್ಕಾರವನ್ನು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ರೈಸ್ ಪುಲ್ಲಿಂಗ್ ವಿಷಯ: ಬೀದಿ ಬದಿಯಲ್ಲಿ ಪತ್ತೆಯಾಗಿದ್ದ ಶವ, ಮಂಡ್ಯದಲ್ಲಿ ಭಾರಿ ರಾಜಕೀಯ ತಿರುವು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.