ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಕಳ್ಳರು ದೇವಸ್ಥಾನದ ಹುಂಡಿ ಮೇಲೆ ಕಣ್ಣಿಟ್ಟಿದ್ದು, ಸಿಲಿಕಾನ್ ಸಿಟಿಯಲ್ಲೀಗ ದಿನೇ ದಿನೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.
ಯಲಹಂಕದ ಶಿವಕೋಟೆ ಗ್ರಾಮದ ಲಕ್ಷ್ಮೀನಾರಂಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ನಿನ್ನೆ ತಡರಾತ್ರಿ ಹುಂಡಿ ಕಳ್ಳತನ ಮಾಡಿ ನಂತರ ಸಮೀಪದಲ್ಲೇ ಇದ್ದ ಲಕ್ಷ್ಮೀ ದೇವಸ್ಥಾನದಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ. ಲಾಕೌಡೌನ್ ಹೇರಿದ ಬಳಿಕ ಸಿಲಿಕಾನ್ ಸಿಟಿಯ 50ಕ್ಕೂ ಹೆಚ್ಚು ಕಡೆಗಳಲ್ಲಿ ದೇವಸ್ಥಾನ, ಮನೆಗಳ್ಳತನ, ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿವೆ.
ಬಹುತೇಕ ಮಂದಿ ಲಾಕ್ಡೌನ್ ಹೇರುವ ಮೊದಲೇ ಮನೆಗಳಿಗೆ ಬಾಗಿಲು ಹಾಕಿ ತಮ್ಮ-ತಮ್ಮ ಊರುಗಳಿಗೆ ತೆರಳಿದ್ದಾರೆ. ಇದನ್ನ ಸದುಪಯೋಗಪಡಿಸಿಕೊಂಡ ಖದೀಮರು ಬಹುತೇಕ ಕಡೆ ಯಾರೂ ಇಲ್ಲದ್ದನ್ನು ಗಮನಿಸಿ ಕಳ್ಳತನ ಮಾಡ್ತಿದ್ದಾರೆ. ಸದ್ಯ ಪೊಲೀಸರು ಕೂಡಾ ಸೀಲ್ ಡೌನ್ ಪ್ರದೇಶ, ಹಾಟ್ ಸ್ಪಾ ಟ್ ಪ್ರದೇಶದಲ್ಲಿ ಬ್ಯುಸಿಯಾಗಿರೋದೆ ಕಳ್ಳರ ಪಾಲಿಗೆ ದೊಡ್ಡ ವರದಾನವಾಗಿದೆ.