ETV Bharat / state

ನಾಳೆಯಿಂದ ಬೆಂಗಳೂರು ಟೆಕ್ ಸಮ್ಮಿಟ್: ಗಮನ ಸೆಳೆಯಲಿದೆ ರೋಬೋಟಿಕ್ಸ್ - ಬೆಂಗಳೂರು ಟೆಕ್ ಸಮ್ಮಿಟ್ 2019

ಬೆಂಗಳೂರು ಟೆಕ್ ಸಮ್ಮಿಟ್- 2019 ನಾಳೆ (ನ.18) ಅರಮನೆ ಮೈದಾನದಲ್ಲಿ ಆರಂಭಗೊಳ್ಳಲಿದೆ. ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ಡಿಸಿಎಂ ಅಶ್ವತ್ಥ್ ನಾರಾಯಣ
author img

By

Published : Nov 17, 2019, 7:16 PM IST

ಬೆಂಗಳೂರು: ಬೆಂಗಳೂರು ಟೆಕ್ ಸಮ್ಮಿಟ್-2019 ನಾಳೆಯಿಂದ (ನ.18) ಮೂರು ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದ್ರು.

ಡಿಸಿಎಂ ಅಶ್ವತ್ಥ್ ನಾರಾಯಣ

ಇಡೀ ವಿಶ್ವದಲ್ಲೇ ತಂತ್ರಜ್ಞಾನದಲ್ಲಿ ಬೆಂಗಳೂರು ನಾಯಕತ್ವದ ಸ್ಥಾನ ಪಡೆದಿದೆ. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರ ದೇಶದ ಅಭಿವೃದ್ದಿಗೆ ಬುನಾದಿಯಾಗಿದೆ. ತಂತ್ರಜ್ಞಾನ ಕೇವಲ ಕಂಪ್ಯೂಟರ್​ಗೆ ಮಾತ್ರ ಸೀಮಿತವಲ್ಲದೆ ಎಲ್ಲ ಕ್ಷೇತ್ರಕ್ಕೂ ಸಲ್ಲುವಂತಾಗಿದೆ ಎಂದರು.

ಈ ಬಾರಿಯ ಸಮ್ಮಿಟ್​ನಲ್ಲಿ ರೋಬೋಟಿಕ್ಸ್ ಸ್ಪರ್ಧೆ ಏರ್ಪಡಿಸಲಾಗಿದ್ದು, ರೋಬೋಟಿಕ್ ರೀ ಚಾರ್ಜ್ ಎಂಬ ಹೆಸರಿನಲ್ಲಿ ನಡೆಯಲಿದೆ‌‌. ಸಮ್ಮಿಟ್ ವೇಳೆ ಒಂಭತ್ತು ಯೂನಿಕಾನ್ಸ್​ಗಳಿಗೆ 'ಬೆಂಗಳೂರು ಇಂಪ್ಯಾಕ್ಟ್ ಅವಾರ್ಡ್' ಎಂದು ನೀಡಲಾಗುತ್ತಿದೆ ಎಂದರು.‌

ಅಮೆರಿಕಾ, ಯು.ಕೆ., ಯು.ಎಸ್, ಆಸ್ಟ್ರೇಲಿಯಾ, ಜಪಾನ್, ಫ್ರಾನ್ಸ್, ಜರ್ಮನಿ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಈ ಸಮಾರಂಭದಲ್ಲಿ ಭಾಗಿಯಾಗುತ್ತಿವೆ.‌ 12 ಸಾವಿರಕ್ಕೂ ಹೆಚ್ಚು ವೀಕ್ಷಕರು, 3000ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ರು.

Intro:‌‌ನಾಳೆಯಿಂದ ಶುರುವಾಗಲಿದೆ ಬೆಂಗಳೂರು ಟೆಕ್ ಸಮ್ಮಿಟ್; ಈ ಬಾರಿ‌ ಗಮನ ಸೆಳೆಯಲಿದೆ ರೋಬೋಟಿಕ್ಸ್ ..‌

ಬೆಂಗಳೂರು: ಬೆಂಗಳೂರು ಟೆಕ್ ಸಮ್ಮಿಟ್ 2019 ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿದೆ.. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಸಮ್ಮಿಟ್ ಅನ್ನ
ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ ಅಂತ ಇಂದು ಡಿಸಿಎಂ ಅಶ್ವಥ್ ನಾರಾಯಣ್ ಸುದ್ದಿಗೋಷ್ಟಿ ಯಲ್ಲಿ ತಿಳಿಸಿದರು..

2 ದಶಕದಿಂದಲೂ ಈ ಶೃಂಗ ಸಭೆ ನಡೆಯುತ್ತಿದ್ದು,
ಇಡೀ ವಿಶ್ವದಲ್ಲೇ ತಂತ್ರಜ್ಞಾನದಲ್ಲಿ ಬೆಂಗಳೂರು
ನಾಯಕತ್ವದ ಸ್ಥಾನ ಪಡೆದಿದೆ.. ಇಂದು ಜಾಗತಿಕ ಮಟ್ಟದಲ್ಲಿ ಯಾವುದೇ ದೇಶಕ್ಕೆ ಭವಿಷ್ಯ ಇದೆ ಅಂದರೆ ಅದಕ್ಕೆ ಬುನಾದಿಯೇ ತಂತ್ರಜ್ಞಾನ.. ತಂತ್ರಜ್ಞಾನ ಕೇವಲ ಕಂಪ್ಯೂಟರ್ ಗೆ ಮಾತ್ರ ಸೀಮಿತವಾಗಿಲ್ಲ.‌ ಎಲ್ಲ ಕ್ಷೇತ್ರಕ್ಕೂ ಸಲ್ಲುವಂತಾಗಿದೆ ಅಂತ ತಿಳಿಸಿದರು..‌

2019ರ ಸ್ಟಾರ್ಟ್ ಅಪ್ ಪಾಲಿಸಿ ತರಲಾಗುವುದು, ಸದ್ಯದಲ್ಲೇ ಘೋಷಣೆ ಮಾಡಲಾಗುತ್ತೆ..‌ಈ ಮೂಲಕ ನಾನಾ ಭಾಗಗಳಲ್ಲಿ ಬೆಳವಣಿಗೆ ಕಾಣಲು ಸಾಧ್ಯ. ಇನ್ನು ಈ ಬಾರಿಯ ಸಮ್ಮಿಟ್ ನಲ್ಲಿ ರೋಬೋಟಿಕ್ಸ್ ಸ್ಪರ್ಧೆ ಏರ್ಪಡಿಸಲಾಗಿದ್ದು, ರೋಬೋಟಿಕ್ ರೀ ಚಾರ್ಜ್ ಎಂಬ ಹೆಸರಿನಲ್ಲಿ ನಡೆಯಲಿದೆ‌‌.. ಇನ್ನು ಈ ಬಾರಿ 9 ಯೂನಿಕಾನ್ಸ್ ಗಳಿಗೆ ಬೆಂಗಳೂರು ಇಂಪಾಕ್ಟ್ ಅವಾರ್ಡ್ ಎಂದು ನೀಡಲಾಗುತ್ತಿದೆ.‌

ಸಾಧಕರ ಜೊತೆ ಕೂತು ಮಾತಾನಾಡುವ ಅವಕಾಶವನ್ನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ಯಾನಲ್ ಡಿಸ್ಕಷನ್ ಮಾಡಲು ಅವಕಾಶ ನೀಡಿದ್ದೇವೆ. ಟೆಕ್ ಸಮ್ಮಿಟ್ ನಲ್ಲಿ 200 ಕ್ಕಿಂತ ಹೆಚ್ಚಿನ ಎಕ್ಸಿಬ್ಯೂಟರ್ಸ್ ಇದ್ದಾರೆ.. ಅಮೇರಿಕಾ, ಯು.ಕೆ., ಯು.ಎಸ್, ಆಸ್ಟ್ರೇಲಿಯಾ, ಜಪಾನ್, ಫ್ರಾನ್ಸ್, ಜರ್ಮನಿ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಭಾಗಿಯಾಗುತ್ತಿವೆ..‌ 12 ಸಾವಿರಕ್ಕೂ ಹೆಚ್ಚು ವಿಸಿಟರ್ಸ್, 3000ಕ್ಕೂ ಹೆಚ್ಚು ಡೆಲಿಗೇಟ್ಸ್ ಬರಲಿದ್ದಾರೆ ಅಂತ ಮಾಹಿತಿ ನೀಡಿದರು..

===========================

ನಮ್ಮ ಮುಂದಿನ ಚಾಲೆಂಜ್ ಸೈಬರ್ ಕ್ರೈಂ..

ಟೆಕ್ನಾಲಜಿ ಬಗ್ಗೆ ಇಲಾಖಾವಾರು ಹೇಗೆ ಅಳವಡಿಸಿಕೊಳ್ಳಬಹುದು ಎಂದು ಚರ್ಚಿಸಲಾಗುತ್ತದೆ.. ಸೈಬರ್ ಕ್ರೈಂ ಸೇರಿದಂತೆ ಹಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತದೆ.. ಮುಂದಿನ‌ ಚಾಲೆಂಜ್ ಸೈಬರ್ ಕ್ರೈಂ, ಸೈಬರ್ ಸೆಕ್ಯುರಿಟಿಯಲ್ಲಿ 150 ಕೋಟಿ ವಹಿವಾಟು ಮಾಡುತ್ತಿದೆ‌‌.. ಸೈಬರ್ ಚಾಲೆಂಜ್ ಗೆ ಸೈಬರ್ ಸೆಕ್ಯುರಿಟಿ ಅಥಾರಿಟಿ ಮಾಡಲು ಚಿಂತನೆ ಇದೆ.. ಈ ಮೂಲಕ ಸೈಬರ್ ಕ್ರೈಂನ್ನು ತಡೆಯಲು ಮುಂದಾಗುತ್ತೇವೆ.. ಇದರಲ್ಲಿ ಅನೇಕ ಸುಧಾರಣೆ ತರಲಾಗುತ್ತದೆ ಅಂತ ತಿಳಿಸಿದರು..

KN_BNG_3_BANGALORE_TEACH_SUMMIT_SCRIPT_7201801

BYTE: ಡಾ ಅಶ್ವತ್ ನಾರಾಯಣ- ಡಿಸಿಎಂ
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.