ETV Bharat / state

ಬಿಕೋ ಎನ್ನುತ್ತಿದೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ: ಪೊಲೀಸರಿಂದ ನವೀನ್ ವಿಚಾರಣೆ - ಶಾಸಕ ಅಖಂಡ ಶ್ರೀನಿವಾಸಮೂರ್ತಿ

ನಿನ್ನೆ ರಾತ್ರಿ ಕಿಡಿಗೇಡಿಗಳು ನಡೆಸಿದ ಅಟ್ಟಹಾದಿಂದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಸುಟ್ಟು ಕರಕಲಾಗಿದ್ದು, ಘಟನೆಯಲ್ಲಿ ಸಾರ್ವಜನಿಕರ ಮನೆಗಳಿಗೂ ಹಾನಿಯಾಗಿದೆ‌.

Bangalore riots
ಕಿಡಿಗೇಡಿಗಳ ಕೃತ್ಯಕ್ಕೆ ಸುಟ್ಟು ಕರಕಲಾದ ವಾಹನಗಳು
author img

By

Published : Aug 12, 2020, 8:43 AM IST

ಬೆಂಗಳೂರು: ಅಖಂಡ ಶ್ರೀನಿವಾಸಮೂರ್ತಿ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಕಾರಣ ಶಾಸಕರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸದ್ಯ ಶಾಸಕರ ಮನೆ ಬಿಕೋ ಎನ್ನುತ್ತಿದ್ದು, ಮನೆಯ ಸುತ್ತ ಇರುವ ವಸ್ತುಗಳು ಕೂಡ ಸುಟ್ಟು ಕರಕಲಾಗಿವೆ.

ಘಟನೆಯಲ್ಲಿ ಸಾರ್ವಜನಿಕರ ಮನೆಗಳಿಗೂ ಹಾನಿಯಾಗಿದೆ‌. ಶಾಸಕರ ಮನೆಯ ಸುತ್ತ ಇರುವಂತಹ ಸಿಸಿಟಿವಿಯನ್ನ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಶಾಸಕರ ಮನೆಯ ಸುತ್ತ ಇರುವ ಸಾರ್ವಜನಿಕರು ಭಯಭೀತರಾಗಿದ್ದಾರೆ. ನಿನ್ನೆ ರಾತ್ರಿಯಿಂದ ಭಯದಲ್ಲೇ ಜೀವನ ಮಾಡುತ್ತಿದ್ದೇವೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಕಿಡಿಗೇಡಿಗಳ ಕೃತ್ಯಕ್ಕೆ ಸುಟ್ಟು ಕರಕಲಾದ ವಾಹನಗಳು

ಬಂದ ಆರೋಪಿಗಳೆಲ್ಲ ಇಲ್ಲಿನ ಸ್ಥಳೀಯ ನಿವಾಸಿಗಳಲ್ಲ. ಅವರ ಪರಿಚಯವೇ ಇಲ್ಲ, ಇದು ಫ್ಲಾನ್ ಮಾಡಿ ನಡೆಸಲಾದ ಘಟನೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ನವೀನ್ ತೀವ್ರ ವಿಚಾರಣೆ: ಸದ್ಯ ಅವಹೇಳನಕಾರಿ ಪೋಸ್ಟ್ ಮಾಡಿದ‌ ನವೀನ್​​​‘ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನವೀನ್ ಅವರ ಫೇಸ್​​​​​​ಬುಕ್​ನಿಂದ ಪೋಸ್ಟ್ ಹಾಕಿದ್ದ ಕಾರಣ ಮಾಹಿತಿ ಕಲೆ ಹಾಕ್ತಿದ್ದಾರೆ. ಆದರೆ, ನವೀನ್ ತನ್ನ ಮೊಬೈಲ್ ಹ್ಯಾಕ್ ಆಗಿದೆ ಎಂಬ ಉತ್ತರ ನೀಡುತ್ತಿದ್ದು, ನಿಜವಾಗಿಯೂ ಹ್ಯಾಕ್ ಆಗಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ‌.

ಮತ್ತೊಂದೆಡೆ ಗಲಭೆಯಲ್ಲಿ ಗಾಯಗೊಂಡವರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಈಗಾಗಲೇ ಆರು ಜನ ಎಸ್ಕೇಪ್ ಆದ ಕಾರಣ ಸದ್ಯ ಬೌರಿಂಗ್ ಆಸ್ಪತ್ರೆ ಸುತ್ತ ಖಾಕಿ ಕಣ್ಗಾವಲು ಹಾಕಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.