ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಹೊಸ ಹೈಡ್ರಾಮ ನಡೆಸುತ್ತಿದ್ದಾರೆ.
ಆರೋಪಿಗಳ ಬಂಧನಕ್ಕಾಗಿಯೇ ರಚಿಸಲಾಗಿರುವ ಹೊಸ ಪೊಲೀಸ್ ತಂಡವು ಬಂಧಿಸಲು ಹೋದಾಗ ಕೊರೊನಾ ಬಂದಿರುವ ರೀತಿಯಲ್ಲಿ ಕೆಮ್ಮು, ಜ್ವರ, ಮೈ ಕೈ ನೋವು ಎಂದು ನೆಪ ಹೇಳುತ್ತಿದ್ದಾರೆ. ಗಲಭೆಕೋರರ ನಾಟಕೀಯ ತಂತ್ರಕ್ಕೆ ಪೊಲೀಸರು ಕ್ಯಾರೆನ್ನದೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನನಗೆ ಜ್ವರವಿದೆ ಮನೆ ಬಿಟ್ಟು ಹೊರಗೆ ಹೋಗಿಯೇ ಇಲ್ಲ ಎಂದು ಹೇಳಿ, ಎದೆ ಹಿಡಿದುಕೊಂಡು ಜೋರಾಗಿ ಕೆಮ್ಮಿ, ಕೊರೊನಾ ಗುಣ ಲಕ್ಷಣವಿರುವ ಸೀನ್ ಕ್ರಿಯೆಟ್ ಮಾಡಿದ್ದಾರೆ. ಕೊರೊನಾ ಅಂದರೆ ಪೊಲೀಸರು ಬಂಧಿಸಲ್ಲ ಎಂದು ಗಲಭೆಕೋರರು ನಾಟಕ ಮಾಡಿದ್ದು, ಇದಕ್ಕೆ ಪೊಲೀಸರು ಸೊಪ್ಪು ಹಾಕಿಲ್ಲ.
ಬಂಧನ ವೇಳೆ ನಾಟಕವಾಡಿರುವ ಯಾವ ಆರೋಪಿಗೂ ಕೊರೊನಾ ಸೋಂಕು ತಗುಲಿಲ್ಲ. ಸದ್ಯ ಇರುವ ಆರೋಪಿಗಳ ಪೈಕಿ ಮೂವರಿಗೆ ಮಾತ್ರ ಪಾಸಿಟಿವ್ ಬಂದಿದೆ. ಹೈಡ್ರಾಮ ಕ್ರಿಯೆಟ್ ಮಾಡಿದ 40ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಲಾಗಿದೆ.