ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಅಕ್ಟೋಬರ್ 16 ಹಾಗೂ 18 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
16 ರಂದು ಬೆಂಗಳೂರಿನ ಕೆಂಪಮ್ಮ ಲೇಔಟ್, ಹುಳಿಮಾವು, ಬೇಗೂರು ಕ್ಲಾಸಿಕ್ ಲೇಔಟ್, ಅಕ್ಷಯನಗರ, ಯಲೇನಹಳ್ಳಿ, ನ್ಯಾನಪ್ಪನಹಳ್ಳಿ, ವಿಶ್ವಪ್ರಿಯ ಲೇಔಟ್, ಕಾಳೇನ ಅಗ್ರಹಾರ, ಬೇಗೂರು ಅರಕೆರೆ, ಸಾಮ್ರಾಟ್ ಲೇಔಟ್, ಬಿಟಿಎಸ್ ಲೇಔಟ್, ಬಿಟಿಎಂ-4ನೇ ಹಂತ, ಡಿಎಚ್‌ಸಿ ಹಳ್ಳಿ, ಅನುಗ್ರಹ ಲೇಔಟ್, ವಿ.ಬಿ. ಲೇಔಟ್, ಕುಟ್ಟಿಯಪ್ಪ ಗಾರ್ಡನ್, ರಾಘವೇಂದ್ರ ಕಾಲೊನಿ, ಎಸ್‌ಬಿಐ ಲೇಔಟ್, ರೋಟರಿ ನಗರ, ಜಿ.ಬಿ. ಪಾಳ್ಯ, ಕೂಡ್ಲು, ಕೆಎಸ್‌ಆರ್‌ಪಿ 9ನೇ ಬೆಟಾಲಿಯನ್, ಟ್ರಾಪಿಕಲ್ ಪ್ಯಾರಡೈಸ್, ರಿಲಯಬಲ್ ವುಡ್ಸ್, ವಾಸ್ತು ಲೇಔಟ್, ಮಾರುತಿ, ಬೂತಹಳ್ಳಿ ರಸ್ತೆ, ಮಾರುತಿ, ಬೂದಹಳ್ಳಿ ರಸ್ತೆ, ಸಲಾರ್ಪುರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಲಿದೆ.
18ರಂದು ಹೊಸೂರು ಮುಖ್ಯರಸ್ತೆ, ಬಂಡೆಪಾಳ್ಯ, ಸಿಂಗಸಂದ್ರ, ಜಿ.ಬಿ.ಪಾಳ್ಯ, ಕೂಡ್ಲುಗೇಟ್, ಎಇಸಿಎಸ್ ಲೇಔಟ್ 'ಎ' ಹಾಗೂ 'ಬಿ' ಬ್ಲಾಕ್, ಹೊಂಗಸಂದ್ರ, ಓಂಶಕ್ತಿ ಲೇಔಟ್, ಬೊಮ್ಮನಹಳ್ಳಿ, ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶ, ಚಿಕ್ಕ ಬೇಗೂರು ಗೇಟ್, ಬಿಟಿಆರ್ ಉದ್ಯಾನ, ಮುನೇಶ್ವರ ಲೇಔಟ್, ಹರಳುಕುಂಟೆ, ಹೊಸಪಾಳ್ಯ, ಯೆಳ್ಳುಕುಂಟೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಇಂಧನ ಇಲಾಖೆ ಪ್ರಗತಿ ಪರಿಶೀಲನೆ ಸಭೆ.. ಕಳೆದ 5 ವರ್ಷಗಳಲ್ಲಿ ಯಾವುದೇ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆಗೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಇಂಧನ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಐದು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನದಲ್ಲಿ ಖಾಸಗಿ ವಲಯದಲ್ಲಿ ಸಹ ಯಾವುದೇ ಹೊಸ ವಿದ್ಯುತ್ ಖರೀದಿ ಒಪ್ಪಂದಗಳಾಗಿಲ್ಲ. ಛತ್ತೀಸ್‌ಗಢ ಪಿಟ್ ಹೆಡ್ ಪವರ್ ಪ್ಲಾಂಟ್ ಯಾವುದೇ ಪ್ರಗತಿಯನ್ನು ಮಾಡಲಾಗಿಲ್ಲ. ಒಡಿಶಾದಲ್ಲಿರುವ ಮಂದಾಕಿನಿ ಕ್ಯಾಪ್ಟಿವ್ ಗಣಿಯಿಂದ ಕಲ್ಲಿದ್ದಲು ಪಡೆಯಲು ಯಾವುದೇ ಅನುಸರಣೆಯಾಗಿಲ್ಲ ಎಂಬ ಮಾಹಿತಿ ನೀಡಿದರು.
ದೈನಂದಿನ ಬಳಕೆಯು 180 ಮಿಲಿಯನ್ ಯೂನಿಟ್ನಿಂದ 260 ಮಿಲಿಯನ್ ಯೂನಿಟ್ಗಳಿಗೆ ಏರಿಕೆಯಾಗಿದೆ. ಗರಿಷ್ಠ ಹಗಲಿನ ವಿದ್ಯುತ್ ಬೇಡಿಕೆ 11000MW ನಿಂದ 16000MW ಗೆ ಏರಿಕೆಯಾಗಿದೆ (ಮಳೆಗಾಲದಲ್ಲಿ). ಜಲವಿದ್ಯುತ್ ಮತ್ತು ಪವನ ವಿದ್ಯುತ್ ಲಭ್ಯತೆಯಲ್ಲಿನ ಕೊರತೆಯಿಂದಾಗಿ, ರಾತ್ರಿಯ ವೇಳೆಯಲ್ಲಿ ಸುಮಾರು 10,000MW ವಿದ್ಯುತ್ ಕೊರತೆ ಎದುರಿಸಲಾಗುತ್ತಿದೆ. ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿಯೂ ಸಹ ಹೆಚ್ಚಿನ ಬೇಡಿಕೆ ಇದೆ. ಅದರ ಹೊರತಾಗಿಯೂ ರಾಜ್ಯದಿಂದ 1000 ರಿಂದ 1500MW ಖರೀದಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಇದನ್ನೂಓದಿ:ರೈತರಿಗೆ ನಿತ್ಯ 5 ತಾಸು ವಿದ್ಯುತ್ ಪೂರೈಕೆ ಮಾಡಿ, ಲೋಡ್ ಶೆಡ್ಡಿಂಗ್ ಆಗದಂತೆ ಎಚ್ಚರಿಕೆ ವಹಿಸಿ: ಸಿಎಂ ಸೂಚನೆ