ಬೆಂಗಳೂರು: ಬೆಂಗಳೂರು ನಗರ ಪೊಲೀಸರಯ ಕೊರೊನಾ ನಿಯಂತ್ರಣದ ಜೊತೆಯಲ್ಲಿ ಹಿರಿಯ ನಾಯಕರಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ.
ಕೊರೊನಾದಿಂದ ಆರ್ಥಿಕತೆ ಸಂಪೂರ್ಣ ಕುಸಿದಯ, ಜನ ಜೀವನ ನೆಲಕಚ್ಚಿದೆ. ಈ ನಡುವೆ ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಪರಿಹಾರ ಕೇಂದ್ರದ ಸಿಬ್ಬಂದಿ ಹಿರಿಯ ನಾಗರಿಕರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.
ತಮ್ಮ ಬಳಿಯಿರುವ ಹಿರಿಯ ನಾಗರಿಕರ ನಂಬರ್ಗಳಿಗೆ ಕರೆ ಮಾಡಿ, ಸೋಂಕಿನ ಗುಣಲಕ್ಷಣಗಳು ಇವೆಯೇ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಒಂದು ವೇಳೆ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಆಸ್ಪತ್ರೆಗಳಿಗೆ ತಪಾಸಣೆಗೆ ತೆರಳುವಂತೆ ಸಲಹೆ ನೀಡುತ್ತಿದ್ದಾರೆ. ಕೊರೊನಾ ಮಾತ್ರವಲ್ಲದೆ ಮನೆಯಲ್ಲಿ ದೌರ್ಜನ್ಯ ಆಗುತ್ತಿದ್ದರೆ ಪೊಲೀಸರು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.