ETV Bharat / state

ಬಡವರಿಗೆ ದಿನಸಿ ಕಿಟ್​​​ ವಿತರಿಸಿ ಮಾನವೀಯತೆ ಮೆರೆದ ಕೆ.ಆರ್.ಪುರ ಪೊಲೀಸರು

ಕೆ.ಆರ್.ಪುರದ ಪೊಲೀಸರು ಕೊರೊನಾ ವಿರುದ್ಧ ಹೋರಾಡುವುದರ ಜೊತೆಗೆ ಬಡವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಬಡವರಿಗೆ ಅವಶ್ಯಕತೆ ಇರುವ ವಸ್ತುಗಳ‌ನ್ನು ಪಟ್ಟಿ ಮಾಡಿ ಸಂಘ ಸಂಸ್ಥೆಗಳು, ದಾನಿಗಳಿಂದ ಸಹಾಯ ಪಡೆದು ತಮ್ಮ ವಾಹನದಲ್ಲೇ ದಿನಕ್ಕೆ 200 ಜನರಂತೆ ಬಡವರನ್ನು ಕರೆಸಿ ದಿನಸಿ ಕಿಟ್ ವಿತರಿಸುತ್ತಿದ್ದಾರೆ.

Bangalore police distributed ration kit for poor
ಬಡವರಿಗೆ ರೇಷನ್ ಕಿಟ್​ ವಿತರಿಸಿ ಮಾದರಿಯಾದ ಕೆಆರ್​ ಪುರ ಪೊಲೀಸರು
author img

By

Published : May 5, 2020, 11:08 PM IST

ಬೆಂಗಳೂರು: ಲಾಕ್​​ಡೌನ್ ಸಮಸ್ಯೆಗೆ ಸಿಲುಕಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ದಿನಸಿ ಕಿಟ್​​​ಗಳನ್ನು ನೀಡಿ ನೆರವಾಗಿರುವ ಇಲ್ಲಿನ ಕೆ.ಆರ್.ಪುರ ಪೊಲೀಸರ ಕಾರ್ಯ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಡಿಸಲುಗಳಲ್ಲಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಹೆಚ್ಚಾಗಿ ನೆಲೆಸಿದ್ದಾರೆ. ಇಂಥವರನ್ನು ಹುಡುಕಿ ಅವರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಿ ಯಾವುದೇ ಸಮಸ್ಯೆ ಆಗದಂತೆ ಕೆ.ಆರ್​.ಪುರ ಪೊಲೀಸರು ನೋಡಿಕೊಂಡಿದ್ದಾರೆ. ಬಡವರಿಗೆ ಅವಶ್ಯಕತೆ ಇರುವ ವಸ್ತುಗಳ‌ನ್ನು ಪಟ್ಟಿ ಮಾಡಿ ಸಂಘ ಸಂಸ್ಥೆಗಳು, ದಾನಿಗಳಿಂದ ಸಹಾಯ ಪಡೆದು ಕೆ.ಆರ್.ಪುರ ಕಾಲೇಜು ಮೈದಾನದಲ್ಲಿ ಕಿಟ್​​ಗಳನ್ನು ತಯಾರಿಸಿ ತಮ್ಮ ವಾಹನದಲ್ಲೇ ದಿನಕ್ಕೆ 200 ಜನರಂತೆ ಬಡವರನ್ನು ಕರೆಸಿ ದಿನಸಿ ಪದಾರ್ಥಗಳ ಕಿಟ್ ನೀಡಿದ್ದಾರೆ.

ಲಾಕ್​ಡೌನ್ ಆದಾಗಿನಿಂದಲೂ ಇದುವರೆಗೂ 6,000 ಸಾವಿರ ದಿನಸಿ ಕಿಟ್​ಗಳನ್ನು ವಿತರಿಸಿದ್ದಾರೆ. ವೈಟ್ ಫೀಲ್ಡ್ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಕೆ.ಆರ್.ಪುರ ಪೊಲೀಸ್ ಠಾಣೆ ಇನ್ಸ್​​​ಪೆಕ್ಟರ್ ಅಂಬರೀಶ್ ಹಾಗೂ ಸಬ್ ಇನ್ಸ್​ಪೆಕ್ಟರ್ ಮಂಜುನಾಥ್ ಅವರ ಈ ಕಾರ್ಯಕ್ಕೆ ಬಡವರು, ಸ್ಥಳೀಯರು ಹಿರಿಯ ಅಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ ಮೆಚ್ಚುಗೆ ವ್ಯಕ್ತಪಡಿಸಿದೆ.

15 ಕೆಜಿ ಅಕ್ಕಿ, 4 ಕೆಜಿ ಗೋಧಿ ಹಿಟ್ಟು, ತೊಗರಿ ಬೇಳೆ, ಉದ್ದಿನ ಬೇಳೆ, 1 ಕೆಜಿ ಉಪ್ಪು, ಎಣ್ಣೆ, ಸಾಂಬಾರ್ ಪುಡಿ, ಧನಿಯಾ ಪುಡಿ, ಬಟ್ಟೆ ಸೋಪು ಒಳಗೊಂಡ 6,000 ಕಿಟ್​​ಗಳನ್ನು ಇದುವರೆಗೂ ವಿತರಿಸಲಾಗಿದೆ. ಇದಲ್ಲದೆ ತರಕಾರಿ ಕಿಟ್​​​ಗಳು, ಮಾಸ್ಕ್​​ಗಳು, ಸ್ಯಾನಿಟೈಸರ್​ಗಳನ್ನು ಸಹ ವಿತರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.