ETV Bharat / state

ಬೆಂಗಳೂರಿನಲ್ಲಿ ಬೃಹತ್ ಗಾತ್ರದ ಆನೆ ದಂತ ಮಾರಾಟಕ್ಕೆ ಯತ್ನ : ಮೂವರು ಆರೋಪಿಗಳ ಬಂಧನ - Bangalore police arrested elephant ivory vendors

ನಾಲ್ಕು ಆರೋಪಿಗಳನ್ನು ಆಂಧ್ರಪ್ರದೇಶ ಮೂಲದವರೆಂದು ಗುರುತಿಸಲಾಗಿದ್ದು, ಕದ್ದ ಆನೆ ದಂತಗಳನ್ನ ರಿಂಗ್ ರಸ್ತೆಯಲ್ಲಿರುವ ಲಾರಿ ಸ್ಟಾಂಡ್ ಬಳಿ ಮಾರಾಟ ಮಾಡಲು ಮುಂದಾದ ವಿಷಯ ತಿಳಿದ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ..

Bangalore police arrested elephant ivory vendors
ಮೂವರು ಆರೋಪಿಗಳ ಬಂಧನ...
author img

By

Published : Nov 17, 2020, 12:42 PM IST

ಬೆಂಗಳೂರು : ನಾಲ್ಕು ಬೃಹತ್ ಗಾತ್ರದ ಆನೆ ದಂತಗಳನ್ನು ಮಾರಲು ಯತ್ನಿಸುತ್ತಿದ್ದ ಆರೋಪಿಗಳನ್ನು ಹೆಬ್ಬಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಂಧ್ರದಿಂದ ಆನೆ ದಂತವನ್ನು ತಂದಿದ್ದ ಆರೋಪಿಗಳು ಗುಡ್ಡದ ಹಳ್ಳಿಯ ಟೆಂಪೋ ನಿಲ್ದಾಣದಲ್ಲಿ ಮಾರಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ನಾಲ್ವರಲ್ಲಿ ಮೂವರು ಆರೋಪಿಗಳಾದ ಲೋಕೇಶ್, ಮಂಜುನಾಥ್ ಹಾಗೂ ಗೋವಿ ಅನ್ನೋರನ್ನು ಬಂಧಿಸಲಾಗಿದೆ.

ಧರ್ಮೇಂದ್ರ ಕುಮಾರ್ ಮಾತನಾಡಿದರು

ನಾಲ್ಕು ಆರೋಪಿಗಳನ್ನು ಆಂಧ್ರಪ್ರದೇಶ ಮೂಲದವರೆಂದು ಗುರುತಿಸಲಾಗಿದ್ದು, ಕದ್ದ ಆನೆ ದಂತಗಳನ್ನ ರಿಂಗ್ ರಸ್ತೆಯಲ್ಲಿರುವ ಲಾರಿ ಸ್ಟಾಂಡ್ ಬಳಿ ಮಾರಾಟ ಮಾಡಲು ಮುಂದಾದ ವಿಷಯ ತಿಳಿದ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಲೋಕೇಶ್ ಮತ್ತು ಮಂಜುನಾಥ್ ಗಾರೆ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

bangalore-police-arrested-elephant-ivory-vendors
ಆಂಧ್ರಪ್ರದೇಶ ಮೂಲದ ಮೂವರು ಆರೋಪಿಗಳ ಬಂಧನ

50 ಸಾವಿರ ಕಮೀಷನ್ ಆಸೆಗೆ ಬಿದ್ದು ದಂತ ಮಾರಾಟ ಮಾಡಲು ಬಂದಿದ್ದರು ಎಂದು ತಿಳಿದು ಬಂದಿದೆ. ಪ್ರಕರಣ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಈ ದಾಳಿ ಪಿಎಸ್‌ಐ ಶ್ರೀಮತಿ ಪುಷ್ಪ ಮುಗಳಿ ಅವರ ನೇತೃತ್ವದಲ್ಲಿ ನಡೆದಿದ್ದು, ಉತ್ತರ ವಲಯದ ಡಿಸಿಪಿ ಧರ್ಮೇಂದ್ರ ಕುಮಾರ್ ಸಿಬ್ಬಂದಿ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.