ಬೆಂಗಳೂರು: ಕೋವಿಡ್ 19 ರಿಂದ ವೃದ್ಧ ಸಾವಿಗೀಡಾದ ಪ್ರಕಣಕ್ಕೆ ಸಂಬಂಧಿಸಿದಂತೆ ಸಿಲಿಕಾನ್ ಸಿಟಿ ಸಂಪೂರ್ಣವಾಗಿ ಸದ್ಯ ಖಾಕಿ ಹಾಗೂ ಬಿಬಿಎಂಪಿ ಕಣ್ಗಾವಲಿನಲ್ಲಿದೆ. ಇಷ್ಟಾದರೂ ಜನರು ಮಾತ್ರ ಇದ್ಯಾವುದನ್ನೂ ಲೆಕ್ಕಿಸದೆ ಓಡಾಡುತ್ತಿದ್ದಾರೆ.
ಕೊರೊನಾ ಸೋಂಕು ಹಿನ್ನೆಲೆ ಟಿಪ್ಪು ನಗರಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಡಿಸಿ ಜಿ ಎನ್ ಶಿವಮೂರ್ತಿ ಭೇಟಿ ನೀಡಿದರು. ಈ ವೇಳೆ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದದ್ದು ಕಂಡುಬಂದಿದೆ. ಅಲ್ಲದೆ, ಇಲ್ಲಿನ ದೇವಸ್ಥಾನವೊಂದರಲ್ಲಿ ಅಕ್ಕಿ ಕೊಡುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ಡಿಸಿ, ಯಾರು ನಿಮಗೆ ಅಕ್ಕಿ ಕೊಡೋಕೆ ಹೇಳಿದ್ದು? ಯಾಕೆ ಇಲ್ಲಿಗೆ ಬಂದ್ದಿದ್ದೀರಾ? ಎಂದು ಕ್ಲಾಸ್ ತೆಗೆದುಕೊಂಡರು.
ಸದ್ಯ ವೃದ್ದ ಸಾವನ್ನಪ್ಪಿದ ಕಾರಣ ಭಯದ ವಾತಾವರಣ ಇದೆ. ವೃದ್ಧನ ಜೊತೆ ಸಂಪರ್ಕದಲ್ಲಿದ್ದವರ ಮೇಲೂ ನಿಗಾವಹಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ.