ETV Bharat / state

ಬೆಂಗಳೂರು : ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ತಾಯಿ-ಮಗ ಆತ್ಮಹತ್ಯೆ

author img

By

Published : Apr 20, 2022, 5:01 PM IST

ಐದು ವರ್ಷದ ಮಗನನ್ನು ಸಾಯಿಸಿ ಬಳಿಕ ಅದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದೆ..

Hulimavu Police Station
ಹುಳಿಮಾವು ಪೊಲೀಸ್ ಠಾಣೆ

ಬೆಂಗಳೂರು : ಐದು ವರ್ಷದ ಮಗನನ್ನು ನೇಣು ಬಿಗಿದು ಸಾಯಿಸಿ ಬಳಿಕ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಮಂಗಳೂರು ಮೂಲದ ರೋಹಿಣಿ ಶೆಟ್ಟಿ ಹಾಗೂ ಸಿಯಾನ್ ಶೆಟ್ಟಿ ಎಂಬುವರು ಮೃತಪಟ್ಟ ತಾಯಿ-ಮಗ. ಹುಳಿಮಾವು‌ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಏ.17ರಂದು ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

36 ವರ್ಷದ ರೋಹಿಣಿ ಗೃಹಿಣಿಯಾಗಿದ್ದರು. ಪತಿ‌ ಪ್ರವೀಣ್ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ರೋಹಿಣಿ ಅವರು ಇತ್ತೀಚಿಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮದುವೆಯಾದ ಬಳಿಕವೂ ಎರಡು-ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು‌.

ಇದನ್ನೂ ಓದಿ: ಗಲಭೆಕೋರರ ವಿರುದ್ಧ ಯುಪಿ ಮಾದರಿ ಕ್ರಮಕ್ಕೆ ಚಿಂತನೆ: ಸಚಿವ ಆರಗ ಜ್ಞಾನೇಂದ್ರ

ಏ.17ರಂದು ರಾತ್ರಿ ಊಟ ಮುಗಿಸಿ ಪ್ರತ್ಯೇಕ ಕೊಠಡಿಯಲ್ಲಿ ತಾಯಿ-ಮಗ ಮಲಗಿದ್ದರು. ಪತಿ ಪ್ರವೀಣ್ ಬೇರೆ ರೂಮ್​‌ನಲ್ಲಿದ್ದರು. ಮಾರನೇ ದಿನ ಬೆಳಗ್ಗೆ ಕಾಫಿಗಾಗಿ ಕೊಠಡಿ ಕದ ತಟ್ಟಿದಾಗ ತುಂಬಾ ಹೊತ್ತಾದರೂ ಬಾಗಿಲು ತೆಗೆಯಲಿಲ್ಲ. ಇದರಿಂದ ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ಒಳ ಹೋದಾಗ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಐದು ವರ್ಷದ ಮಗನನ್ನು ಸಾಯಿಸಿ ಬಳಿಕ ಅದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.