ETV Bharat / state

ಬೆಂಗಳೂರಲ್ಲಿ ಅರ್ಚಕರ ಮನೆ ಲಾಕ್​​ ಮಾಡಿ ದೇವಸ್ಥಾನದ ಹುಂಡಿ ಕದ್ದ ಖದೀಮರು - ಬೆಂಗಳೂರಿನಲ್ಲಿ ಕಳ್ಳತನ

ಕೊರೊನಾ ತಡೆಗೆ ಎಲ್ಲೆಡೆ ಲಾಕ್​ಡೌನ್​ ಘೋಷಣೆಯಾಗಿದ್ದು, ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕಳ್ಳರು ಮನೆ ಬಿಟ್ಟು ದೇವಸ್ಥಾನಕ್ಕೆ ಕನ್ನ ಹಾಕಿದ್ದಾರೆ. ಬೆಂಗಳೂರಲ್ಲಿ ಈ ಪ್ರಕರಣ ನಡೆದಿದೆ.

Bangalore lockdown: Theft in Bangalore
ಅರ್ಚಕರ ಮನೆಗೆ ಲಾಕ್​​ ಮಾಡಿ ದೇವಸ್ಥಾನದ ಹುಂಡಿ ಕದ್ದ ಖದೀಮರು
author img

By

Published : Apr 23, 2020, 1:37 PM IST

ಬೆಂಗಳೂರು: ಲಾಕ್​​ಡೌನ್​​ ವೇಳೆ ಕಳ್ಳರು ಕೈಚಳಕ ತೋರಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಕೊರೊನಾ ತಡೆಗೆ ಎಲ್ಲೆಡೆ ಲಾಕ್​ಡೌನ್​ ಘೋಷಣೆಯಾಗಿದ್ದು, ಇದನ್ನೇ ಬಂಡವಾಳವನ್ನಾಗಿಸಿಟ್ಟುಕೊಂಡ ಸಮಯಸಾಧಕರು ಮನೆ ಬಿಟ್ಟು ದೇವಸ್ಥಾನಕ್ಕೆ ಕನ್ನ ಹಾಕಿದ್ದಾರೆ. ‌ಹೆಗಡೆನಗರ ಎರಡನೇ ಕ್ರಾಸ್​ನ ನಾಗಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಬಾಗಿಲಿನ ಬೀಗ ಒಡೆದು ದೇವರ ಹುಂಡಿ ಕದ್ದಿದ್ದಾರೆ.

ಅಷ್ಟು ಮಾತ್ರವಲ್ಲದೇ ಪಕ್ಕದಲ್ಲಿದ್ದ ಅರ್ಚಕರ ಮನೆಗೆ ಹೊರಗಿನಿಂದ ಲಾಕ್‌ ಮಾಡಿ ಈ ಕೃತ್ಯ‌ವೆಸಗಿದ್ದಾರೆ. ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ಇರುವವರಿಂದಲೇ ಕೃತ್ಯವೆಸಗಿದ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.