ಬೆಂಗಳೂರು: ರಾಜಧಾನಿಯಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಂಡಿರುವ ಕಾರಣ ಕಳೆದ ಕೆಲ ದಿನಗಳಿಂದ ಕೊರೊನಾ ಕೇಸ್ಗಳು ಇಳಿಕೆಯಾಗಿವೆ. ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಕಳೆದ ಏಳು ದಿನಗಳಲ್ಲಿ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಾದವರ ಮಾಹಿತಿ ಈ ವರದಿಯಲ್ಲಿದೆ. ಮೇ 21ರಿಂದ 27ರವರೆಗೆ ಅಂದರೆ ಏಳು ದಿನಗಳಲ್ಲಿ 3,542 ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇವರೆಲ್ಲರೂ ಕೊರೊನಾ ಸೋಂಕಿನಿಂದಲೇ ಆಸ್ಪತ್ರೆಗಳಿಗೆ ದಾಖಲಾಗಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ: ವೀರಪ್ಪನ್ ಊರಲ್ಲಿ ಲಸಿಕೆ ಭಯ... ವ್ಯಾಕ್ಸಿನ್ ಹಾಕಿಸಿಕೊಂಡವರು ಕೇವಲ 11 ಮಂದಿ!
3,542 ಜನರಲ್ಲಿ 1,528 ಸೋಂಕಿತರು ಜನರಲ್ ವಾರ್ಡ್ಗೆ ದಾಖಲಾಗಿದ್ದು,1,799 ಸೋಂಕಿತರು ಹೆಚ್ಡಿಯೂ(ಹೈಡಿಪೆಂಡೆನ್ಸಿ ಯೂನಿಟ್ಸ್)ಗೆ ದಾಖಲಾಗಿದ್ದಾರೆ. 121 ಜನರು ಐಸಿಸಿಯ ಹಾಗೂ 94 ರೋಗಿಗಳು ಐಸಿಯು ವಿತ್ ವೆಂಟಿಲೇಟರ್ಗೆ ದಾಖಲಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರತಿದಿನ ಐಸಿಯು ಹಾಗೂ ವೆಂಟಿಲೇಟರ್ಗೆ ಬೇಡಿಕೆ ಸ್ವಲ್ಪವೂ ತಗ್ಗಿಲ್ಲ.
ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ಗಾಗಿ ಆಸ್ಪತ್ರೆಗೆ ಹೋಗುತ್ತಿರುವವರು ಪಾಸಿಟಿವ್ ಬಂದವರಲ್ಲಿ ಶೇಕಡಾ 70%ರಷ್ಟು ಆಗಿದ್ದು, ಜನರಲ್ ಬೆಡ್ಗಳಿಗಿಂತ ಆಕ್ಸಿಜನ್,ಐಸಿಯು, ವೆಂಟಿಲೇಟರ್ ಬೆಡ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಸಂಪೂರ್ಣ ಮಾಹಿತಿ ಇಲ್ಲಿದೆ
ದಿನಾಂಕ | ಆಸ್ಪತ್ರೆಗೆ ದಾಖಲಾದವರ ಸಂಖ್ಯೆ | ಹೆಚ್ಡಿಯು | ಐಸಿಯು | ಐಸಿಯು+ವೆಂಟಿಲೇಟರ್ |
ಮೇ 21 | 680 ರೋಗಿಗಳು | 375 ರೋಗಿಗಳು | 25 ರೋಗಿಗಳು | |
ಮೇ 22 | 624 | 342 | 34 | |
ಮೇ 23 | 591 | 338 | 20 | |
ಮೇ 24 | 578 | 322 | 39 | |
ಮೇ 25 | 521 | 302 | 36 | |
ಮೇ 26 | 498 | 301 | 53 | |
ಮೇ 27 | 50 | 34 | 08 | ಒಟ್ಟು 94 ರೋಗಿಗಳು |
ಒಟ್ಟು 3,542 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 2014ಹೆಚ್ಡಿಯು ,215 ಐಸಿಯು ಹಾಗೂ 94 ರೋಗಿಗಳು ಐಸಿಯು ವಿತ್ ವೆಂಟಿಲೇಟರ್ನಲ್ಲಿ ದಾಖಲಾಗಿದ್ದಾರೆ.