ETV Bharat / state

ಯುಗಾದಿ ಹಬ್ಬದ ಪ್ರಯುಕ್ತ ಬಡವರಿಗೆ ದಿನಸಿ ಸಾಮಾಗ್ರಿ ಕಿಟ್​ ವಿತರಿಸಿದ ಗ್ರಾಪಂ ಅಧ್ಯಕ್ಷ - GP President Varun

ಕೊರೊನಾ 2ನೇ ಅಲೆಯಿಂದ ಸಾರ್ವಜನಿಕರು ತೊಂದರೆಗೊಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮೂಲಕ ಸಹಕರಿಸುವಂತೆ ಬಿದರಹಳ್ಳಿ ಗ್ರಾಪಂ ಅಧ್ಯಕ್ಷ ವರಣ್ ಮನವಿ ಮಾಡಿದರು.

GP President distributes grocery-kit
ದಿನಸಿ ಸಾಮಾಗ್ರಿ ಕಿಟ್​ ವಿತರಿಸಿದ ಗ್ರಾ.ಪಂ ಅಧ್ಯಕ್ಷ
author img

By

Published : Apr 13, 2021, 9:11 PM IST

ಬಿದರಹಳ್ಳಿ/ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ 1500 ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ಸಾಮಾಗ್ರಿಗಳ ಕಿಟ್​ಗಳನ್ನು ಬಿದರಹಳ್ಳಿ ಗ್ರಾಪಂ ಅಧ್ಯಕ್ಷ ವರಣ್ ಹಾಗೂ ಸದಸ್ಯ ಚಂದ್ರಶೇಖರ್ ವಿತರಿಸಿದರು.

ದಿನಸಿ ಸಾಮಾಗ್ರಿ ಕಿಟ್​ ವಿತರಿಸಿದ ಗ್ರಾಪಂ ಅಧ್ಯಕ್ಷ..

ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಭತ್ತೆಶ್ವರ ಬಡಾವಣೆ, ಗುಂಡಪ್ಪ ಲೇಔಟ್, ಅಯ್ಯಪ್ಪ ಸ್ವಾಮಿ ಲೇಔಟ್, ಪುಣ್ಯಭೂಮಿ ಲೇಔಟ್, ಚೌಡೇಶ್ವರಿ ಲೇಔಟ್, ಟೀಚರ್ಸ್ ಕಾಲೋನಿ, ವಿ.ಸಿ.ಕೆ ಲೇಔಟ್, ಅಂಬೇಡ್ಕರ್ ಕಾಲೋನಿಯಲ್ಲಿ ದಿನಸಿ ಸಾಮಾಗ್ರಿಗಳ ಕಿಟ್​ ವಿತರಣೆ ಮಾಡುವ ಮೂಲಕ ಬಡವರಿಗೆ ಕೊರೊನಾ ‌ಸಂಕಷ್ಟದಲ್ಲಿ ನೆರವಾಗಿದ್ದಾರೆ.

ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ವರುಣ್, ಕೊರೊನಾದಂತಹ ತುರ್ತು ಪರಿಸ್ಥಿತಿಯಲ್ಲಿ ಬಡವರಿಗೆ ನೆರವಾಗುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ. ದೇಶದೆಲ್ಲೆಡೆ ಕೊರೊನಾ 2ನೇ ಅಲೆ ಹರಡುತ್ತಿರುವ ಹಿನ್ನೆಲೆ ಎಚ್ಚರಿಕೆಯಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ 2ನೇ ಅಲೆಯಿಂದ ಸಾರ್ವಜನಿಕರು ತೊಂದರೆಗೊಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.