ETV Bharat / state

ಬೆಂಗಳೂರಿನಲ್ಲಿ ಹೊಸ ಸೋಂಕಿತರ ಸಂಖ್ಯೆ ಇಳಿಮುಖ: ಟೆಸ್ಟಿಂಗ್​ ಪ್ರಮಾಣ ಇಳಿಸಿದ್ದೇಕೆ? - ಕೊರೊನಾ ವೈರಸ್ ನ್ಯೂಸ್

ಸತತ ಮೂರನೇ ದಿನವೂ ಬೆಂಗಳೂರಿನಲ್ಲಿ 16 ಸಾವಿರ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಕೊರೊನಾ ಪರೀಕ್ಷೆಯ ಪ್ರಮಾಣದಲ್ಲೂ ಇಳಿಕೆ ಕಂಡುಬಂದಿರುವ ವಿಚಾರ ಆಘಾತ ತಂದಿದೆ.

Bangalore corona cases
ಬೆಂಗಳೂರಿನಲ್ಲಿ 3ನೇ ದಿನವೂ ಇಳಿಮುಖಗೊಂಡ ಕೋವಿಡ್​ ಸಂಖ್ಯೆ
author img

By

Published : May 12, 2021, 10:47 AM IST

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಕೋವಿಡ್ ಹರಡುವಿಕೆ ಕಡಿಮೆಯಾಗುತ್ತಿದೆ ಎಂಬ ಸಮಾಧಾನದ ಮಧ್ಯೆಯೇ ಕೊರೊನಾ ಪರೀಕ್ಷೆಯ ಪ್ರಮಾಣದಲ್ಲೂ ಇಳಿಕೆ ಕಂಡುಬಂದಿರುವ ವಿಚಾರ ಆಘಾತ ತಂದಿದೆ. ಇದರಿಂದಲೇ ಕಡಿಮೆ ಜನರಲ್ಲಿ ಸೋಂಕು ವರದಿಯಾಗುತ್ತಿರುವುದು ಆತಂಕ ಮೂಡಿಸಿದೆ.

ಸತತ ಮೂರನೇ ದಿನವೂ ಬೆಂಗಳೂರಿನಲ್ಲಿ 16 ಸಾವಿರ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಕಳೆದ ವಾರ 23 ರಿಂದ 26 ಸಾವಿರ ಕೋವಿಡ್ ಪ್ರಕರಣಗಳು ದೃಢಪಡುತ್ತಿದ್ದವು. ಈಗ 16 ಸಾವಿರಕ್ಕೆ ಇಳಿಕೆಯಾಗಿದೆ. ಮೇ 10 ರಂದು ಕೇವಲ 48,469 ಜನರ ಪರೀಕ್ಷೆ ನಡೆಸಲಾಗಿದೆ. ಒಂದು ವಾರದ ಹಿಂದೆ 60 ಸಾವಿರಕ್ಕೂ ಹೆಚ್ಚು ಟೆಸ್ಟ್ ಮಾಡಲಾಗುತ್ತಿತ್ತು.

ಇಂದು 16,323 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಈ ಪೈಕಿ 1711 ಬೊಮ್ಮನಹಳ್ಳಿ, 578 ದಾಸರಹಳ್ಳಿ, 2353 ಪೂರ್ವದಲ್ಲಿ, 2304 ಮಹದೇವಪುರದಲ್ಲಿ, 1138 ಆರ್ ಆರ್ ನಗರ, 1879 ದಕ್ಷಿಣ ವಲಯ, 1491 ಪಶ್ಚಿಮ ವಲಯ, 1090 ಯಲಹಂಕ, ನಗರದ ಹೊರವಲಯದಲ್ಲಿ 1370 ಜನರಲ್ಲಿ ಕೊರೊನಾ ದೃಢಪಟ್ಟಿದೆ.

ಇದನ್ನೂ ಓದಿ: 4 ದಿನ ಸಂಪೂರ್ಣ ಲಾಕ್​ಡೌನ್: ದಿನಸಿ, ತರಕಾರಿ, ಮದ್ಯ ಖರೀದಿಗೆ ಮುಗಿಬಿದ್ದ ಜನ

ಪಾಸಿಟಿವ್ ಕಂಡುಬಂದ ವ್ಯಕ್ತಿಗಳು ತಪ್ಪು ಫೋನ್ ನಂಬರ್ ನೀಡಿ, ನಾಪತ್ತೆಯಾಗ್ತಿರುವ ಪ್ರಕರಣವೂ ಹೆಚ್ಚುತ್ತಿದ್ದು, 3916 ಮಂದಿ ನಾಪತ್ತೆಯಾಗಿದ್ದಾರೆ. ಪೊಲೀಸರ ಸಹಾಯದಿಂದ ಅವರನ್ನು ಪತ್ತೆ ಹಚ್ಚಲಾಗುತ್ತಿದೆ.

ನಿನ್ನೆ 15,879 ಜನರಲ್ಲಿ ಪಾಸಿಟಿವ್ ದೃಢಪಟ್ಟಿತ್ತು, 259 ಮಂದಿ ಮೃತಪಟ್ಟಿದ್ದರು. 5378 ಜನ ಗುಣಮುಖರಾಗಿದ್ದರು. 3,62,696 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.