ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಮಾಡಿರುವ ಕಾರಣ ಇಂದಿನಿಂದ ನಗರದ ರಸ್ತೆಗಳಲ್ಲಿ ವಾಹನಗಳು ಗಿಜಿಗುಡುತ್ತಿವೆ.
ಕೆಂಪು ವಲಯ ಮತ್ತು ಕಂಟೈನ್ಮೆಂಟ್ ವಲಯ ಬಿಟ್ಟು ಉಳಿದ ಎಲ್ಲೆಡೆ ಬಸ್, ಆಟೋ, ಕ್ಯಾಬ್ ಸಂಚಾರ ಆರಂಭವಾಗಿದ್ದು, ಇಂದಿನಿಂದ ಸಹಜ ಜೀವನದತ್ತ ಸಿಲಿಕಾನ್ ಸಿಟಿ ಜೀವನ ಸಾಗುತ್ತಿದೆ.
ಮತ್ತೊಂದೆಡೆ ಕೊರೊನಾ ಮಾಹಾಮಾರಿ ಇನ್ನು ಇರೋದರಿಂದ ಭಯದಲ್ಲೇ ಜೀವನ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಇಷ್ಟು ದಿವಸ ಟ್ರಾಫಿಕ್ ಸಿಗ್ನಲ್ ಇದ್ದರೂ ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿ ತೆರಳುತ್ತಿದ್ದರು. ಆದರೆ, ಇಂದಿನಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ಪ್ರಕರಣ ದಾಖಲು ಮಾಡಲಾಗುತ್ತದೆ.
ನಗರದಲ್ಲಿ ಮತ್ತು ಜಿಲ್ಲೆಗಳಲ್ಲಿ ಸಂಚಾರ ನಡೆಸಬೇಕಾದರೆ ಪಾಸ್ಗಳ ಅಗತ್ಯತೆ ಇಲ್ಲ. ಒಂದು ವೇಳೆ ಟ್ರಾಫಿಕ್ ನಿಯಮಗಳನ್ನ ಉಲ್ಲಂಘನೆ ಮಾಡಿದರೆ ವಾಹನ ಸವಾರರ ಮೇಲೆ ದಂಡ ಹಾಕಲಿದ್ದಾರೆ.