ETV Bharat / state

ಕೋವಿಡ್ ಸಮಯವಷ್ಟೇ ಅಷ್ಟೇ ಅಲ್ಲ, ಇತರ ಸಮಯದಲ್ಲೂ ನಗರದ ಶೌಚಾಲಯಗಳಿಗೆ ಬೀಗ!

author img

By

Published : Dec 14, 2020, 10:14 PM IST

ಬಿಬಿಎಂಪಿ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ಹೇಳುವ ಪ್ರಕಾರ, ನಗರದಲ್ಲಿ 417 ಶೌಚಾಲಯಗಳಿದ್ದು, ಇದರಲ್ಲಿ ಶೇಕಡಾ 60 ರಷ್ಟು ಶೌಚಾಲಯಗಳು ಬಳಕೆಯಲ್ಲಿಲ್ಲ ಎಂದು ತಿಳಿಸಿದ್ದಾರೆ.

bangalore-city-toilets-closed
ನಗರದ ಶೌಚಾಲಯಗಳಿಗೆ ಬೀಗ

ಬೆಂಗಳೂರು: ರಾಜಧಾನಿ ಬಯಲು ಶೌಚ ಮುಕ್ತ ಎಂದು ಘೋಷಣೆಯಾಗಿದ್ದರೂ, ನಗರದಲ್ಲಿ ಕಟ್ಟಿಸಿರುವ ಅರ್ಧಕ್ಕರ್ಧ ಶೌಚಾಲಯಗಳು ನಿರುಪಯುಕ್ತವಾಗಿ ಖಾಲಿ ಬಿದ್ದಿವೆ. ಲಾಕ್​ಡೌನ್​​ ಸಮಯದಲ್ಲಿ ಶೌಚಾಲಯಗಳನ್ನು ಬಂದ್ ಮಾಡಲಾಗಿತ್ತು. ಹೆಚ್ಚಿನ ಕಾರ್ಮಿಕರು ಉತ್ತರ ಭಾರತದ ನಾನಾ ರಾಜ್ಯದವರಾಗಿದ್ದರಿಂದ ಕೆಲವರು ಊರುಗಳಿಗೂ ತೆರಳಿದ್ದರು. ಆದರೆ ಕಾರ್ಮಿಕರೆಲ್ಲ ವಾಪಸ್​ ಬಂದಿರುವುದರಿಂದ ಶೌಚಾಲಯಗಳು ಮತ್ತೆ ತೆರೆದಿವೆ. ಆದರೆ ಹೊಸದಾಗಿ ಕಟ್ಟಿಸಿರುವ ಹತ್ತಾರು ಶೌಚಾಲಯಗಳು, ನಿರ್ವಹಣೆಯಿಲ್ಲದೇ ಹಾಳಾದ ಇನ್ನೂರಕ್ಕೂ ಹೆಚ್ಚು ಶೌಚಾಲಯಗಳು ನಗರದಲ್ಲಿ ನಿರುಪಯುಕ್ತವಾಗಿ ಖಾಲಿ ಬಿದ್ದಿವೆ.

ಶೌಚಾಲಯಗಳಿಗೆ ಬೀಗ ಹಾಕಿರುವ ಕುರಿತು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಜನರ ತೆರಿಗೆ ಹಣವನ್ನು ದುಂದುವೆಚ್ಚ ಮಾಡಿ, ಬಳಕೆಗೂ ನೀಡದೇ ವ್ಯರ್ಥ ಮಾಡಲಾಗ್ತಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ಹೇಳುವ ಪ್ರಕಾರ, ನಗರದಲ್ಲಿ 417 ಶೌಚಾಲಯಗಳಿದ್ದು, ಇದರಲ್ಲಿ ಶೇಕಡಾ 60 ರಷ್ಟು ಶೌಚಾಲಯಗಳು ಬಳಕೆಯಲ್ಲಿಲ್ಲ ಎಂದು ತಿಳಿಸಿದ್ದಾರೆ.

ಯಶವಂತಪುರ ಸರ್ಕಲ್, ಮಲ್ಲೇಶ್ವರಂ 11 ನೇ ಮುಖ್ಯರಸ್ತೆ, ಹಾಗೂ ಸುಬ್ರಹ್ಮಣ್ಯನಗರ ವಾರ್ಡ್ ನಲ್ಲಿ ಹೊಸದಾಗಿ ಕಟ್ಟಿಸಿರುವ ಶೌಚಾಲಯಗಳನ್ನೇ ಇನ್ನೂ ಸಾರ್ವಜನಿಕ ಬಳಕೆಗೆ ಬಿಟ್ಟುಕೊಡದೆ ಹಾಗೇ ಬೀಗ ಜಡಿಯಲಾಗಿದೆ.

ಅಂಕಿ-ಅಂಶಗಳು: ನಗರದಲ್ಲಿ 417 ಸಾರ್ವಜನಿಕ ಶೌಚಾಲಯಗಳಿವೆ.‌ 17 ಸಮುದಾಯ ಶೌಚಾಲಯಗಳಿವೆ. ಇ-ಶೌಚಾಲಯಗಳು 72 ಇವೆ. ಇದರಲ್ಲಿ 32 ಕೆಟ್ಟುನಿಂತ ಕಾರಣ ಸ್ಥಳೀಯರು ಗಲಾಟೆ ಮಾಡಿದ ಬಳಿಕ ಅಲ್ಲಿಂದ ತೆರವು ಮಾಡಲಾಗಿದೆ. ಸಾರ್ವಜನಿಕ ಶೌಚಾಲಯಗಳಲ್ಲಿ ಕೆಲವೊಂದಷ್ಟು ಬಳಕೆಯಾಗದೆ ಬಂದ್ ಆಗಿವೆ. ಇದೀಗ ರಿಪೇರಿ ಮಾಡಿ, ಮತ್ತೆ ಆರಂಭಿಸಲು ರಿ-ಟೆಂಡರ್ ಕರೆಯಲಾಗಿದೆ.

ಓದಿ: ಸಭಾಪತಿಗಳು ಯಾವುದೇ ಪಕ್ಷಪಾತ ಮಾಡಿಲ್ಲ, ಜೆಡಿಎಸ್ ಬೆಂಬಲ ನೀಡುವ ವಿಶ್ವಾಸವಿದೆ: ಎಸ್​.ಆರ್.ಪಾಟೀಲ್

ಈ ಕುರಿತು ಸರ್ಫರಾಜ್ ಖಾನ್ ಮಾತನಾಡಿ, ಬೆಂಗಳೂರು ನಗರವನ್ನು ಓಡಿಎಫ್ ಪ್ಲಸ್, ಎಂದು ಘೋಷಣೆ ಮಾಡಿದ ಬಳಿಕ ನಗರದ ಶೌಚಾಲಯಗಳು ಕೂಡಾ ನಿಯಮ ಪ್ರಕಾರವಾಗಿ ಇರಬೇಕಾಗುತ್ತದೆ. ಟೈಲ್ಸ್ ಹಾಕಿದ ನೆಲ, ಪ್ರತೀ ಗಂಟೆಗೊಮ್ಮೆ ಸ್ವಚ್ಛತೆ, ಟಿಶ್ಯೂ ಪೇಪರ್, ಕೈತೊಳೆಯಲು ಸೋಪಿನ ವ್ಯವಸ್ಥೆ, ಈ ರೀತಿ ವ್ಯವಸ್ಥಿತವಾಗಿ ನವೀಕರಣ ಮಾಡಲಾಗ್ತಿದೆ ಎಂದರು. ಜೊತೆಗೆ ಖಾಸಗಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಇರುವ ರೀತಿ ಜನರೇ ಸ್ವಚ್ಛತೆಗೆ ರ್ಯಾಂಕಿಂಗ್ ಕೊಡುವ ವ್ಯವಸ್ಥೆಯೂ ಅಳವಡಿಸಬೇಕಾಗುತ್ತದೆ ಎಂದರು.

ಶೌಚಾಲಯ ಉಚಿತ ಬಳಕೆಗೆ ಜನರ ಆಗ್ರಹ
ನಗರದಲ್ಲಿ ಸಾಕಷ್ಟು ಶೌಚಾಲಯಗಳಿದ್ದರೂ, ಬಯಲು ಬಹಿರ್ದೆಸೆ ನಿಂತಿಲ್ಲ. ಕಾರಣ ಪ್ರತೀ ಶೌಚಾಲಯಗಳಲ್ಲೂ ಐದು ರೂಪಾಯಿ ಅಥವಾ ಮೂರು ರೂಪಾಯಿ ಕೊಟ್ಟೇ ಬಳಕೆ ಮಾಡಬೇಕಿದೆ. ಇದರಿಂದ ಕೆಲ ಜನರು ದುಡ್ಡು ಕೊಡಲು ಸಾಧ್ಯವಾಗದೇ ಹೊರಗೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಶೌಚಾಲಯಗಳನ್ನು ಬಳಕೆಗೆ ಉಚಿತವಾಗಿ ಕೊಡುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಲ್ಲಿದೆ.

ಆದರೆ ಟೆಂಡರ್​​​​​ದಾರರು, ಶೌಚಾಲಯ ನಿರ್ವಹಣೆ ಸಾಧ್ಯವಾಗೋದೇ ಜನ ಹಣ ಕೊಟ್ಟರೆ ಮಾತ್ರ ಎಂದಿದ್ದಾರೆ. ಹೀಗಾಗಿ ಯಾವ ರೀತಿ ಆ ಹಣಕ್ಕೆ ಪರ್ಯಾಯ ಮಾಡುವ ಬಗ್ಗೆ ಬಿಬಿಎಂಪಿ ಚಿಂತಿಸುತ್ತಿದೆ. ಸಧ್ಯ ಡ್ರಾಫ್ಟ್ ರಿಪೋರ್ಟ್ ತರಿಸಲಾಗಿದೆ. ಈ ಹಿಂದೆ ಹತ್ತು ಹದಿನೈದು ವರ್ಷಕ್ಕೆ ಕೊಟ್ಟ ಗುತ್ತಿಗೆಯನ್ನು ರದ್ದು ಮಾಡಿ, ನಿಯಮದ ಪ್ರಕಾರ ಐದು ವರ್ಷಕ್ಕೆ ಮಾತ್ರ ಕೊಡಲಾಗುವುದು ಎಂದರು. ಮಾರ್ಷಲ್ಸ್ ಮೂಲಕ ಈ ಪರಿಶೀಲನೆ ನಡೆಸಲಾಗ್ತಿದೆ. ಪ್ರತ್ಯೇಕ ಪಾಲಿಸಿಯನ್ನೂ ಸಿದ್ಧಪಡಿಸಲಾಗ್ತಿದೆ ಎಂದರು. ಆ ಪ್ರಕಾರ ಪೌರಕಾರ್ಮಿಕರ ಅವಲಂಬಿತರಿಗೆ, ವಿಧವೆಯರಿಗೆ ಟೆಂಡರ್ ನೀಡುವ ಆದೇಶ ಮಾಡಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.