ಬೆಂಗಳೂರು: ಫಾರ್ಚೂನ್ ಇಂಡಿಯಾ ನಿಯತಕಾಲಿಕೆ 2020ರ ಅಗ್ರಗಣ್ಯ 50 ಮಹಿಳಾ ಉದ್ಯಮಿಗಳ ಪಟ್ಟಿಯನ್ನು ಪ್ರಕಟಿಸಿದ್ದು ಫಾರ್ಚೂನ್ ಇಂಡಿಯಾ ಪ್ರಕಟಿಸಿರುವ ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮೂವರು ಮಹಿಳೆಯರು ಸ್ಥಾನ ಪಡೆದಿದ್ದಾರೆ.


ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.ಬೆಂಗಳೂರು ಮೂಲದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಬೈಜೂಸ್ ಸಂಸ್ಥೆಯ ದಿವ್ಯಾ ಗೋಕುಲ್ನಾಥ್ ಅವರು ಕೂಡಾ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡತಿ ಹಾಗೂ ಬೆಂಗಳೂರಿನ ಆಕರ್‍ಮಾಕ್ಸ್ ಸಂಸ್ಥೆಯ ಮುಖ್ಯಸ್ಥೆ ಸ್ನೇಹಾ ರಾಕೇಶ್ ಅವರು ಸ್ಥಾನ ಪಡೆದಿರುವುದು ವಿಶೇಷ. ಉದ್ಯಮ ವಲಯದಲ್ಲಿ ಉತ್ತಮ ಸಾಧನೆ ಮಾಡಿದ ಆರು ಮಹಿಳಾ ಉದ್ಯಮಿಗಳನ್ನು ಪರಿಚಯಿಸಲಾಗಿದೆ. ಅದರಲ್ಲಿ ಸ್ನೇಹಾ ಹೆಸರು ಕೂಡಾ ಸೇರಿದೆ. ಯೂರೋಪ್ ಸಂಸತ್ತಿನಲ್ಲಿ ಮಾತನಾಡಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆಯೊಂದಿಗೆ ಇತ್ತೀಚೆಗೆ ಫೋಬ್ಸ್ ಪತ್ರಿಕೆಯಲ್ಲೂ ಇವರನ್ನು ಗುರುತಿಸಲಾಗಿತ್ತು.
