ETV Bharat / state

'ಬೆಂಗಳೂರು 69' ಚಿತ್ರದ ಆಡಿಯೋ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ - ಬೆಂಗಳೂರು 69 ಆಡಿಯೋ ಬಿಡುಗಡೆ

'ಬೆಂಗಳೂರು 69' ಚಿತ್ರದ ಆಡಿಯೋ ಬಿಡುಗಡೆಗೊಳಿಸಿದ ನಟ, ನಿರ್ದೇಶಕ ರಿಷಬ್​ ಶೆಟ್ಟಿ, ಗುಣಮಟ್ಟದ ಚಿತ್ರಗಳನ್ನು ತೆರೆಗೆ ತರುವ ಪ್ರಯತ್ನವಾಗಬೇಕು ಎಂದು ಅಭಿಪ್ರಾಯಪಟ್ಟರು.

Bangalore 69 film to be released in December
ಬೆಂಗಳೂರು 69 ಚಿತ್ರದ ಆಡಿಯೋ ಬಿಡುಗಡೆ
author img

By

Published : Dec 1, 2019, 4:40 PM IST

ಬೆಂಗಳೂರು: ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಎಂದೇ ಕರೆಸಿಕೊಂಡಿರುವ 'ಬೆಂಗಳೂರು 69' ಚಿತ್ರದ ಆಡಿಯೋವನ್ನು ನಟ ರಿಷಬ್​ ಶೆಟ್ಟಿ ಬಿಡುಗಡೆಗೊಳಿಸಿದರು.

ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡರು ಆಗಮಿಸಿ ಚಿತ್ರದ ಆಡಿಯೋ ಜತೆಗೆ ಟೀಸರ್ ಕೂಡಾ ರಿಲೀಸ್ ಮಾಡಿದ್ರು.

ಬೆಂಗಳೂರು 69 ಚಿತ್ರದ ಆಡಿಯೋ ಬಿಡುಗಡೆ

ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಿಷಬ್ ಶೆಟ್ಟಿ, ಕನ್ನಡದಲ್ಲಿ ಈಚೆಗಿನ ದಿನಗಳಲ್ಲಿ ಅತಿ ಹೆಚ್ಚು ಚಿತ್ರಗಳು ನಿರ್ಮಾಣವಾಗುತ್ತಿವೆ‌. ಗುಣಮಟ್ಟದ ಚಿತ್ರ ತಯಾರಿಸುವುದು ಸವಾಲಿನ ಕೆಲಸವಾಗಿದೆ. ಇದರಿಂದ ಪರಭಾಷೆ ಚಿತ್ರಗಳು ಹೆಚ್ಚು ಮಾನ್ಯತೆ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಚಿತ್ರದ ಹಾಡುಗಳ ಬಗ್ಗೆ ಸಂತಸ ವ್ಯಕ್ತಪಡಿದರು. ನಿರ್ಮಾಪಕರು ಸಿನಿಮಾ ಬಿಡುಗಡೆ ವೇಳೆ ಸ್ವಲ್ಪ ತಾಳ್ಮೆ ವಹಿಸಿ ಬಿಡುಗಡೆಗೊಳಿಸಬೇಕು ಎಂದು ಸಲಹೆ ನೀಡಿದರು.

ನಿರ್ದೇಶಕ ಕ್ರಾಂತಿ ಚೈತನ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದ ಬೆಂಗಳೂರು 69 ಚಿತ್ರದಲ್ಲಿ ಹುಡುಗಿ ಅಪಹರಣದ ಸುತ್ತ ಕತೆಯ ಎಳೆ ಬಿಚ್ಚಿಕೊಳ್ಳುತ್ತವೆ. ಪವನ್ ಶೆಟ್ಟಿ, ಜಯದೇವನ್ ಮೋಹನ್, ತೆಲುಗಿನ ಶೆಫಿ ಮುಂತಾದವರು ನಟಿಸಿದ್ದು, ವಿಕ್ರಂ ಚಂದನ ಸಂಗೀತ ಸಂಯೋಜಿಸಿದ್ದಾರೆ. ಗುಲ್ಜಾರ್ ಬೆಂಗಳೂರು69 ಚಿತ್ರಕ್ಕೆ ಬಂಡವಾಳ ಹೂಡಿದ್ದು ಡಿಸೆಂಬರ್ ಅಂತ್ಯಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಆಲೋಚನೆಯಲ್ಲಿ ಚಿತ್ರತಂಡವಿದೆ.

Intro:ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಅನಿತಾ ಭಟ್, ಸಖತ್ ಹಾಟ್ ಅವತಾರದಲ್ಲಿ ಕಾಣಿಸಿರುವ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಬೆಂಗಳೂರು69 ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ-ನಿರ್ದೇಶಕ ರಿಷಬ್ ಶೆಟ್ಟಿ ,ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೇಗೌಡರು ಕಾರ್ಯದರ್ಶಿಗಳಾದ ಎನ್ಎಮ್ ಸುರೇಶ್ ,ಮಾಜಿ ಅಧ್ಯಕ್ಷರಾದ ಚಿನ್ನೇಗೌಡರು.ಹಾಗೂ ನಿರ್ದೇಶಕ ನಾಗಣ್ಣ ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಹಾಗೂ ಟೀಸರ್ ಲಾಂಚ್ ಮಾಡಿದರು ,ಅಲ್ಲದೆ ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ಮಾತಾನಾಡಿದ ರಿಷಬ್ ಶೆಟ್ಟಿ ,ನಮ್ಮ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚಿತ್ರಗಳು ನಿರ್ಮಾಣವಾಗುತ್ತಿವೆ‌. ನಾವು ಕ್ವಾಂಟಿಟಿ ಚಿತ್ರಗಳಿಗಿಂತ ಕ್ವಾಲಿಟಿ ಚಿತ್ರಗಳನ್ನು ನೀಡಬೇಕಾದ ಪರಿಸ್ಥಿತಿ ಎದುರಾಗಿದೆ, ಒಂದು ವಾರಕ್ಕೆ 10ರಿಂದ 12 ಚಿತ್ರಗಳು ರಿಲೀಸ್ ಆಗಿದ್ದು ಒಂದೇ ವಾರಕ್ಕೆ ಚಿತ್ರಮಂದಿರದಿಂದ ಮಾಯವಾಗುತ್ತಿವೆ .ಇದರ ಜೊತೆಗೆ ನಮಗೆ ಪರಭಾಷ ಚಿತ್ರಗಳ ಕಾಂಪಿಟಿಷನ್ ಹೆಚ್ಚಾಗಿದೆ ಇದರಿಂದ ನಮಗೆ ಚಿತ್ರಮಂದಿರ ಕೊರತೆ ಎದುರಾಗಿದೆ ಈ ಸಮಸ್ಯೆಯನ್ನು ನಾವುಗಳು ಅರ್ಥಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ವೇದಿಕೆ ಮೇಲಿದ್ದ ವಾಣಿಜ್ಯ ಮಂಡಳಿಯ ಅಧ್ಯಕ್ಷರಿಗೆ ಹೇಳಿದರು ಹಲದೆ ಚಿತ್ರದ ಟೀಚರ್ಗೆ ಮೆಚ್ಚುಗೆ ಮಾತುಗಳನ್ನಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Body:ನಂತರ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷರು ಚಿತ್ರದ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜೊತೆಗೆ ನಮ್ಮ ನಿರ್ಮಾಪಕರು ಸಿನಿಮಾಗಳನ್ನು ವರ್ಷಾನುಗಟ್ಟಲೆ ಸೂಟ್ ಮಾಡುತ್ತಾರೆ ಆದರೆ ರಿಲೀಸ್ ಮಾಡುವ ಸಮಯದಲ್ಲಿ ಆತುರಾತುರವಾಗಿ ಚಿತ್ರಗಳನ್ನು ಬಿಡುಗಡೆ ಮಾಡಿ ಚಿತ್ರಮಂದಿರಗಳ ಸಮಸ್ಯೆ ಎದುರಿಸುತ್ತಾರೆ. ಅದರಿಂದ ನಮ್ಮ ನಿರ್ಮಾಪಕರುಗಳು ಸಿನಿಮಾ ಬಿಡುಗಡೆ ವೇಳೆ ಸ್ವಲ್ಪ ತಾಳ್ಮೆಯಿಂದ ಸಿನಿಮಾವನ್ನು ರಿಲೀಸ್ ಮಾಡಬೇಕು ಎಂದು ಥಿಯೇಟರ್ಗಳ ನಿಯಂತ್ರಣದಲ್ಲಿ ಚೇಂಬರಿಗೆ ಜವಾಬ್ದಾರಿ ಇಲ್ಲ ಅದು ನಿರ್ಮಾಪಕರು ಪರಿಹರಿಸಿಕೊಳ್ಳಬೇಕು ಎನ್ನುವ ರೀತಿ ಹಾರಿಕೆಯ ಮಾತುಗಳನಾಡಿದ್ರು.

Conclusion:ಇನ್ನು ಬೆಂಗಳೂರು 69 ಚಿತ್ರವು ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರವನ್ನು ಕ್ರಾಂತಿ ಚೈತನ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರವು ಹುಡುಗಿ ಅಪಹರಣದ ಸುತ್ತ ಸುತ್ತಿದ್ದು ಒಬ್ಬ ಶ್ರೀಮಂತ ಹುಡುಗಿಯನ್ನು ಇಬ್ಬರು ಸ್ನೇಹಿತರು ಸೇರಿ ಮಾಡುತ್ತಾರೆ. ಈ ಕಿಡ್ನಾಪ್ ಹಿಂದೆ ಹಣದ ಬೇಡಿಕೆ ಇರುತ್ತದೆ. ಆದರೆ ಹುಡುಗಿಯ ತಂದೆ ಕಿಡ್ನಾಪರ್ಸ್ ಗೆ ಹಣ ಕೊಟ್ಟು ತನ್ನ ಮಗಳನ್ನು ಬಿಡಿಸಿಕೊಳ್ಳುತ್ತಾನ ? ಇಲ್ಲ ಬೇರೆ ಮಾರ್ಗವನ್ನು ಮೂಲಕ ತನ್ನ ಮಗಳನ್ನು ಕಿಡ್ನಾಪರ್ಸ್ ಗಳಿಂದ ರಕ್ಷಿಸುತ್ತಾನ ಎಂದುದು ಚಿತ್ರದ ಕಥೆಯಾಗಿದ್ದು. ಇನ್ನೂ ಕಿಡ್ನಾಪ್ ಆಗುವ ಹುಡುಗಿ ಪಾತ್ರದಲ್ಲಿ ಸಖತ್ ಬೊಲ್ಡ್ ಆಗಿ ಅನಿತಾ ಭಟ್ ನಟಿಸಿದ್ದಾರೆ.ಇವರ ಜೊತೆಗೆ ಪವನ್ ಶೆಟ್ಟಿ, ಜಯದೇವನ್ ಮೋಹನ್, ತೆಲುಗಿನ ಶೆಫಿ ಮುಂತಾದವರು ನಟಿಸಿದ್ದಾರೆ.ಇನ್ನೂ ಈ ಚಿತ್ರಕ್ಕೆ ವಿಕ್ರಂ ಚಂದನ ಸಂಗೀತ ಸಂಯೋಜಿಸಿದ್ದು, ಗುಲ್ಜಾರ್ ಬೆಂಗಳೂರು69 ಚಿತ್ರಕ್ಕೆ ಬಂಡವಾಳ ಹೂಡಿದ್ದು ಡಿಸೆಂಬರ್ ಅಂತ್ಯಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಅಲೋಚನೆಯಲ್ಲಿದೆ ಚಿತ್ರತಂಡ.

ಸತೀಶ ಎಂಬಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.