ಬೆಂಗಳೂರು: ಕಂಠೀರವ ಮೈದಾನದಲ್ಲಿ ನಟ ಪುನೀತ್ ರಾಜ್ ಕುಮಾರ್ಗೆ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ಧರಾಮಯ್ಯ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಸಿದ್ದರಾಮಯ್ಯ ಜೊತೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಸಹ ಆಗಮಿಸಿ ನಮಿಸಿದ್ದಾರೆ.
ಇತ್ತ ನಟಿ ಉಮಾಶ್ರೀ, ನವರಸ ನಾಯಕ ಜಗ್ಗೇಶ್ ಅಂತಿಮ ದರ್ಶನ ಪಡೆದಿದ್ದಾರೆ. ಇವರ ಜೊತೆ ತೆಲುಗು ನಟ ಬಾಲಕೃಷ್ಣ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ರಾಜ್ಕುಮಾರ್ ಕುಟುಂಬದ ಜೊತೆ ಒಡನಾಟ ಹೊಂದಿರುವ ನಂದಮೂರಿ ಬಾಲಕೃಷ್ಣ ಅಂತಿಮ ದರ್ಶನ ಪಡೆದಿದ್ದಾರೆ. ಇವರ ಜೊತೆ ಖ್ಯಾತ ಡ್ಯಾನ್ಸರ್ ಪ್ರಭುದೇವ ಸಹ ಅಂತಿಮ ನಮನ ಸಲ್ಲಿಸಿದ್ದಾರೆ.