ETV Bharat / state

ಬೆಂಗಳೂರಿನಿಂದ ಜೈಪುರಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲೇ ಮಹಿಳೆಗೆ ಹೆರಿಗೆ! - ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ

ಬೆಳಗ್ಗೆ 5:40ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ಹಾರಿದ ಇಂಡಿಗೋ 6ಇ 469 ವಿಮಾನದಲ್ಲಿ ಮಾರ್ಗ ಮಧ್ಯ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

baby girl was born on an Indigo flight
ಇಂಡಿಗೋ ವಿಮಾನದಲ್ಲಿ ಹೆಣ್ಣು ಮಗು ಜನನ
author img

By

Published : Mar 17, 2021, 10:43 PM IST

ದೇವನಹಳ್ಳಿ: ಬೆಂಗಳೂರು ನಗರದಿಂದ ಜೈಪುರಕ್ಕೆ ಹಾರಾಟ ನಡೆಸಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಮಹಿಳೆ ಸುರಕ್ಷಿತವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

baby girl was born on an Indigo flight
ಇಂಡಿಗೋ ವಿಮಾನದಲ್ಲಿ ಹೆಣ್ಣು ಮಗು ಜನನ

ಓದಿ: ಡ್ರಗ್ಸ್ ಪ್ರಕರಣ: ಗೋವಿಂದಪುರ ಪೊಲೀಸ್ ಠಾಣೆಗೆ ಟಾಲಿವುಡ್ ನಟ ತನೀಶ್ ಹಾಜರ್​​

ಬೆಳಗ್ಗೆ 5:40ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ಹಾರಿದ ಇಂಡಿಗೋ 6ಇ 469 ವಿಮಾನದಲ್ಲಿ ಮಾರ್ಗ ಮಧ್ಯ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಮಯದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕ ವೈದ್ಯೆ ಡಾ. ಸುಭಾನ್ ನಜಿರ್ ಮತ್ತು ವಿಮಾನದ‌ ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

ವಿಮಾನದಲ್ಲಿಯೇ ಮಹಿಳೆಗೆ ಹೆಣ್ಣು ಮಗು ಜನನವಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಜೈಪುರದಲ್ಲಿ ವಿಮಾನ ಲ್ಯಾಂಡ್ ಆದ ತಕ್ಷಣವೇ ಆಂಬ್ಯುಲೆನ್ಸ್​​​ನಲ್ಲಿ ತಾಯಿ-ಮಗುವನ್ನು ಆಸ್ಪತ್ರೆಗೆ ಕಳಿಸಲಾಗಿತು.

ಕೆಲ ತಿಂಗಳ ಹಿಂದೆ ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲೂ ಅವಧಿಪೂರ್ವ ಸುರಕ್ಷಿತ ಹೆರಿಗೆ ಆಗಿತ್ತು. ಜೈಪುರ ವಿಮಾನದಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿದ ವೈದ್ಯೆ ಡಾ. ಸುಭಾನ್ ನಜಿರ್ ಮತ್ತು ವಿಮಾನದ ಸಿಬ್ಬಂದಿಯನ್ನು ಗೌರವಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.