ETV Bharat / state

ರಾಜ್ಯದ ಮುಂದಿನ ಸಿಎಂ ರೇಸ್​ನಲ್ಲಿ ಸಂತೋಷ್, ಜೋಶಿ ಸೇರಿ ಹಲವರ ಹೆಸರು

author img

By

Published : Jul 22, 2021, 3:32 PM IST

ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ತಮ್ಮ ರಾಜೀನಾಮೆಯ ಸುಳಿವನ್ನು ನೀಡಿದ್ದಾರೆ. ಈಗಾಗಲೇ ಅವರು ರಾಜೀನಾಮೆ ನೀಡುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಅಧಿಕೃತವಾಗುವ ಸೂಚನೆ ಕಂಡು ಬಂದ ಹಿನ್ನೆಲೆ ಆಕಾಂಕ್ಷಿಗಳ ನಿರೀಕ್ಷೆಗಳು ಗರಿಗೆದರಿವೆ.

BL Santosh, Prahlad Joshi
ಬಿ.ಎಲ್ ಸಂತೋಷ್​, ಪ್ರಹ್ಲಾದ್ ಜೋಶಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವನ್ನು ಬಿ.ಎಸ್. ಯಡಿಯೂರಪ್ಪ ನೀಡುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸ್ಥಾನದ ರೇಸ್​ನಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್​, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿವೆ.

ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ತಮ್ಮ ರಾಜೀನಾಮೆಯ ಸುಳಿವನ್ನು ನೀಡಿದ್ದಾರೆ. ಈಗಾಗಲೇ ಅವರು ರಾಜೀನಾಮೆ ನೀಡುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಅಧಿಕೃತವಾಗುವ ಸೂಚನೆ ಕಂಡು ಬಂದ ಹಿನ್ನೆಲೆ ಆಕಾಂಕ್ಷಿಗಳ ನಿರೀಕ್ಷೆಗಳು ಗರಿಗೆದರಿವೆ.

ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬಿಜೆಪಿ ಕೇಂದ್ರ ಸಚಿವರು, ಸಂಸದರು, ರಾಷ್ಟ್ರೀಯ ಮುಖಂಡರು ಹಾಗೂ ಯಡಿಯೂರಪ್ಪ ಸಂಪುಟದ ಸದಸ್ಯರು ಹಾಗೂ ಕೆಲ ಶಾಸಕರು ಸೇರಿದಂತೆ ಹತ್ತಕ್ಕು ಹೆಚ್ಚು ಆಕಾಂಕ್ಷಿಗಳ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಡಿಸಿಎಂ ಅಶ್ವತ್ಥ್​​ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಹಾಗೂ ಸಚಿವ ಜಗದೀಶ್ ಶೆಟ್ಟರ್, ಶಾಸಕ ಅರವಿಂದ್ ಬೆಲ್ಲದ್, ಸಚಿವರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಸಾಕಷ್ಟು ಆಕಾಂಕ್ಷಿಗಳ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.

ಜುಲೈ 26ಕ್ಕೆ ತಮ್ಮ ಅಧಿಕಾರ ಅವಧಿಯ 2ನೇ ವರ್ಷ ಪೂರ್ಣಗೊಳಿಸಿರುವ ಬಿ. ಎಸ್. ಯಡಿಯೂರಪ್ಪ ಅಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ. 2023ಕ್ಕೆ ನಡೆಯುವ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಒಂದು ವರ್ಷ ಹತ್ತು ತಿಂಗಳು ಕಾಲಾವಧಿ ಇರುವ ಹಿನ್ನೆಲೆ ಮುಂಬರುವ ಚುನಾವಣೆಗಳನ್ನೂ ಪ್ರಮುಖವಾಗಿ ಪರಿಗಣಿಸಿಕೊಂಡು ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯನ್ನು ಹೈಕಮಾಂಡ್ ಮಾಡಬೇಕಿದೆ. ಅತ್ಯಂತ ಮಹತ್ವದ ಸವಾಲು ಪಕ್ಷದ ಹೈಕಮಾಂಡ್ ನಾಯಕರ ಮೇಲೆ ಇದ್ದು, ಯಾರನ್ನ ಮುಖ್ಯಮಂತ್ರಿಯಾಗಿಸುತ್ತಾರೆ ಎಂಬ ಕುತೂಹಲಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ.

ಕುತೂಹಲ ಹೆಚ್ಚುತ್ತಲೇ ಇದೆ: ಯುವ ಹಾಗೂ ಪಕ್ಷ ನಿಷ್ಠ ಮತ್ತು ಭ್ರಷ್ಟಾಚಾರರಹಿತ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಇದರ ಜೊತೆಜೊತೆಗೆ ಅನುಭವದ ಆಧಾರದ ಮೇಲೆ ಮುಖ್ಯಮಂತ್ರಿಗಳ ಆಯ್ಕೆ ಆಗಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗುವ ಸಿಎಂ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಹೆಚ್ಚುತ್ತಲೇ ಇದೆ.

ಕೆಲವೇ ದಿನಗಳಲ್ಲಿ ಉತ್ತರ: ಇದುವರೆಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡುವುದು ಅನುಮಾನ ಎಂಬ ಮಾತು ಕೂಡ ಕೇಳಿ ಬರುತ್ತಿತ್ತು. ಆದರೆ, ಇಂದು ಬೆಳಗ್ಗೆ ಬಿಎಸ್​ವೈ ತಮ್ಮ ರಾಜೀನಾಮೆ ಇಂಗಿತವನ್ನು ವ್ಯಕ್ತಪಡಿಸಿದ್ದು, ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಕುತೂಹಲ ಮುಂದುವರಿಯಲಿದೆ.

ಓದಿ: ರಾಜೀನಾಮೆ ಕುರಿತು ಸಿಎಂ ಸುಳಿವು: ಸಚಿವ ಸ್ಥಾನದ ಚಿಂತೆ, ಬಿಎಸ್​​​ವೈ ನಿವಾಸಕ್ಕೆ ಸಚಿವರ ದೌಡು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.