ETV Bharat / state

ಹಿಂಗಾರು ಹಂಗಾಮಿಗೆ ಸಿದ್ಧಗೊಂಡ ಕೃಷಿ ಇಲಾಖೆ: ಪೂರ್ವಭಾವಿ ಸಭೆ ನಡೆಸಿದ ಬಿ.ಸಿ.ಪಾಟೀಲ್

ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಬಿತ್ತನೆ ಕಾರ್ಯಗಳು ನಿರೀಕ್ಷೆಗಿಂತಲೂ ಉತ್ತಮವಾಗಿ ನಡೆಯುತ್ತಿದೆ. ಈ ಕುರಿತಂತೆ ಇಲಾಖೆಯ ಅಧಿಕಾರಿಗಳೊಂದಿಗೆ ಮುಂದಿನ ಕ್ರಮಗಳ ಕುರಿತು ಸಚಿವರು ಚರ್ಚೆ ನಡೆಸಿದ್ದಾರೆ.

B. C. Patil, who held a preliminary mee
ಪೂರ್ವಭಾವಿ ಸಭೆ ನಡೆಸಿದ ಬಿ.ಸಿ.ಪಾಟೀಲ್
author img

By

Published : Nov 5, 2020, 5:07 PM IST

ಬೆಂಗಳೂರು: ಈ ಬಾರಿ ಕೃಷಿ ಇಲಾಖೆ 2020-21ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ವಿವಿಧ ಕೃಷಿ ಬೆಳೆಗಳನ್ನು 32ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಕೈಗೊಳ್ಳುವ ಗುರಿಯನ್ನು ಹಮ್ಮಿಕೊಂಡಿದ್ದು, ಗುರಿ ತಲುಪಲು ಹಾಗೂ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಕಾಸಸೌಧದ ಕಚೇರಿಯಲ್ಲಿ ಇಂದು ಕೃಷಿ ಇಲಾಖಾಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದರು. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಮುಂಗಾರಿನಂತೆ ಹಿಂಗಾರಿನಲ್ಲಿಯೂ ಕೂಡ ಹೆಚ್ಚಿನ ಬಿತ್ತನೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಹಿಂಗಾರು ಬಿತ್ತನೆಗೆ ಬೇಕಾದ ರಸಗೊಬ್ಬರ ಸೇರಿದಂತೆ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿ ಸಚಿವರು ಮಾಹಿತಿ ಪಡೆದರು.

ಹಿಂಗಾರು ಹಂಗಾಮಿನಲ್ಲಿ 32 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ಈಗಾಗಲೇ 11.19 ಲಕ್ಷ ಹೆಕ್ಟೇರ್ ಅಂದರೆ ಶೇ.35ರಷ್ಟು ವಿಸ್ತೀರ್ಣದಲ್ಲಿ ಬಿತ್ತನೆ ಬೀಜ ಹಾಕಲಾಗಿದೆ. ಜೋಳ ಮತ್ತು ಕಡಲೆ ಹಿಂಗಾರು ಪ್ರಮುಖ ಬೆಳೆಗಳಾಗಿದ್ದು, ಕಳೆದ ಅಕ್ಟೋಬರ್ 29ರ ವರೆಗೆ ದ್ವಿದಳ ಧಾನ್ಯಗಳು 14.28 ಲಕ್ಷ ಹೆಕ್ಟೇರ್ ಗುರಿಯಲ್ಲಿ 5.94 ಲಕ್ಷ ಹೆಕ್ಟೇರ್ ಸಾಧನೆಯಾಗಿದೆ.

ಒಟ್ಟು ಆಹಾರ ಧಾನ್ಯಗಳ 27.54 ಲಕ್ಷ ಹೆಕ್ಟೇರ್ ಪೈಕಿ 9.73ರಷ್ಟು ಸಾಧನೆಯಾಗಿದ್ದು, 26.02 ಲಕ್ಷ ಟನ್ ಉತ್ಪಾದನೆಯಾಗಿದೆ. ಇನ್ನು 3.53ರಷ್ಟು ಎಣ್ಣೆಕಾಳುಗಳ ಗುರಿಯಿದ್ದು, ಈ ಪೈಕಿ 0.89 ಲಕ್ಷ ಹೆಕ್ಟೇರ್ ಸಾಧನೆಯಾಗಿ 2.81 ಲಕ್ಷ ಟನ್ ಉತ್ಪಾದನೆಯಾಗಿದೆ. 0.48 ಲಕ್ಷ ಹೆಕ್ಟೇರ್ ಹತ್ತಿ ಗುರಿಯಿದ್ದು, ಇದರಲ್ಲಿ 0.08 ಲಕ್ಷ ಹೆಕ್ಟೇರ್ ಸಾಧನೆ, 0.98 ಲಕ್ಷ ಟನ್ ಉತ್ಪಾದನೆಯಾಗಿದೆ. 0.43ರಷ್ಟು ಕಬ್ಬು ಗುರಿಯಲ್ಲಿ 0.49ರಷ್ಟು ಸಾಧನೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.

ರೈತರಿಗೆ ಪ್ರಮುಖ ಕೃಷಿ ಸಾಮಗ್ರಿಗಳಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಬರಾಜು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಪ್ರಮಾಣಿತ ಬಿತ್ತನೆ ಬೀಜದ ಅಂದಾಜು ಬೇಡಿಕೆ 3.28 ಲಕ್ಷ ಕ್ವಿಂಟಾಲ್ ಗಳಷ್ಟಿದ್ದು, ಇದುವರೆಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ 1,55,989.29 ಕ್ವಿಂಟಾಲ್​​​ಗಳಷ್ಟು ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.

ಹಂಗಾಮಿನಲ್ಲಿ 2.93 ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಿ ಸಕಾಲದಲ್ಲಿ ಪೂರೈಕೆಗಾಗಿ ಜಿಲ್ಲಾವಾರು, ಮಾಹೆವಾರು ಮತ್ತು ಸಂಸ್ಥೆವಾರು ಸರಬರಾಜು ಮಾಡುವ ಸಿದ್ದತೆ ಮಾಡಲಾಗಿದೆ. ಅಕ್ಟೋಬರ್ 1 ರಿಂದ 31ರ ವರೆಗೆ ಹಿಂಗಾರಿಗೆ 9.39 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಸರಬರಾಜು ಹಾಗೂ 9.62 ಲಕ್ಷ ಟನ್ ದಾಸ್ತಾನು ಇರುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಕತ್ರಿ, ಕೃಷಿ ನಿರ್ದೇಶಕ ಶ್ರೀನಿವಾಸ್, ಹೆಚ್ಚುವರಿ ನಿರ್ದೇಶಕ ಅಂತೋನಿ ಮರಿಯಾ ಇಮಾನ್ಯುಲ್ ಸೇರಿದಂತೆ ಮತ್ತಿತ್ತರ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.