ETV Bharat / state

ಹೆಚ್​​ಡಿಕೆ, ಮಾಜಿ ಸ್ಪೀಕರ್​​ ವಿರುದ್ಧ ಅನರ್ಹ ಶಾಸಕ ಬಿ.ಸಿ ಪಾಟೀಲ್ ಆಕ್ರೋಶ​ - ಶಾಸಕ ಸ್ಥಾನಕ್ಕೆ ರಾಜೀನಾಮೆ

ಮೈತ್ರಿ ಸರ್ಕಾರ ಬೀಳಿಸುವಲ್ಲಿ ಒಬ್ಬರಾಗಿರುವ ಅನರ್ಹ ಶಾಸಕ ಬಿಸಿ ಪಾಟೀಲ್​, ಜೆಡಿಎಸ್​​-ಕಾಂಗ್ರೆಸ್​ ಮೈತ್ರಿ ಸರ್ಕಾರ ಹಾಗೂ ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಸೇರಿ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಕೆಂಡಕಾರಿದ್ದಾರೆ.

ಅನರ್ಹ ಶಾಕಸ ಬಿ.ಸಿ.ಪಾಟೀಲ್​​
author img

By

Published : Sep 6, 2019, 2:17 AM IST

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸುಪ್ರೀಂಕೊರ್ಟ್​ ನಮ್ಮ ಪರವಾಗಿ ತೀರ್ಪು ನೀಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಯಾರದೋ ಮಾತನ್ನ ಕಟ್ಟಿಕೊಂಡು ಏಕಪಕ್ಷೀಯವಾಗಿ ನಡೆದುಕೊಂಡರು. ಸಿದ್ದರಾಮಯ್ಯ ಹಾಗೂ ದೇವೇಗೌಡರ ಮಾತು ಕೇಳಿಕೊಂಡು ನಮ್ಮನ್ನು ಮೊಲೆಗುಂಪು ಮಾಡಿದ್ದರು. ಸಮ್ಮಿಶ್ರ ಸರ್ಕಾರ ಬೀಳೋದಕ್ಕೆ ನಾವು 15 ಜನ ಶಾಸಕರು ಕಾರಣ. ಅದು ಸತ್ಯ ಯಾಕೆಂದರೆ ಹೆಚ್ ಡಿ ಕುಮಾರಸ್ವಾಮಿ ಅವರ ತಾರತಮ್ಯದ ರಾಜಕೀಯ ನಡೆಸಿದ್ದರು ಎಂದು ಕಿಡಿಕಾರಿದ್ದಾರೆ.

ಬಿ.ಸಿ.ಪಾಟೀಲ್​​

ಎಲೆಕ್ಷನ್ ಟೈಮ್​​ನಲ್ಲಿ ಮಂಡ್ಯ ಜಿಲ್ಲೆಗೆ 8,000 ಸಾವಿರ ಕೋಟಿ ಕೊಡ್ತೀನಿ ಅಂತಾರೆ ಕುಮಾರಸ್ವಾಮಿ. ಆದರೆ, ಬೇರೆ ಜಿಲ್ಲೆಗಳು ಕಣ್ಣಿಗೆ ಕಾಣಲಿಲ್ಲ. ಹಾವೇರಿ ಜಿಲ್ಲೆಗೆ ಅನ್ಯಾಯವಾಗಿದೆ. ಡಿಕೆ ಶಿವಕುಮಾರ್ ಬಂಧನದ ಬಗ್ಗೆ ಮೌನ ಮುರಿದ ಬಿಸಿ ಪಾಟೀಲ್, ನ್ಯಾಯಯುತವಾಗಿ ಅವರ ಬಳಿ ದಾಖಲೆ ಇದ್ದರೆ ಅವರು ನಿಜವಾಗಲೂ ಹೊರಗಡೆ ಬರುತ್ತಾರೆ. ಇಲ್ಲವಾದರೆ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು ಎಂದರು.

ಏನೇ ಆದರೂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಪಕ್ಕಾ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್​​​​ನಲ್ಲಿ ನ್ಯಾಯಕ್ಕಾಗಿ ಮೊರೆ ಹೋಗಿದ್ದೇವೆ, ನಮಗೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹ ಗೊಂಡಿರುವ ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ ನಮ್ಮ ಪರವಾಗಿ ತೀರ್ಪು ನೀಡುತ್ತೆ ಅಂತ ಬಿಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಇನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಫ್ಯಾರೋ ಮಾತನ್ನ ಕಟ್ಟಿಕೊಂಡು ಏಕಪಕ್ಷೀಯವಾಗಿ ನಡೆದುಕೊಂಡರು ಸಿದ್ದರಾಮಯ್ಯ ಹಾಗೂ ದೇವೇಗೌಡರ ಮಾತು ಕೇಳಿಕೊಂಡು ನಮ್ಮನ್ನು ಮಾಡಿದ್ದು ದೊಡ್ಡ ತಪ್ಪು. ಇನ್ನು ಸಮ್ಮಿಶ್ರ ಸರ್ಕಾರ ಬರೋದಕ್ಕೆ ನಾವು 15 ಜನ ಶಾಸಕರು ಕಾರಣ ಅದು ಸತ್ಯ ಯಾಕೆಂದರೆ ಎಚ್ ಡಿ ಕುಮಾರಸ್ವಾಮಿ ಅವರ ತಾರತಮ್ಯದ ರಾಜಕೀಯ..

Body: ಮಂಡ್ಯ ಎಲೆಕ್ಷನ್ ಟೈಮಲ್ಲಿ ಮಂಡ್ಯ ಜಿಲ್ಲೆಗೆ 8000 ಕೋಟಿ ಕೊಡ್ತೀನಿ ಅಂತಾರೆ ಕುಮಾರಸ್ವಾಮಿಗೆ ಬೇರೆ ಜಿಲ್ಲೆಗಳು ಕಣ್ಣಿಗೆ ಕಾಣಲಿಲ್ಲ ಹಾವೇರಿ ಜಿಲ್ಲೆಗೆ ಅನ್ಯಾಯವಾಯಿತು ಇನ್ನು ಡಿಕೆ ಶಿವಕುಮಾರ್ ಬಂಧನದ ಬಗ್ಗೆ ಮೌನ ಮುರಿದ ಬಿಸಿ ಪಾಟೀಲ್ ಡಿಕೆ ಶಿವಕುಮಾರ್ ನ್ಯಾಯಯುತವಾಗಿ ಇದ್ದರೆ ಅವರು ನಿಜವಾಗ್ಲೂ ಹೊರಗಡೆ ಬರುತ್ತಾರೆ ಇಲ್ಲಾಂದ್ರೆ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು ಏನೇ ಆದ್ರೂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಪಕ್ಕ ಅಂತ ಬಿಸಿ ಪಾಟೀಲ್ ಹೇಳಿದ್ದಾರೆ ಇನ್ನೊಂದು ಕಡೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಕ್ಕಾಗಿ ಮೊರೆ ಹೋಗಿದ್ದೇವೆ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುವ ನಂಬಿಕೆ ಇದೆ ಅಂತ ಬಿಸಿ ಪಾಟೀಲ್ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು

ಬಿಸಿ ಪಾಟೀಲ್ ಬೈಟ್

Conclusion: ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.