ETV Bharat / state

ಸಿಲಿಕಾನ್ ಸಿಟಿಯಲ್ಲಿ ಆಯುಧ ಪೂಜೆ:  ಭರ್ಜರಿ ವ್ಯಾಪಾರಕ್ಕೆ ವ್ಯಾಪಾರಿಗಳು ಫುಲ್ ಖುಷ್ - flower and fruit celebration in Bengaluru

ಕಳೆದ ಮೂರು ದಿನಗಳಿಂದ ಕಡಿಮೆ ಬೆಲೆಗೆ ಸಿಗುತ್ತಿದ್ದ ಆಯುಧಪೂಜೆಯ ಅಗತ್ಯ ವಸ್ತುಗಳಾದ ಹೂವು, ಕುಂಬಳಕಾಯಿ, ಬಾಳೆ ಕಂಬದ ದರ ಇಂದು ಡಬಲ್ ಆಗಿತ್ತು.

ಆಯುಧ ಪೂಜೆಗೆ ನಡೆದ ಭರ್ಜರಿ ವ್ಯಾಪಾರ
ಆಯುಧ ಪೂಜೆಗೆ ನಡೆದ ಭರ್ಜರಿ ವ್ಯಾಪಾರ
author img

By

Published : Oct 4, 2022, 9:19 PM IST

ಬೆಂಗಳೂರು: ದಸರಾ ಹಬ್ಬದ ಸಡಗರ ಜೋರಾಗುತ್ತಿದ್ದಂತೆ ಹೂವು-ಹಣ್ಣುಗಳ ಬೆಲೆ ಏರಿಕೆಯಾಗಿದೆ. ಆಯುಧ ಪೂಜೆ ಹಿನ್ನೆಲೆ ಇಂದು ಬೆಳಿಗ್ಗೆಯಿಂದಲೇ ಜನ ಮಾರುಕಟ್ಟೆಗಳಿಗೆ ಮುಗಿಬಿದ್ದು ಖರೀದಿಗೆ ಮುಂದಾಗಿರುವುದರಿಂದ ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡಿದ್ದಾರೆ.

ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಜನ ಸಾಗರ ಕಂಡು ಬರುತ್ತಿದ್ದು, ಕೆ ಆರ್ ಮಾರುಕಟ್ಟೆಯಲ್ಲಿ ಬೀದಿ ಬದಿಯಲ್ಲೇ ಭರ್ಜರಿ ವ್ಯಾಪಾರ ನಡೆಯುತ್ತಿರುವುದರಿಂದ ರಸ್ತೆಗಳಲ್ಲಿ ವಾಹನ ಸಂಚಾರ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಲೆ ಏರಿಕೆ: ಕಳೆದ ಮೂರು ದಿನಗಳಿಂದ ಕಡಿಮೆ ಬೆಲೆಗೆ ಸಿಗುತ್ತಿದ್ದ ಆಯುಧಪೂಜೆಯ ಅಗತ್ಯ ವಸ್ತುಗಳಾದ ಹೂವು, ಕುಂಬಳಕಾಯಿ, ಬಾಳೆ ಕಂಬದ ದರ ಇಂದು ಡಬಲ್ ಆಗಿತ್ತು. ಕಳೆದ ವಾರ 10 ರೂ ಇದ್ದ ಕೆ. ಜಿ ಕುಂಬಳಕಾಯಿ ಇಂದು 30 ರಿಂದ 40 ರೂಗಳಿಗೆ ಏರಿಕೆಯಾಗಿದೆ. ಹೂವಿನ ದರ ದುಪ್ಪಟ್ಟಾಗಿತ್ತು.

ವ್ಯಾಪಾರಿಗಳು ಫುಲ್ ಖುಷ್: ಹಬ್ಬ ಆಚರಿಸಲು ಸಾಧ್ಯವಾಗದ ಸಿಲಿಕಾನ್ ಸಿಟಿ ಜನ ಬೆಲೆ ಏರಿಕೆಯಾದರೂ ಭರ್ಜರಿ ವ್ಯಾಪಾರ ಮಾಡಿದ್ದು ಕಂಡು ಬಂತು. ನಾಳೆ ವಿಜಯದಶಮಿಗೆ ಮತ್ತಷ್ಟು ಭರ್ಜರಿ ವ್ಯಾಪಾರವಾಗುವ ನಿರೀಕ್ಷೆ ಇರುವುದರಿಂದ ವ್ಯಾಪಾರಿಗಳು ಫುಲ್ ಖುಷ್ ಮೂಡಿನಲ್ಲಿದ್ದಾರೆ.

ಓದಿ: ಸಾಂಸ್ಕೃತಿಕ ನಗರದಲ್ಲಿ ಜಂಬೂ ಸವಾರಿಯ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.