ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ಕಾಯ್ದೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಹಾಗೂ ಗೊಂದಲಗಳಿವೆ. ಇದನ್ನು ಸರಿಪಡಿಸುವ ಕೆಲಸ ಆಗಬೇಕಾಗಿದೆ ಎಂದು ವಕೀಲ ವಿವೇಕ್ ರೆಡ್ಡಿ ತಿಳಿಸಿದ್ದಾರೆ.
ಹೈಕೋರ್ಟ್ ಮುಂಭಾಗದಲ್ಲಿ ವಕೀಲ ಸಂಘಟನೆಗಳು ಕೇಂದ್ರದ ರಾಷ್ಟ್ರೀಯ ಪೌರತ್ವ ಕಾಯ್ದೆ ಪರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇಳೆ ಮಾತನಾಡಿದ ವಿವೇಕ್ ರೆಡ್ಡಿ, ಸಿಎಎ ಕಾಯ್ದೆ ಬಗ್ಗೆ ಅನೇಕ ಗೊಂದಲ ಹಾಗೂ ತಪ್ಪು ಕಲ್ಪನೆಗಳಿವೆ. ಇದಕ್ಕೆ ಕಾರಣ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು. ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪೌರತ್ವ ಕಾಯ್ದೆಯು ನೆರೆಯ ದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿರುವ ಅನಿವಾಸಿ ಭಾರತಿಯರಿಗೆ ಪೌರತ್ವ ನೀಡುವ ಉದ್ದೇಶವೇ ಹೊರತು ಕಿತ್ತುಕೊಳ್ಳುವುದಲ್ಲ. ಹಿಂದೂಗಳ ವಿರುದ್ಧ ನಿಂತರೆ ನಾವು ಪ್ರಗತಿಪರರು ಎಂದು ಕೊಂಡಿದ್ದಾರೆ. ಹಿಂದುಗಳ ಪರವಾಗಿ ನಿಲ್ಲುವವರರು ಸಹ ಪ್ರಗತಿಪರರು ಆಗಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.