ETV Bharat / state

ಕೊನೆಗೂ ಬದುಕಲಿಲ್ಲ ಆಟೋ ಚಾಲಕ ರಕ್ಷಿಸಿದ್ದ ಶಿಶು.... ತಾಯಿ ಆರೈಕೆ ಕಾಣದೇ ಕಣ್ಮುಚ್ಚಿದ ಮಗು!

ಕಸದ ತೊಟ್ಟಿಯಲ್ಲಿ ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದ ನವಜಾತ ಶಿಶು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.

auto driver rescued baby died
ಕೊನೆಗೂ ಬದುಕಲಿಲ್ಲ ಆಟೋ ಚಾಲಕ ರಕ್ಷಿಸಿದ್ದ ಶಿಶು
author img

By

Published : Apr 23, 2020, 8:59 PM IST

ಬೆಂಗಳೂರು: ಯಶವಂತಪುರದ ಬಳಿ‌ ಕಸದ ರಾಶಿಯಲ್ಲಿ ಆಟೋ ಚಾಲಕ ನಾಗರಾಜ್ ಎಂಬುವವರು ರಕ್ಷಿಸಿದ್ದ ನವಜಾತ ಶಿಶು ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಕಸದ ರಾಶಿಯಲ್ಲಿ ಬಿದ್ದಿದ್ದ ಮಗುವಿನ ಮೇಲೆ ಐದಾರು ನಾಯಿಗಳು ದಾಳಿ ನಡೆಸುತ್ತಿರುವ ವೇಳೆ ಆಟೋ ಚಾಲಕ ನಾಗರಾಜ್ ರಕ್ಷಣೆ ಮಾಡಿ, ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು.

ಯಶವಂತಪುರದಲ್ಲಿ ಕಸದ ರಾಶಿಯಲ್ಲಿದ್ದ ಮಗುವಿಗೆ ಮರು ಜನ್ಮ ನೀಡಿದ ಆಟೋ ಡ್ರೈವರ್!

ಕೇವಲ 800 ಗ್ರಾಂ ತೂಕ ಹೊಂದಿದ್ದ ಗಂಡು ಬುದುಕುಳಿಯುವ ಸಾಧ್ಯತೆ ಕಡಿಮೆ, ಆದಷ್ಟು ಪ್ರಯತ್ನ ಮಾಡುತ್ತೇವೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಿಶು ಕೊನೆಯುಸಿರೆಳೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಟೋ ಚಾಲಕ ನಾಗರಾಜ್ ಮಗು ಬದುಕುತ್ತೆ ಅನ್ನೋ ಕನಸಿನಲ್ಲಿದ್ದೆ. ಒಂದು ವೇಳೆ ಮಗು ಬದುಕಿದ್ದರೆ ನಾನೇ ಅದರ ಆರೈಕೆ ಮಾಡುತ್ತಿದ್ದೆ. ಆದರೆ, ಮಗು ಕೊನೆಯುಸಿರೆಳೆದಿದ್ದು, ಅದನ್ನು ಎಸೆದ ತಾಯಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.