ETV Bharat / state

ಸ್ನೇಹಿತನ ಪರ ಜಗಳ: ಬೆಂಗಳೂರಲ್ಲಿ ಬರ್ಬರವಾಗಿ ರೌಡಿಶೀಟರ್ ಕೊಲೆಗೈದ ಆಟೋ ಚಾಲಕರು - ಆಟೋ ಚಾಲಕರೊಂದಿಗೆ ಜಗಳ

ಸ್ನೇಹಿತನ ಪರವಾಗಿ ಆಟೋ ಚಾಲಕರೊಂದಿಗೆ ಜಗಳವಾಡಿದ ರೌಡಿಶೀಟರ್​ನನ್ನು ಶನಿವಾರ ತಡರಾತ್ರಿ ಕೊಲೆ ಮಾಡಿರುವ ಘಟನೆ ಬೈಯ್ಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರೌಡಿಶೀಟರ್ ಬರ್ಬರ ಹತ್ಯೆ
rowdy sheeter murder
author img

By

Published : Oct 9, 2022, 2:25 PM IST

ಬೆಂಗಳೂರು: ಆಟೋ ಚಾಲಕರ ನಡುವಿನ ಜಗಳಕ್ಕೆ ಎಂಟ್ರಿಯಾಗಿದ್ದ ರೌಡಿಶೀಟರ್ ತಡರಾತ್ರಿ ಕೊಲೆಯಾಗಿರುವ ಘಟನೆ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಹುಲ್ ಕೊಲೆಯಾದ ರೌಡಿಶೀಟರ್. ಬೈಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯ ಬಳಿ ನಿನ್ನೆ ರಾತ್ರಿ ಈ ಪ್ರಕರಣ ನಡೆದಿದೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಪಾಲ್ ರವಿ ಹತ್ಯೆ ಪ್ರಕರಣದ ಐದನೇ ಆರೋಪಿಯಾಗಿ ಜೈಲು ಸೇರಿದ್ದ ರಾಹುಲ್, ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದ. ಜೀವನಕ್ಕಾಗಿ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ತಿರುಪತಿಗೆ ತೆರಳುತ್ತಿದ್ದ ಕಾನ್ಸ್​ಟೇಬಲ್​ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನಿನ್ನೆ ರಾತ್ರಿ ಕೃಷ್ಣಯ್ಯನಪಾಳ್ಯದ ಆಟೋ ಸ್ಟ್ಯಾಂಡ್ ಬಳಿ ರಾಹುಲ್ ಹೋಗಿದ್ದ.‌ ಈ ವೇಳೆ ಆಟೋ ನಿಲ್ಲಿಸುವ ವಿಚಾರವಾಗಿ ಸ್ನೇಹಿತ ಮುರುಗನ್ ಹಾಗೂ ಸತ್ಯವೇಲು ಎಂಬುವನೊಂದಿಗೆ ಜಗಳವಾಗಿದೆ. ಸ್ನೇಹಿತ ಮುರುಗನ್ ಪರವಾಗಿ ಸತ್ಯವೇಲುನೊಂದಿಗೆ ರಾಹುಲ್ ಕಿರಿಕ್ ಮಾಡಿಕೊಂಡಿದ್ದಾನೆ. ನಾನು ರೌಡಿಶೀಟರ್, ನಿನ್ನನ್ನು ಮುಗಿಸಿ ಬಿಡುವೆ ಎಂದು ಸತ್ಯವೇಲು ಹಾಗೂ ಜೊತೆಗಿದ್ದ ಅರುಣ್​ಗೆ ಧಮ್ಕಿ ಹಾಕಿದ್ದಾನೆ.

ಇದರಿಂದ ಸಿಟ್ಟಿಗೆದ್ದ ಸತ್ಯವೇಲು ಹಾಗೂ ಸಹಚರ ರಾತ್ರೋರಾತ್ರಿ ಆಟೋದಲ್ಲಿ ಬಂದು ಮಾರಕಾಸ್ತ್ರಗಳಿಂದ ರಾಹುಲ್ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.