ETV Bharat / state

Heart attack: ಆಟೋ ಚಾಲನೆ ವೇಳೆ ದಿಢೀರ್​ ಎದೆನೋವು.. ಚಾಲಕ ಸ್ಥಳದಲ್ಲೇ ಸಾವು - ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿ

ಆಟೋ ಚಾಲನೆ ಸಂದರ್ಭ ಹೃದಯಾಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

heart_attack_death
ಚಾಲಕ ಸಾವು
author img

By ETV Bharat Karnataka Team

Published : Aug 22, 2023, 5:12 PM IST

ಬೆಂಗಳೂರು : ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಟೋ ಚಲಾಯಿಸುತ್ತಿದ್ದ ವ್ಯಕ್ತಿಗೆ ಹಠಾತ್​ನೇ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿರುವ ಘಟನೆ ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಮೃತರನ್ನು ಬಿಳೇಕಹಳ್ಳಿಯ ಸೋಮೇಶ್ವರ ಬಡಾವಣೆಯ ಆಟೋ ಚಾಲಕ ತಿಮ್ಮೇಶ್ (35) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ತಿಮ್ಮೇಶ್ ಅವರು ಆಟೋ ಚಲಾಯಿಸಿಕೊಂಡು ಹೋಗುವಾಗ ಹಠಾತ್​ ಹೃದಯಾಘಾತವಾಗಿದೆ. ಕೂಡಲೇ ಅವರು ಚಲಿಸುತ್ತಿದ್ದ ಆಟೋವನ್ನು ನಿಲ್ಲಿಸಿದ್ದಾರೆ. ಕೆಲ‌ ಕ್ಷಣ‌ ಎದೆ ಸವರಿಸಿಕೊಂಡು ಆಟೋದಿಂದ ಕೆಳಗಿಳಿದು ಹೋಗಿದ್ದು, ಕೆಲ‌ವೇ ಕ್ಷಣಗಳಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಆಟೋದಿಂದ ಕೆಳಗಿಳಿದು ಕೊನೆ ಬಾರಿ ನಡೆದು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : ರಾಮನಗರ: ಹೃದಯಾಘಾತವಾಗಿ ಕೋರ್ಟ್​ ಅಟೆಂಡರ್ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.