ಬೆಂಗಳೂರು : ರ‍್ಯಾಪಿಡೋ ಕ್ಯಾಪ್ಟನ್ ತಡೆದ ಆಟೋ ಚಾಲಕನೊಬ್ಬ ಆತನ ಕೈಯ್ಯಲ್ಲಿದ್ದ ಹೆಲ್ಮೆಟ್ ಒಡೆದು ಹಾಕಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಅನುಚಿತವಾಗಿ ವರ್ತಿಸಿರುವ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ನಿಲ್ದಾಣದ ಬಳಿ ಗ್ರಾಹಕರನ್ನು ತನ್ನ ಸ್ಕೂಟರ್ಗೆ ಹತ್ತಿಸಿಕೊಂಡ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಆಟೋ ಚಾಲಕ, ಪುಡಿ ರೌಡಿಯಂತೆ ಪುಂಡಾಟಿಕೆ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದ ವಿವಿಧ ಮಹಾನಗರಗಳಲ್ಲಿ ರ‍್ಯಾಪಿಡೋ ಸೇರಿದಂತೆ ಹಲವು ಆ್ಯಪ್ ಆಧಾರಿತ ದ್ವಿಚಕ್ರ ವಾಹನ ಟ್ಯಾಕ್ಸಿ ಸೇವೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಆಟೋ, ಟ್ಯಾಕ್ಸಿಗಿಂತಲೂ ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವುದರಿಂದ ಜನರು ಹೆಚ್ಚೆಚ್ಚು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ದಿನದ ದುಡಿಮೆ ನಂಬಿಕೊಂಡು ಬದುಕುವ ಆಟೋ ಚಾಲಕರಿಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ, ರ‍್ಯಾಪಿಡೋದಂತಹ ಸಂಸ್ಥೆಗಳು ಯಾವುದೇ ದಾಖಲೆಗಳನ್ನ ಪಡೆಯದೇ ಅನ್ಯ ರಾಜ್ಯ, ದೇಶದವರನ್ನು ಬೇಕಾದರೂ ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಆಟೋ ಚಾಲಕರ ವಾದ. ಇದೇ ನಿಟ್ಟಿನಲ್ಲಿ ಆಗಾಗ್ಗೆ ಈ ರೀತಿ ಬೈಕ್, ಟ್ಯಾಕ್ಸಿ ಚಾಲಕರನ್ನ ತಡೆದು ನಿಂದಿಸುವುದು, ಧಮ್ಕಿ ಹಾಕುವಂತಹ ಘಟನೆಗಳು ನಡೆಯುತ್ತಲೇ ಇವೆ.
-
Strict action should be taken against this auto driver under the law.
— freedom of speech B,lore (@freedomlore1) March 5, 2023 " class="align-text-top noRightClick twitterSection" data="
Is there no such thing as law in Bangalore City?@BlrCityPolice @BlrCityPolice @CPBlr @tv9kannada pic.twitter.com/Uaa4Am9OPV
">Strict action should be taken against this auto driver under the law.
— freedom of speech B,lore (@freedomlore1) March 5, 2023
Is there no such thing as law in Bangalore City?@BlrCityPolice @BlrCityPolice @CPBlr @tv9kannada pic.twitter.com/Uaa4Am9OPVStrict action should be taken against this auto driver under the law.
— freedom of speech B,lore (@freedomlore1) March 5, 2023
Is there no such thing as law in Bangalore City?@BlrCityPolice @BlrCityPolice @CPBlr @tv9kannada pic.twitter.com/Uaa4Am9OPV
ಇದನ್ನೂ ಓದಿ: ರ‍್ಯಾಪಿಡೋ ಸಂಸ್ಥೆಯಿಂದ ಕೋವಿಡ್ ವಾರಿಯರ್‌ಗಳಿಗೆ ಕೃತಜ್ಞತೆ ಸಲ್ಲಿಕೆ
ಇತ್ತ ಸಾರ್ವಜನಿಕರು ಮಾತ್ರ ಆಟೋ ಚಾಲಕರ ವರ್ತನೆಯ ವಿರುದ್ಧ ಕಿಡಿಕಾರುತ್ತಿದ್ದಾರೆ. "ಮೊದಲನೆಯದಾಗಿ ನಗರದಲ್ಲಿ ಆಟೋ ಚಾಲಕರು ಮೀಟರ್ ಹಾಕಿ ಆಟೋ ಸೇವೆ ನೀಡುತ್ತಿಲ್ಲ. ಗ್ರಾಹಕರು ಕರೆದ ಸ್ಥಳಕ್ಕೆ ಬರಲು ಒಪ್ಪದೇ ದುಪ್ಪಟ್ಟು ಹಣ ಕೇಳುತ್ತಾರೆ. ಅದರ ಬದಲು ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುವ ಬೈಕ್, ಟ್ಯಾಕ್ಸಿ ಬಳಸಿದರೆ ತಪ್ಪೇನು?" ಎಂಬುದು ಸಾರ್ವಜನಿಕರ ವಾದ.
ಪ್ರತಿ ಪ್ರಜೆಯೂ ದೇಶದಲ್ಲಿ ತಾನು ಇಚ್ಛಿಸಿದ ಸ್ಥಳದಲ್ಲಿ ಉದ್ಯೋಗ ಮಾಡಬಹುದಾಗಿದೆ. ಆದ್ದರಿಂದ ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸದ್ಯ ವೈರಲ್ ಆಗಿರುವ ವಿಡಿಯೋ ಆಧರಿಸಿ ಇಂದಿರಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಆಟೋ ಚಾಲಕನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಗ್ಯಾಂಗ್ನಿಂದ ಹಲ್ಲೆ: ಸಿಸಿಟಿವಿ ದೃಶ್ಯ
ರ್‍ಯಾಪಿಡೋ ಸೇವೆ ಹೇಗಿರುತ್ತದೆ?: ಗ್ರಾಹಕರು ಮೊಬೈಲ್‌ನಲ್ಲಿ ರ್‍ಯಾಪಿಡೋ ಮೊಬೈಲ್ ಆ್ಯಪ್ ಅನ್ನು ಮೊದಲು ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ತಾವು ಪ್ರಯಾಣಿಸುವ ರೈಡ್ ಅನ್ನು ಬುಕ್ ಮಾಡಬೇಕಾಗುತ್ತದೆ. ಹೀಗೆ ಆನ್ಲೈನ್ನಲ್ಲಿ ಬುಕ್ ಮಾಡಿದ ಕೆಲವೇ ಹೊತ್ತಿನಲ್ಲಿ ಗ್ರಾಹಕರ ಬಳಿಗೆ ಬೈಕ್ ಬರುತ್ತದೆ. ಬೈಕ್ ಓಡಿಸುವ ವ್ಯಕ್ತಿಯನ್ನು ರ್‍ಯಾಪಿಡೋ ಕ್ಯಾಪ್ಟನ್ ಎಂದು ಕರೆಯಲಾಗುತ್ತದೆ. ಪ್ರಯಾಣಿಕರ ಬಳಿಗೆ ಬಂದ ಕ್ಯಾಪ್ಟನ್, ಬೈಕ್‌ನಲ್ಲಿ ಕೂರಿಸಿಕೊಂಡು ಅವರು ಹೋಗಬೇಕಾದ ಸ್ಥಳಕ್ಕೆ ತಲುಪಿಸುತ್ತಾನೆ.
ಇದನ್ನೂ ಓದಿ: ತುಂಬಿ ತುಳುಕುತ್ತಿದ್ದ ಪಿಕಪ್ ವಾಹನದ ರನ್ನಿಂಗ್ ವೇಳೆ ಕಳಚಿ ಬಿದ್ದ ಟೈರ್.. ಮುಂದೇನಾಯ್ತು ನೋಡಿ!