ಬೆಂಗಳೂರು: ಬೆಂಗಳೂರಿನಲ್ಲಿ ಆಸ್ಟ್ರೇಲಿಯನ್ ಕಾನ್ಸುಲೇಟ್ ಕಚೇರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತಿದೆ. ಈ ಸಂಬಂಧ ಭಾರತದಲ್ಲಿ ಆಸ್ಟ್ರೇಲಿಯಾದ ಕಾನ್ಸಲ್ ಜನರಲ್ ಬ್ಯಾರಿ ಓ ಫ್ಯಾರೆಲ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಕರ್ನಾಟಕ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಂಧವ್ಯವನ್ನು ಬಲಪಡಿಸಲು ನಿರ್ಧರಿಸಲಾಯಿತು.
ದೇಶದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ. ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವ ಹೊಂದಲು ರಾಜ್ಯ ಉತ್ಸುಕವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ದಕ್ಷಿಣ ಭಾರತದ ಆಸ್ಟ್ರೇಲಿಯನ್ ಕಾನ್ಸಲ್ ಜನರಲ್ ಸಾರಾ ಕಿರ್ಲೆವ್, ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಆಸ್ಟ್ರೇಲಿಯನ್ ಕಾನ್ಸುಲೆಟ್ ಜನರಲ್ನ ನಿಯೋಜಿತ ಡೆಪ್ಯುಟಿ ಕಾನ್ಸಲ್ ಜನರಲ್ ಹ್ಯುಂಗ್ - ಮಿನ್ ಕಿಮ್, ರಾಜ್ಯದ ಐಟಿ ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
-
ಭಾರತದಲ್ಲಿನ ಆಸ್ಟ್ರೇಲಿಯನ್ ಹೈ ಕಮಿಷನರ್ ಬ್ಯಾರಿ ಓ ' ಫಾರೆಲ್ ಅವರು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
— CM of Karnataka (@CMofKarnataka) June 1, 2023 " class="align-text-top noRightClick twitterSection" data="
ದಕ್ಷಿಣ ಭಾರತದ ಆಸ್ಟ್ರೇಲಿಯನ್ ಕಾನ್ಸಲ್ ಜನರಲ್ ಸಾರಾ ಕಿರ್ಲೆವ್, ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಆಸ್ಟ್ರೇಲಿಯನ್ ಕಾನ್ಸುಲೆಟ್ ಜನರಲ್ ನ ನಿಯೋಜಿತ ಡೆಪ್ಯುಟಿ ಕಾನ್ಸಲ್ ಜನರಲ್ ಹ್ಯುಂಗ್… pic.twitter.com/60WGPkMfah
">ಭಾರತದಲ್ಲಿನ ಆಸ್ಟ್ರೇಲಿಯನ್ ಹೈ ಕಮಿಷನರ್ ಬ್ಯಾರಿ ಓ ' ಫಾರೆಲ್ ಅವರು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
— CM of Karnataka (@CMofKarnataka) June 1, 2023
ದಕ್ಷಿಣ ಭಾರತದ ಆಸ್ಟ್ರೇಲಿಯನ್ ಕಾನ್ಸಲ್ ಜನರಲ್ ಸಾರಾ ಕಿರ್ಲೆವ್, ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಆಸ್ಟ್ರೇಲಿಯನ್ ಕಾನ್ಸುಲೆಟ್ ಜನರಲ್ ನ ನಿಯೋಜಿತ ಡೆಪ್ಯುಟಿ ಕಾನ್ಸಲ್ ಜನರಲ್ ಹ್ಯುಂಗ್… pic.twitter.com/60WGPkMfahಭಾರತದಲ್ಲಿನ ಆಸ್ಟ್ರೇಲಿಯನ್ ಹೈ ಕಮಿಷನರ್ ಬ್ಯಾರಿ ಓ ' ಫಾರೆಲ್ ಅವರು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
— CM of Karnataka (@CMofKarnataka) June 1, 2023
ದಕ್ಷಿಣ ಭಾರತದ ಆಸ್ಟ್ರೇಲಿಯನ್ ಕಾನ್ಸಲ್ ಜನರಲ್ ಸಾರಾ ಕಿರ್ಲೆವ್, ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಆಸ್ಟ್ರೇಲಿಯನ್ ಕಾನ್ಸುಲೆಟ್ ಜನರಲ್ ನ ನಿಯೋಜಿತ ಡೆಪ್ಯುಟಿ ಕಾನ್ಸಲ್ ಜನರಲ್ ಹ್ಯುಂಗ್… pic.twitter.com/60WGPkMfah
ಡಿಸಿಎಂ ಡಿಕೆಶಿ ಭೇಟಿ: ಆಸ್ಟ್ರೇಲಿಯ ಮತ್ತು ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಜಲ ಸಂಪನ್ಮೂಲ, ಕೌಶಲ್ಯ ಹಾಗೂ ನಗರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಬಗ್ಗೆ ಆಸ್ಟ್ರೇಲಿಯಾ ಹೈ ಕಮಿಷನರ್ ಬ್ಯಾರಿ ಫರೆಲ್ ಜತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾಲೋಚನೆ ನಡೆಸಿದರು. ಬ್ಯಾರಿ ಫರೆಲ್ ಅವರು, ದಕ್ಷಿಣ ಭಾರತದ ಕೌನ್ಸೆಲ್ ಜನರಲ್ ಸಾರಾ ಕಿರ್ಲೆವ್ ಜತೆ ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿದರು.
ಯುವ ಸಮುದಾಯಕ್ಕೆ ಹೆಚ್ಚು ಉದ್ಯೋಗ ಅವಕಾಶಗಳು ಲಭ್ಯವಾಗುವಂತೆ ಯೋಜನೆಗಳನ್ನು ರೂಪಿಸಲು ಸಹಕರಿಸುವಂತೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಬೆಂಗಳೂರಲ್ಲಿ ಸುಸಜ್ಜಿತ ರಸ್ತೆ, ಸುಗಮ ವಾಹನ ಸಂಚಾರಕ್ಕೆ ಅಗತ್ಯವಿರುವ ಯೋಜನೆಗಳ ಅನುಷ್ಠಾನಕ್ಕೆ ಕೈ ಜೋಡಿಸುವಂತೆ ಅವರು ಹೇಳಿದರು. ಅಭಿವೃದ್ಧಿ ಯೋಜನೆಗಳ ಪರಿಶೀಲನೆಗೆ ಆಸ್ಟ್ರೇಲಿಯಾಗೆ ಬರುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ಬ್ಯಾರಿ ಫರೆಲ್ ಆಹ್ವಾನ ನೀಡಿದರು. ಖಂಡಿತ ಬರುವುದಾಗಿ ಶಿವಕುಮಾರ್ ಸಮ್ಮತಿಸಿದ್ದಾರೆ.
ಐಪೋನ್ ಘಟಕ ಸ್ಥಾಪಿಸಲು ಭೂಮಿ ಹಸ್ತಾಂತರ: ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿ ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್ (ಫಾಕ್ಸ್ಕಾನ್) ಕಂಪನಿಗೆ ಐಫೋನ್ ಅಸೆಂಬ್ಲಿ ಘಟಕವನ್ನು ಸ್ಥಾಪಿಸಲು ಜುಲೈ 1ರ ಹೊತ್ತಿಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. 2024ರ ಏಪ್ರಿಲ್ 1ರ ವೇಳೆಗೆ ಬೆಂಗಳೂರಿನ ದೇವನಹಳ್ಳಿ ಸ್ಥಾಪಿಸಲಿರುವ ಐಫೋನ್ ಅಸೆಂಬ್ಲಿ ಘಟಕದಲ್ಲಿ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಭೂಮಿ ಹಸ್ತಾಂತರ ಮಾಡಲಾಗುವುದು ಎಂದು ಹೇಳಿದ್ದಾರೆ. ಜಾರ್ಜ್ ಚು ಅವರ ನೇತೃತ್ವದಲ್ಲಿ ಫಾಕ್ಸ್ಕಾನ್ ಕಂಪನಿಯ ಉನ್ನತ ಅಧಿಕಾರಿಗಳ ತಂಡವು ಸೌಜನ್ಯದ ಭೇಟಿ ನೀಡಿದ್ದ ವೇಳೆ ಸಚಿವರು ಈ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ರೈತನ ಕೈ ಹಿಡಿದ ದ್ರಾಕ್ಷಿ ಬೆಳೆ - ಉತ್ತಮ ಬೆಲೆಯಿಂದ ರೈತನ ಮೊಗದಲ್ಲಿ ಮಂದಹಾಸ