ಬೆಂಗಳೂರು: ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಲಿದ್ದು, ಇತರೆ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸುವವರ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಆಯಾ ಜಿಲ್ಲೆಗಳ ಉಸ್ತುವಾರಿ ಹೊತ್ತಿರುವ ಸಚಿವರು ಅವರವರ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಲಿದ್ದು, ಮೂರು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.
ಧ್ವಜಾರೋಹಣ ನೆರವೇರಿಸುವರ ಪಟ್ಟಿ:
*ಬಾಗಲಕೋಟೆ - ಡಿಸಿಎಂ ಗೋವಿಂದ ಕಾರಜೋಳ
*ರಾಮನಗರ - ಡಿಸಿಎಂ ಅಶ್ವಥನಾರಾಯಣ
*ರಾಯಚೂರು - ಲಕ್ಷ್ಮಣ ಸವದಿ
*ಶಿವಮೊಗ್ಗ - ಕೆ.ಎಸ್ ಈಶ್ವರಪ್ಪ
*ಧಾರವಾಡ - ಜಗದೀಶ್ ಶೆಟ್ಟರ್
*ಚಿತ್ರದುರ್ಗ - ಬಿ. ಶ್ರೀರಾಮುಲು
*ಚಾಮರಾಜನಗರ - ಸುರೇಶ್ ಕುಮಾರ್
*ಕೊಡಗು - ವಿ ಸೋಮಣ್ಣ
*ಚಿಕ್ಕಮಗಳೂರು - ಸಿ.ಟಿ ರವಿ
*ಹಾವೇರಿ - ಗೃಹ ಸಚಿವ ಬಸವರಾಜ ಬೊಮ್ಮಾಯಿ
*ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ
*ತುಮಕೂರು - ಜೆ.ಸಿ ಮಾಧುಸ್ವಾಮಿ
*ಗದಗ - ಸಿ.ಸಿ ಪಾಟೀಲ್
*ಕೋಲಾರ - ಹೆಚ್ ನಾಗೇಶ್
*ಬೀದರ್ - ಪ್ರಭು ಚೌಹಾಣ್
*ವಿಜಯಪುರ - ಶಶಿಕಲಾ ಜೊಲ್ಲೆ
*ಬಳ್ಳಾರಿ - ಆನಂದ್ ಸಿಂಗ್
*ದಾವಣಗೆರೆ - ಬೈರತಿ ಬಸವರಾಜ್
*ಮೈಸೂರು - ಎಸ್.ಟಿ ಸೋಮಶೇಖರ್
*ಕೊಪ್ಪಳ - ಬಿ.ಸಿ ಪಾಟೀಲ್
*ಚಿಕ್ಕಬಳ್ಳಾಪುರ - ಡಾ.ಕೆ ಸುಧಾಕರ್
*ಮಂಡ್ಯ - ಕೆ.ಸಿ ನಾರಾಯಣ ಗೌಡ
*ಉತ್ತರಕನ್ನಡ - ಶಿವರಾಮ್ ಹೆಬ್ಬಾರ್
*ಬೆಳಗಾವಿ - ರಮೇಶ್ ಜಾರಕಿಹೊಳಿ
*ಹಾಸನ - ಕೆ. ಗೋಪಾಲಯ್ಯ
ಕಲಬುರಗಿ, ಉಡುಪಿ, ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ.