ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತ ಖಾಸಗಿ ಆಸ್ಪತ್ರೆಗಳು ಆಕಾಶದೆತ್ತರ ಬಿಲ್ ಹಾಕಿ ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿವೆ.
ಈ ಬಗ್ಗೆ ಟೀಟ್ವ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಣಕ್ಕಿಂತ ಮಾನವೀಯತೆ ದೊಡ್ಡದು. ಹಣ ಕಟ್ಟಿ ಇಲ್ಲಎಂದರೆ ಮೃತದೇಹ ಕೊಡಲ್ಲ ಅನ್ನುತ್ತಿರುವ ಮಡಿವಾಳದ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಯ ವರ್ತನೆ ತೀರಾ ಅಮಾನವೀಯ. ತಂದೆಯ ಮೃತದೇಹಕ್ಕಾಗಿ ಮಗಳು ಕಣ್ಣೀರಿಡುತ್ತಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಕೂಡಲೇ ಈ ಮಹಿಳೆಯ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
-
ಹಣಕ್ಕಿಂತ ಮಾನವೀಯತೆ ದೊಡ್ಡದು. ಹಣ ಕಟ್ಟಿ ಇಲ್ಲ ಅಂದ್ರೆ ಮೃತದೇಹ ಕೊಡಲ್ಲ ಅನ್ನುತ್ತಿರುವ ಮಡಿವಾಳದ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಯ ವರ್ತನೆ ತೀರಾ ಅಮಾನವೀಯ. ತಂದೆಯ ಮೃತದೇಹಕ್ಕಾಗಿ ಮಗಳು ಕಣ್ಣೀರಿಡುತ್ತಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಕೂಡಲೇ ಈ ಮಹಿಳೆಯ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. pic.twitter.com/HpTV3rDXkp
— Dr Sudhakar K (@mla_sudhakar) August 3, 2020 " class="align-text-top noRightClick twitterSection" data="
">ಹಣಕ್ಕಿಂತ ಮಾನವೀಯತೆ ದೊಡ್ಡದು. ಹಣ ಕಟ್ಟಿ ಇಲ್ಲ ಅಂದ್ರೆ ಮೃತದೇಹ ಕೊಡಲ್ಲ ಅನ್ನುತ್ತಿರುವ ಮಡಿವಾಳದ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಯ ವರ್ತನೆ ತೀರಾ ಅಮಾನವೀಯ. ತಂದೆಯ ಮೃತದೇಹಕ್ಕಾಗಿ ಮಗಳು ಕಣ್ಣೀರಿಡುತ್ತಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಕೂಡಲೇ ಈ ಮಹಿಳೆಯ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. pic.twitter.com/HpTV3rDXkp
— Dr Sudhakar K (@mla_sudhakar) August 3, 2020ಹಣಕ್ಕಿಂತ ಮಾನವೀಯತೆ ದೊಡ್ಡದು. ಹಣ ಕಟ್ಟಿ ಇಲ್ಲ ಅಂದ್ರೆ ಮೃತದೇಹ ಕೊಡಲ್ಲ ಅನ್ನುತ್ತಿರುವ ಮಡಿವಾಳದ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಯ ವರ್ತನೆ ತೀರಾ ಅಮಾನವೀಯ. ತಂದೆಯ ಮೃತದೇಹಕ್ಕಾಗಿ ಮಗಳು ಕಣ್ಣೀರಿಡುತ್ತಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಕೂಡಲೇ ಈ ಮಹಿಳೆಯ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. pic.twitter.com/HpTV3rDXkp
— Dr Sudhakar K (@mla_sudhakar) August 3, 2020
ತೀವ್ರ ಉಸಿರಾಟದ ತೊಂದರೆಯಿಂದ ಜು.21 ರಂದು ಮಡಿವಾಳದದಲ್ಲಿ ಇರುವ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೋವಿಡ್ ಪರೀಕ್ಷೆ ನಡೆಸಿದಾಗ ಎರಡು ಬಾರಿ ನೆಗೆಟಿವ್ ರಿಪೋರ್ಟ್ ಬಂದಿದೆ. ಬಳಿಕ ವೈದ್ಯರೇ ಪಕ್ಕದ ಜನರೆಲ್ ವಾರ್ಡ್ಗೆ ಶಿಫ್ಟ್ ಮಾಡಲಾಗುತ್ತೆ ಎಂದು ತಿಳಿಸಿದ್ದರು ಎಂದು ಮೃತ ನ್ಯಾಮತ್ ಪಾಷಾ ಮಗಳು ಅಮರೀನ್ ತಾಜ್ ಹೇಳಿದರು. ಇದಾದ ಬಳಿಕ ನಿಮ್ಮ ತಂದೆ ಕೊರೊನಾ ಪಾಸಿಟಿವ್ ಬಂದಿದೆ ಎಂದರು. ಚಿಕಿತ್ಸೆ ಮುಂದುವರೆಸುವಂತೆ ನಾವು ಹೇಳಿದ್ದವು. ಆದರೆ 12 ದಿನ ಕಳೆದರೂ, ತಂದೆಯ ವರದಿಯಾಗಲಿ, ಆರೋಗ್ಯ ಚೇತರಿಕೆ ಬಗ್ಗೆಯಾಗಲಿ ಮಾಹಿತಿ ನೀಡಿಲ್ಲ. ಪ್ರತಿ ಸಲ ಕೇಳಿದರೂ ಸಬೂಬು ಹೇಳಿ ಕಳುಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಿನ್ನೆ ದಿಢೀರ್ ಅಂತ ಕರೆ ಮಾಡಿ ನಿಮ್ಮ ತಂದೆ ಇನ್ನಿಲ್ಲ ಅಂತ ಸುದ್ದಿ ಮುಟ್ಟಿಸಿದ್ದರು. 5 ಲಕ್ಷ ಬಿಲ್ ಮಾಡಿದ್ದು, ಈಗಾಗಲೇ ಒಂದು ಲಕ್ಷ ಪಾವತಿ ಮಾಡಿದ್ದೇವೆ. ಉಳಿದ ಹಣ ಕಟ್ಟಿ ಆಮೇಲೆ ಮೃತ ದೇಹ ಕೊಡುತ್ತೇವೆ ಎನ್ನುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಕೂಡ ಕೊಟ್ಟಿದ್ದೇವೆ ಎಂದು ಅಮರೀನ್ ತಾಜ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.