ಬೆಂಗಳೂರು: ಹಿಂದೂ ಮುಖಂಡರ ಹತ್ಯೆ ಮಾಡಲು ಯತ್ನ ಮಾಡಿ ಸಿಕ್ಕಿಬಿದ್ದಿರೋ ಹಂತಕರು ದಿನಕ್ಕೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕುತ್ತಿದ್ದು, ಮುಸ್ಲಿಂ ವಿರೋಧಿ ಕೆಲಸ ಮಾಡುವವರ ವಿರುದ್ಧ ಸೇಡು ತೀರಿಸಿಕೊಳ್ಳಲು, ಇದೇ ರೀತಿಯ ಕೃತ್ಯವೆಸಗಿರುವುದಾಗಿ ಸಿಸಿಬಿ ಅಧಿಕಾರಿಗಳ ಎದುರು ಬಾಯಿ ಬಿಟ್ಟಿದ್ದಾರೆ.
ಇನ್ನು ಈ ಬಂಧಿತ ಆರೋಪಿಗಳಾದ ಇರ್ಫಾನ್ ಅಲಿಯಾಸ್ ಮೊಹಮ್ಮದ್, ಸೈಯದ್ ಅಕ್ಬರ್, ಸೈಯದ್ ಸಿದ್ದಿಕ್ ಅಕ್ಬರ್, ಅಕ್ಬರ್ ಪಾಷಾ, ಸನಾ, ಸಾಧಿಕ್ ಮುಸ್ಲಿಂರ ವಿರುದ್ಧ ಮಾತಾಡುವವರು, ಹಾಗೆ ಹಿಂದೂಗಳ ಬಗ್ಗೆ ಹೆಚ್ಚು ಒಲವು ಹೊಂದಿರುವವರ ಪಟ್ಟಿ ರೆಡಿ ಮಾಡಿಕೊಂಡಿರುವ ವಿಚಾರ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.
ಆರೋಪಿಗಳು ಈ ಕೃತ್ಯ ಎಸಗುವ ಮುಂಚೆ ಕೋಡ್ ವರ್ಡ್ ಬಳಕೆ ಮಾಡ್ತಿದ್ರು. ಈ ಕೋಡ್ ವರ್ಡ್ ಮೂಲಕ ಯಾವುದಾದರು ಕೃತ್ಯ ಮಾಡುವ ಮೊದಲು ಯಾರಿಗೂ ಅನುಮಾನ ಬಾರದ ರೀತಿ ಹಲ್ಲೆ, ಹಿಂಸೆ, ಗಲಭೆ ಯಾವ ರೀತಿ ಸೃಷ್ಟಿ ಮಾಡಬೇಕೆಂದು ಈ ಕೋಡ್ ವರ್ಡ್ ಮೂಲಕ ಕೃತ್ಯ ಎಸಗಲು ಫ್ಲಾನ್ ಮಾಡಿರುವ ವಿಚಾರ ಸದ್ಯ ಸಿಸಿಬಿ ತನಿಖೆಯಲ್ಲಿ ತಿಳಿದುಬಂದಿದೆ.
ಸಿಸಿಬಿ ವಿಚಾರಣೆ ಮುಗಿದ ತಕ್ಷಣ ಎನ್ಐಎ ಕೂಡ ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಲಿದೆ. ಈ ಆರೋಪಿಗಳು ಸದ್ಯ ದಕ್ಷಿಣ ವಿಭಾಗ ಸಂಸದ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆಯನ್ನ ಮಾತ್ರ ಟಾರ್ಗೆಟ್ ಮಾಡದೇ ಹಲವು ಹಿಂದೂ ಮುಖಂಡರನ್ನ ಟಾರ್ಗೆಟ್ ಮಾಡಿರುವ ವಿಚಾರ ಬಾಯಿ ಬಿಟ್ಟ ಹಿನ್ನೆಲೆ ಎನ್ಐಎ ಕೂಡ ವಿಚಾರಣೆ ನಡೆಸಲಿದೆ.