ETV Bharat / state

ಗಲಭೆಕೋರರು ನಮ್ಮನ್ನು ಸಜೀವದಹನ ಮಾಡುವ ಪ್ಲಾನ್​ ಹೊಂದಿದ್ದರು: ಅಖಂಡ ಶ್ರೀನಿವಾಸಮೂರ್ತಿ

ನಮ್ಮ ಮನೆ ಮೇಲೆ ದಾಳಿ ನಡೆಸಿದ ಘಟನೆ ಪೂರ್ವ ನಿಯೋಜಿತವಾಗಿ ನಡೆದಿದೆ. ನಮ್ಮನ್ನ ಸಂಪೂರ್ಣವಾಗಿ ಸಜೀವದಹನ ಮಾಡುವ ಪ್ಲಾನ್ ಆರೋಪಿಗಳದ್ದಾಗಿತ್ತು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

akhanda srinivasamurthy
ಅಖಂಡ ಶ್ರೀನಿವಾಸಮೂರ್ತಿ
author img

By

Published : Aug 16, 2020, 10:13 AM IST

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಡಿ.ಜೆ. ಹಳ್ಳಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದು, ಎಫ್​ಐಆರ್ ಪ್ರತಿ ಲಭ್ಯವಾಗಿದೆ. ಪೊಲೀಸರು KPDLP_U|S_2 1961( Karnataka prevention of distraction and loss of property) ಐಪಿಸಿ ಸೆಕ್ಷನ್​ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಖಂಡ ಶ್ರೀನಿವಾಸಮುರ್ತಿ ನೀಡಿದ ದೂರಿನಲ್ಲೇನಿದೆ?

'ನಾನು ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಎಂಎಲ್​ಎ ಆಗಿದ್ದು, ನಮ್ಮ ಅಣ್ಣ, ತಮ್ಮನ ಜೊತೆ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದೆ. 11ನೇ ತಾರಿಖಿನಂದು ಸುಮಾರು 8ಗಂಟೆಗೆ ಎರಡು ಸಾವಿರದಿಂದ ಮೂರು ಸಾವಿರ ಜನ ಪೂರ್ವ ನಿಯೋಜಿತವಾಗಿ ಮಾರಕಾಸ್ತ್ರ ಹಿಡಿದುಕೊಂಡು ಏಕಾಏಕಿ ನುಗ್ಗಿದ್ದಾರೆ. ನುಗ್ಗಿದವರು ನಮ್ಮ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಮನೆ ಬಳಿ ಇದ್ದ ಕಾರು, ಮತ್ತು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಿ‌ ಮೊದಲು ಬೆಂಕಿ ಹಚ್ಚಿ ತದ ನಂತರ ಮನೆಗೆ ಬೆಂಕಿ ಹಚ್ಚಿದ್ದಾರೆ'.

  • ಸುಮಾರು 500ಗ್ರಾಂ ಚಿನ್ನಾಭರಣದ ಮೌಲ್ಯ 20 ಲಕ್ಷ ರೂ.
  • ಕಾವಲು ಭೈರಸಂದ್ರ ವಾಸದ ಮನೆಯ ಮೂಲಪತ್ರ
  • ಶ್ಯಾಂಪುರ ಮುಖ್ಯರಸ್ತೆಯಲ್ಲಿನ ಕಟ್ಟಡದ ಮೂಲಪತ್ರ
  • ಸಾದಹಳ್ಳಿ‌ ಜಮೀನಿನ ಮೂಲಪತ್ರ ಹಾಗೂ ಇತರೆ ಜಮೀನು ಪತ್ರ
  • ವಾಹನಗಳ ಮೂಲ ದಾಖಲೆ
  • ಗಾಡ್ರೇಜ್​, 6 ಕಂಪ್ಯೂಟರ್, 2 ಲ್ಯಾಪ್‌ಟಾಪ್, 2 ಟೆಲಿಫೋನ್, 1 ಟಿವಿ, 2 ಕಾರ್ಯ ನಿರ್ವಹಣೆ ಕಡತ ಸೇರಿ ಒಟ್ಟು 50 ಲಕ್ಷ ರೂ. ಮೌಲ್ಯ
  • ಹೊಂಡಾ ಬ್ರಿಯೋ ಕಾರು, ಯಮಹಾ ಆರ್ 15, ರಾಯಲ್ ಎನ್​ಫೀಲ್ಡ್ 2, ಬಜಾಜ್ ಸ್ಕೂಟರ್, ಒಟ್ಟು 20 ಲಕ್ಷ ರೂ. ಮೌಲ್ಯ
  • ಮಗನಿಗೆ ಸೇರಿದ 250ಗ್ರಾಂ ಚಿನ್ನಾಭರಣ 10 ಲಕ್ಷ ಮೌಲ್ಯ
  • ಕಾರು ನೋಂದಣಿ ಪತ್ರ, ಪಾಸ್ ಪೋರ್ಟ್, ವಿದ್ಯಾಭ್ಯಾಸದ ಎಲ್ಲಾ ಪ್ರಮಾಣಪತ್ರಗಳು ನಾಶವಾಗಿವೆ ಎಂದು ವಿವರಿಸಿರುವ ಶಾಸಕರು ಈ ಘಟನೆ ಪೂರ್ವ ನಿಯೋಜಿತವಾಗಿ ನಡೆದಿದೆ. ನಮ್ಮನ್ನ ಸಂಪೂರ್ಣವಾಗಿ ಸಜೀವದಹನ ಮಾಡುವ ಪ್ಲಾನ್ ಆರೋಪಿಗಳದ್ದಾಗಿತ್ತು. ಇವರ ವಿರುದ್ಧ‌ ಕಾನೂನು ಕ್ರಮ ಕೈಗೊಳ್ಳಿ ಎಂದು ಶಾಸಕರು ಮನವಿ ಮಾಡಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.