ETV Bharat / state

ಕ್ರೀಡಾಪಟುಗಳು ಇದೊಂದೇ ಪ್ರಶಸ್ತಿಗೆ ತೃಪ್ತರಾಗಬಾರದು: ಸಿಎಂ ಬಿಎಸ್​ವೈ ಕಿವಿಮಾತು

ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಿದರು.

cm-bsy
ಸಿಎಂ ಬಿಎಸ್​ವೈ
author img

By

Published : Nov 2, 2020, 1:39 PM IST

Updated : Nov 2, 2020, 3:47 PM IST

ಬೆಂಗಳೂರು: ಕ್ರೀಡಾಪಟುಗಳು ಇದೊಂದೆ ಪ್ರಶಸ್ತಿಗೆ ತೃಪ್ತರಾಗದೆ ದೇಶವನ್ನು ವಿಶ್ವದಲ್ಲಿ ಬೆಳಗುವಂತೆ ಶ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರೋತ್ಸಾಹಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​​​ನಲ್ಲಿ ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು, ತರಬೇತುದಾರರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಏಕಲವ್ಯ ಎಂದಾಕ್ಷಣ ನೆನಪಾಗುವುದು ಗುರುದಕ್ಷಿಣೆಯಾಗಿ ತನ್ನ ಹೆಬ್ಬೆರಳನ್ನೇ ನೀಡಿದ ಶ್ರೇಷ್ಠ ವ್ಯಕ್ತಿ. ಹೀಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಬಿಎಸ್​ವೈ ಮಾತನಾಡಿದರು.

ನಂತರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಅಡಿ ವಿಶೇಷ ಸಲ್ಲಿಸಿದ ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಧಾನಿ ಆಶಯದಂತೆ ವಿಶ್ವ ಮಟ್ಟದಲ್ಲಿ ನಿಮ್ಮ ಸಾಧನೆ ತೋರಬೇಕು. ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಪುರಾಣದಲ್ಲಿ ಬರುವ ಏಕಲವ್ಯ ನಿರಂತರ ಸಾಧನೆಯಿಂದ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆ. ತರಬೇತುದಾರರು ಹೆಚ್ಚಿನ ಕ್ರೀಡಾಪಟುಗಳನ್ನು ಗುರುತಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅವರನ್ನೂ ಗೌರವಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ವತಿಯಿಂದ ಖೆಲೋ ಇಂಡಿಯಾ, ಫಿಟ್ ಇಂಡಿಯಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. 2028 ರಲ್ಲಿ ಒಲಂಪಿಕ್ಸ್ ನಲ್ಲಿ ರಾಜ್ಯದ ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆ ಹಾರಿಸುವ ಕೆಲಸ ಮಾಡಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡಲು ರಾಜ್ಯ ಸರ್ಕಾರ ಸಿದ್ದವಿದೆ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, 2017, 18 ಮತ್ತು 2019 ರ ಮೂರು ವರ್ಷಗಳ ಕ್ರೀಡಾ ಪ್ರಶಸ್ತಿ ನೀಡಲು ಆಗಿರಲಿಲ್ಲ. ಕೊರೊನಾ ಕಾರಣದಿಂದ ಸರಳವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೋವಿಡ್ ಸಂಕಷ್ಟ ನಮ್ಮ ಸಂಭ್ರಮ ಕಸಿದಿರುವುದು ಮಾತ್ರವಲ್ಲ ನಮ್ಮ ತರಬೇತಿಗೂ ಅಸಹಜ ಪರಿಸ್ಥಿತಿಗೆ ತಂದೊಡ್ಡಿದೆ. ಇಂತಹ ಸಂದರ್ಭದಲ್ಲಿಯೂ ಜೀವನ ಒತ್ತೆ ಇಟ್ಟು ಪ್ರಯತ್ನ ನಡೆಸುತ್ತಿದ್ದೀರಿ ಎಂದರು.

ನೂತನ ಪಠ್ಯ ಕ್ರಮ ಜಾರಿಗೆ: ಇದುವರೆಗೂ ಕ್ರೀಡೆ ಪಠ್ಯದ ಭಾಗವಾಗಿರಲಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿಸಿರುವುದರಿಂದ ಮನೆಗಳಲ್ಲೂ ಕ್ರೀಡೆಗೆ ಮುಕ್ತ ಅವಕಾಶ ಇದೆ. ಮುಂದಿನ ವರ್ಷದಿಂದ ನೂತನ ಪಠ್ಯ ಕ್ರಮ ಜಾರಿಗೆ ಬರುತ್ತದೆ ಎಂದು ತಿಳಿಸಿದರು.

ಕ್ರೀಡಾ ಚಟುವಟಿಕೆ ಹೆಚ್ಚಿಸಲು ಜಕ್ಕೂರಿನಲ್ಲಿ ತರಬೇತಿ ನೀಡಲಾಗುತ್ತಿದೆ. ದೇಶದಲ್ಲಿಯೇ ಅತಿ ಹೆಚ್ಚು ಸಿಂಥೆಟಿಕ್ ಕ್ರೀಡಾಂಗಣ ಹೊಂದಿರುವ ರಾಜ್ಯ ನಮ್ಮದು. 2028 ರ ಲಾಸ್ ಏಂಜಲೀಸ್ ಒಲಂಪಿಕ್ಸ್ ನಲ್ಲಿ ಭಾರತ ಪ್ರಮುಖ ಹತ್ತು ರಾಷ್ಟ್ರಗಳಲ್ಲಿ ಒಂದು ಆಗಬೇಕು ಎನ್ನುವ ಹಂಬಲ ಪ್ರಧಾನಿಯವರದ್ದಾಗಿದೆ. ಭಾರತ ಬಲವಾಗಬೇಕು. ಅದು ಇಡೀ ಭಾರತೀಯರ ಹಂಬಲವಾಗಿದೆ. 31 ಕ್ರೀಡಾ ಪಟುಗಳಿಗೆ ಏಕಲವ್ಯ, 6 ತರಬೇತುದಾರಿಗೆ ಜೀವಮಾನ ಸಾಧನೆ ಪ್ರಶಸ್ತಿ,26 ಗ್ರಾಮೀಣ ಕ್ರೀಡಾ ಪಟುಗಳಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್ ಅವರು, ರಾಷ್ಟ್ರ ನಿರ್ಮಾಣದಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ದೇಶ ಬಲಿಷ್ಠವಾಗಲು ಕ್ರೀಡೆ ಬಲಿಷ್ಠವಾಗಬೇಕು. ಕ್ರೀಡೆ ಮೂಲಕ ದೇಶದ ಆರ್ಥಿಕ ಶಕ್ತಿ ಹೆಚ್ಚಿಸಬೇಕು. ಕ್ರೀಡೆಯಲ್ಲಿ ಸಾಮರಸ್ಯ ಬೆಳೆಸಲು ಸಾಧ್ಯವಾಗುತ್ತದೆ. ಕ್ರೀಡಾಪಟುಗಳು ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.

Last Updated : Nov 2, 2020, 3:47 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.