ಕೆಆರ್ಪುರ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ ವಾಜಪೇಯಿ ಗ್ರಂಥಾಲಯವನ್ನು ಸಚಿವ ಭೈರತಿ ಬಸವರಾಜ್ ಉದ್ಘಾಟನೆ ಮಾಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ ಕೆಆರ್ ಪುರದ ವಿಜಿನಾಪುರ ವಾರ್ಡ್ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಗ್ರಂಥಾಲಯವನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಪಾಲಿಕೆ ಸದಸ್ಯ ಬಂಡೆ ಎಸ್. ರಾಜ ಸಮ್ಮುಖದಲ್ಲಿ ಉದ್ಘಾಟಿಸಿದರು.
ಓದಿ: ಇಸ್ತ್ರಿ ವೃತ್ತಿಯೊಂದಿಗೆ ಗೀತೆ ರಚನೆಯಲ್ಲೂ ಸೈ: ಹುಬ್ಬಳ್ಳಿ ವ್ಯಕ್ತಿಯ ಹಾಡು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್
ನಂತರ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಅಟಲ್ ಜೀ ಅವರಿಗೆ ಸರಿಸಾಟಿ ಯಾರೂ ಇಲ್ಲ. ಅವರ ಹೆಸರಿನಲ್ಲಿ ವಿಜಿನಾಪುರದಲ್ಲಿ ಗ್ರಂಥಾಲಯ ಮರು ನಿರ್ಮಾಣ ಮಾಡಿದ್ದು, ಈ ಗ್ರಂಥಾಲಯದಲ್ಲಿ ಎಲ್ಲಾ ಪುಸ್ತಕಗಳು ಇವೆ. ವಿಜಿನಾಪುರ ಗ್ರಾಮಸ್ಥರು ಹಾಗೂ ಯುವ ಪೀಳಿಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಾಜಪೇಯಿ ಕೀಡಾಂಗಣಕ್ಕೆ ಚಾಲನೆ ನೀಡಿದ ಲಿಂಬಾವಳಿ:
ಮಹದೇವಪುರ ಕ್ಷೇತ್ರದ ವರ್ತೂರು ವಾರ್ಡಿನ ಗುಂಜೂರಿನಲ್ಲಿ ಕಂದಾಯ ಇಲಾಖೆ ನೀಡಿರುವ ಸುಮಾರು 8 ಎಕರೆ ಜಾಗದಲ್ಲಿನ ಆಟದ ಮೈದಾನಕ್ಕೆ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಎಂದು ನಾಮಕರಣ ಮಾಡುವ ಕಾರ್ಯಕ್ಕೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.
ಅಜಾತ ಶತ್ರು, ರಾಜಕೀಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಅವರು ದೇಶದ ಅಪ್ರತಿಮ ನಾಯಕರು. ಅವರ ಹೆಸರು ಇಂದು ಈ ಭಾಗದಲ್ಲಿ ನಿರ್ಮಾಣವಾಗುವ ಕ್ರೀಡಾಂಗಣಕ್ಕೆ ನಾಮಕರಣ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಯುವಕರಿಗೆ ಪ್ರಮುಖವಾದ ಆಟದ ಮೈದಾನ ಇದಾಗಲ್ಲಿದ್ದು, ಇದಕ್ಕೆ ಯಾವುದೇ ರೀತಿಯ ಶುಲ್ಕವಿಲ್ಲದೆ ಉಪಯೋಗಿಸಬಹುದಾಗಿದೆ ಎಂದರು.
ಕ್ರೀಡಾಂಗಣಕ್ಕೆ ನೂತನ ಸಮಿತಿ ರಚಿಸಿ ಅಭಿವೃದ್ಧಿಪಡಿಸುವ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮಾಡಬೇಕಿದೆ. ಬಿಬಿಎಂಪಿ ವತಿಯಿಂದ 1 ಕೋಟಿ ರೂ. ಅನುದಾನ ಪಡೆದು ತಡೆಗೋಡೆ ನಿರ್ಮಾಣಕ್ಕೆ ನೀಡಲಾಗಿದೆ ಎಂದು ಹೇಳಿದರು.