ETV Bharat / state

ಜಾಹಿರಾತು ನೋಡಿ ಜ್ಯೋತಿಷಿಗೆ ಕರೆ ಮಾಡಿ, ಹಣದ ಜೊತೆಗೆ ಚಿನ್ನವನ್ನು ಕಳೆದುಕೊಂಡ ಸೆಕ್ಯೂರಿಟಿ ಗಾರ್ಡ್!​ - ಜೋತಿಷಿ ನಂಬಿ ಲಕ್ಷಾಂತರ ರೂ ಕಳೆದುಕೊಂಡ ಸೆಕ್ಯೂರಿಟಿ ಗಾರ್ಡ್​

ಬನಶಂಕರಿ ನಿವಾಸಿ ಅರುಣ್ ಗೌಡ ನೀಡಿದ ದೂರಿನ ಆಧಾರದ ಮೇರೆಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಕೇರಳ ಮೂಲದ ಗುರುನಾಥ್ ಭಟ್, ವಿನಾಯಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜ್ಯೋತಿಷಿಯಿಂದ ಮೋಸ
ಜ್ಯೋತಿಷಿಯಿಂದ ಮೋಸ
author img

By

Published : Feb 6, 2021, 4:29 AM IST

ಬೆಂಗಳೂರು: ಜಾಹೀರಾತು ನೋಡಿ ಜ್ಯೋತಿಷಿಯೊಬ್ಬರ ಮೊರೆ ಹೋದ ಸೆಕ್ಯೂರಿಟಿಗಾರ್ಡ್ಲ ಲಕ್ಷಕ್ಕೂ ಹೆಚ್ಚು ರೂಪಾಯಿ ಕಳೆದುಕೊಂಡು, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬನಶಂಕರಿ ನಿವಾಸಿ ಅರುಣ್ ಗೌಡ ನೀಡಿದ ದೂರಿನ ಆಧಾರದ ಮೇರೆಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಕೇರಳ ಮೂಲದ ಗುರುನಾಥ್ ಭಟ್, ವಿನಾಯಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬನಶಂಕರಿಯಲ್ಲಿ ಸೆಕ್ಯೂರಿಟಿಗಾರ್ಡ್ ಆಗಿರುವ ಅರುಣ್, ಸ್ವಂತ ಹೋಟೆಲ್ ತೆರೆಯಲು ಮುಂದಾಗಿದ್ದರು. ಉಚಿತವಾಗಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಇತ್ತೀಚೆಗೆ ಜ್ಯೋತಿಷ್ಯಾಲಯವೊಂದರ ಜಾಹೀರಾತನ್ನು ಗಮನಿಸಿದ ಆತ. ಹೋಟೆಲ್ ಆರಂಭಿಸಲು ಏನಾದರೂ ಸಮಸ್ಯೆಯಿದೆಯೇ ಎಂದು ಕೇಳಲು ಜಾಹೀರಾತಿನಲ್ಲಿದ್ದ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿಯು ತಮ್ಮನ್ನು ಕೇರಳದ ಕುಂಬಕೋಣ ಆಶ್ರಮದಲ್ಲಿ ಜ್ಯೋತಿಷಿಯಾಗಿರುವ ಗುರುನಾಥ್ ಭಟ್ ಎಂದು ಪರಿಚಯಿಸಿಕೊಂಡಿದ್ದರು. ನಂತರ ನಿನಗೆ ಸಮಸ್ಯೆಯಿದ್ದು, ಇದಕ್ಕೆ ಪರಿಹಾರ ಮಾಡಬೇಕಾಗುತ್ತದೆ. ಪರಿಹಾರ ಪೂಜೆಗೆ 20 ಸಾವಿರ ರೂ. ಖರ್ಚಾಗಲಿಗೆ, ನನ್ನ ಶಿಷ್ಯ ವಿನಾಯಕ್‌ನನ್ನು ಬೆಂಗಳೂರಿಗೆ ಕಳಿಸುತ್ತೇನೆ. ಆತನ ಕೈಯಲ್ಲಿ ಹಣ ಕೊಟ್ಟು ಕಳಿಸುವಂತೆ ಗುರುನಾಥ್ ಸೂಚಿಸಿದ್ದರು. ಅದರಂತೆ ವಿನಾಯಕ್‌ಗೆ ಅರುಣ್ ಹಣ ಕೊಟ್ಟಿದ್ದಾರೆ

ಎರಡನೇ ಬಾರಿ 60 ಸಾವಿರ ಬೇಡಿಕೆ

ಮೊದಲ ಬಾರಿ 20 ಸಾವಿರ ಕಳುಹಿಸಿಕೊಟ್ಟಿದ್ದ ಅರುಣ್​ ಗೌಡ, ಕೆಲ ದಿನಗಳ ಬಳಿಕ ಮತ್ತೆ ಗುರುನಾಥ್‌ಗೆ ಕರೆ ಮಾಡಿದಾಗ, ನಿಮಗೆ ಜಾಸ್ತಿ ಸಮಸ್ಯೆಯಾದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಪೂಜೆ ಮಾಡಿಸಬೇಕು. ಇದಕ್ಕೆ 60 ಸಾವಿರ ರೂ. ಖರ್ಚಾಗಲಿದೆ ಎಂದು ಹೇಳಿ ಮತ್ತೆ ತಮ್ಮ ಶಿಷ್ಯ ವಿನಾಯಕ್‌ನನ್ನು ಬೆಂಗಳೂರಿಗೆ ಕಳುಹಿಸಿ ಹಣ ಪಡೆದುಕೊಂಡಿದ್ದಾರೆ. 15 ದಿನದ ಬಳಿಕ ಮತ್ತೆ ಅರುಣ್ ಕರೆ ಮಾಡಿದಾಗ, ನಿನ್ನ ಏಳಿಗೆ ಸಹಿಸದೇ ಸಂಬಂಧಿಕರೆ ನಿನಗೆ ಮಾಟ ಮಾಡಿಸಿದ್ದಾರೆ. ಮಾಟ-ಮಂತ್ರ ತೆಗೆಯಲು ವಿಶೇಷ ಪೂಜೆ ಮಾಡಿಸಬೇಕು. ಇದಕ್ಕೆ 20 ಸಾವಿರ ರೂ. ಖರ್ಚಾಗುತ್ತದೆ ಎಂದು ಹೇಳಿದ್ದ ಗುರುನಾಥ್, ತಮ್ಮ ಬ್ಯಾಂಕ್ ಖಾತೆಗೆ 3ನೇ ಬಾರಿ ಹಣ ಹಾಕಿಸಿಕೊಂಡಿದ್ದಾರೆ.

4ನೇ ಬಾರಿ 10 ಗ್ರಾಮ್​ ಚಿನ್ನ ಪಡೆದ ಜ್ಯೋತಿಿಷಿ

ಮೂರು ಬಾರಿ ಹಣ ನೀಡಿದ ಮೇಲೆ ಅನುಮಾನಗೊಂಡು ಹಣ ವಾಪಾಸ್ ಕೊಡುವಂತೆ ಕೇಳಲು ಅರುಣ್ ಕರೆ ಮಾಡಿದಾಗ, ಪೂಜೆ ಕೊನೆಯ ಹಂತಕ್ಕೆ ಬಂದಿದೆ. ಪ್ರಾಣಿ ಬಲಿ ಕೊಟ್ಟು ನಿನಗೆ ಮಾಟ ಮಾಡಿಸಿರುವುದನ್ನು ತೆಗೆಯಬೇಕಿದೆ. ಇದಕ್ಕೆ 10 ಗ್ರಾಂ ಬಂಗಾರ ಬೇಕು ಎಂದು ಗುರುನಾಥ್ ಕೇಳಿದ್ದಾನೆ. ಅವರ ಮಾತಿಗೆ ಮರುಳಾದ ಅರುಣ್ ಸಹೋದರಿಯ ಕಿವಿಯೋಲೆಯನ್ನು ಕೇರಳಕ್ಕೆ ಕಳುಹಿಸಿದ್ದಾರೆ.

ಇದಾದ ಬಳಿಕ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಗುರುನಾಥ್‌ಗೆ ಕರೆ ಮಾಡಿ ಓಲೆ ಹಿಂತಿರುಗಿಸುವಂತೆ ಅರುಣ್ ಕೇಳಿಕೊಂಡಿದ್ದಾರೆ. ಓಲೆ ಹಿಂತಿರುಗಿಸಲು ಮತ್ತೆ 18 ಸಾವಿರ ರೂ. ಕೊಡುವಂತೆ ಗುರುನಾಥ್ ಬೇಡಿಕೆಯಿಟ್ಟಿದ್ದಾರೆ. ನನ್ನ ಬಳಿ 4 ಸಾವಿರ ರೂ. ಇರುವುದಾಗಿ ಹೇಳಿದಾಗ ಅದನ್ನೇ ಬ್ಯಾಂಕ್ ಖಾತೆಗೆ ಕಳಿಸುವಂತೆ ಗುರುನಾಥ್ ಸೂಚಿಸಿದ್ದರು. 4 ಸಾವಿರ ರೂ. ಕಳಿಸಿದ ಬಳಿಕ ಕಿವಿಯೋಲೆಯನ್ನೂ ಕೊಡದೇ, ಹಂತ ಹಂತವಾಗಿ ಪಡೆದ 1.4 ಲಕ್ಷ ರೂ. ಹಿಂತಿರುಗಿಸದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಅರುಣ್ ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.