ನೈರುತ್ಯ ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಸಿಸ್ಟೆಂಟ್ ಲೋಕೊ ಪೈಲಟ್, ಟೆಕ್ನಿಶಿಯನ್ ಜ್ಯೂನಿಯರ್ ಇಂಜಿನಿಯರ್ ಸೇರಿದಂತೆ ಒಟ್ಟು 713 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಅಸಿಸ್ಟೆಂಟ್ ಲೋಕೋ ಪೈಲಟ್ 588, ಟೆಕ್ನಿಶಿಯನ್ ಗ್ರೇಡ್ 1(ಸಿಗ್ನಲ್) 14, ಟೆಕ್ನಿಶಿಯನ್ ಗ್ರೇಡ್ 3 (ಬ್ಲಾಕ್ಸ್ಮಿತ್) 5, ಟೆಕ್ನಿಕ್ಷಿಯನ್ ಗ್ರೇಡ್ 3 (ವೆಲ್ಡರ್) 2, ವಿವಿಧ ವಿಭಾಗದಲ್ಲಿ ಜ್ಯೂನಿಯರ್ ಇಂಜಿನಿಯರ್ 102 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ:
ಅಸಿಸ್ಟೆಂಟ್ ಲೋಕೋ ಪೈಲಟ್: 10ನೇ ತರಗತಿ ಅಥವಾ ಐಐಟಿ ಪದವಿ ಆಗಿರಬೇಕು
ಟೆಕ್ನಿಶಿಯನ್ ಗ್ರೇಡ್ 1(ಸಿಗ್ನಲ್) ಬಿಎಸ್ಸಿ ಪದವಿ
ಟೆಕ್ನಿಶಿಯನ್ ಗ್ರೇಡ್ 3 (ಬ್ಲಾಕ್ಸ್ಮಿತ್) 10ನೇ ತರಗತಿ, ಐಟಿಟಿ
ಟೆಕ್ನಿಶಿಯನ್ ಗ್ರೇಡ್ 3 (ವೆಲ್ಡರ್) 10ನೇ ತರಗತಿ, ಐಟಿಐ
ಜ್ಯೂನಿಯರ್ ಇಂಜಿನಿಯರ್ : ಬಿಇ, ವಿವಿಧ ವಿಷಯದಲ್ಲಿ ಹುದ್ದೆಗೆ ಅನುಸಾರವಾಗಿ ಡಿಪ್ಲೊಮಾ ಪದವಿ ಹೊಂದಿರಬೇಕು
ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿದ್ದು, ಗರಿಷ್ಠ 42 ವರ್ಷ ವಯೋಮಿತಿಯನ್ನು ದಾಟಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ
ಹುದ್ದೆ ಆಯ್ಕೆ: ಈ ಹುದ್ದೆಗಳಿಗೆ ನಾಲ್ಕು ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಅಪ್ಟಿಟ್ಯೂಡ್ ಪರೀಕ್ಷೆ, ದಾಖಲಾತಿ ಪರಿಶೀಲನೆ/ ವೈದ್ಯಕೀಯ ತಪಾಸಣೆ, ಅಂತಿಮವಾಗಿ ಸಂದರ್ಶನ ನಡೆಸಲಾಗುವುದು.
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಗಸ್ಟ್ 3 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಕಡೆಯ ದಿನಾಂಕ ಸೆಪ್ಟೆಂಬರ್ 2 ಆಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು rrchubli.in ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: Job Alert: ರಾಜ್ಯ ಸರ್ಕಾರದಿಂದ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ