ETV Bharat / state

ಅವರ ಚೈತನ್ಯಕ್ಕೆ ತಕ್ಕಂತ ಖಾತೆ ಕೊಡಿ: ವಿಧಾಸಭೆಯಲ್ಲಿ ಸಿ.ಟಿ.ರವಿ ಕಾಲೆಳೆದ ರಮೇಶ್​​​ ಕುಮಾರ್​​ - ಮಾಜಿ ಸಿಎಂ ಸಿದ್ದರಾಮಯ್ಯ

ಸಚಿವ ಸಿ.ಟಿ.ರವಿಯವರಿಗೆ ಅವರ ಚೈತ್ಯನಕ್ಕೆ ತಕ್ಕಂತ ಖಾತೆ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದರು. ವಿಧಾನಸಭೆಯಲ್ಲಿ ಮಾತನಾಡಿ, ಪರೋಕ್ಷವಾಗಿ ಸಚಿವ ಸಿ.ಟಿ.ರವಿಯವರ ಕಾಳೆಳೆದರು.

Assembly_Session
ವಿಧಾಸಭೆಯಲ್ಲಿ ಸಿ.ಟಿ.ರವಿ ಕಾಲೆಳೆದ ರಮೇಶ್​ ಕುಮಾರ್​
author img

By

Published : Mar 19, 2020, 7:18 PM IST

ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರ ಖಾತೆ ಬದಲಾವಣೆ ವಿಚಾರ ವಿಧಾನಸಭೆಯಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವಿನ ಚರ್ಚೆಗೆ ಕಾರಣವಾಯಿತು.

ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಮಾಜಿ ಸ್ಪೀಕರ್​ ರಮೇಶ್‍ ಕುಮಾರ್, ದಕ್ಷ, ಚೈತನ್ಯ ಮಂತ್ರಿ ಸಿ.ಟಿ.ರವಿಯವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕ್ರೀಡಾ ಇಲಾಖೆ ಕೊಟ್ಟಿದ್ದೀರಿ. ಅವರ ಅಗಾಧ ಚೈತನ್ಯ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕಾಗಿದೆ. ಹಾಗಾಗಿ ಅನ್ಯಾಯವನ್ನು ಸರಿಪಡಿಸಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ವಿಧಾಸಭೆಯಲ್ಲಿ ಸಿ.ಟಿ.ರವಿ ಕಾಲೆಳೆದ ರಮೇಶ್​ ಕುಮಾರ್​

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿರುವುದಕ್ಕೆ ಹೆಮ್ಮೆ ಇದೆ. ಹೆಚ್ಚು ಅನುದಾನ ಕೇಳಿದ್ದೇನೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹೇಗಾದರೂ ಮಾಡಿ ಹಣಕಾಸು ಕಾತೆಯನ್ನು ಸಿ.ಟಿ.ರವಿಯವರಿಗೆ ಕೊಡಿ ಎಂದು ಮುಖ್ಯಮಂತ್ರಿಗೆ ಸಲಹೆ ನೀಡಿದರು. ಅಲ್ಲದೆ ಸಿ.ಟಿ.ರವಿ ನೀಡುತ್ತಿರುವ ಅಂಕಿ-ಅಂಶಗಳನ್ನು ಬದಲಿಸಲು ಆಗುವುದಿಲ್ಲ. ಇದು ಸರ್ಕಾರವೇ ಕೊಟ್ಟಿರುವ ಅಂಕಿ-ಅಂಶಗಳಾಗಿವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.